twitter
    For Quick Alerts
    ALLOW NOTIFICATIONS  
    For Daily Alerts

    ಬೆಂಗಳೂರಿನ ಸಂಗೀತಗಾರ ರಿಕ್ಕಿ ಕೇಜ್ ಗೆ ಗ್ರ್ಯಾಮಿ ಪ್ರಶಸ್ತಿ

    By ಜೇಮ್ಸ್ ಮಾರ್ಟಿನ್
    |

    ಬೆಂಗಳೂರು ಮೂಲದ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಹಾಗೂ ನೀಲಾ ವಾಸ್ವಾನಿ ಅವರು 57ನೇ ಗ್ರ್ಯಾಮಿ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದಾರೆ.

    ಭಾರತದ ರಿಕ್ಕಿ ಹಾಗೂ ದಕ್ಷಿಣ ಆಫ್ರಿಕಾದ ಕೊಳಲುವಾದಕ ವೊಟರ್ ಕೆಲ್ಲರ್ ಮನ್ ಅವರ ಹೊಸ ಆಲ್ಬಂ ‘ವಿಂಡ್ಸ್ ಆಫ್ ಸಂಸಾರ‘ ಗ್ರ್ಯಾಮಿ ಪ್ರಶಸ್ತಿ ಪಡೆದುಕೊಂಡಿದೆ. ಬೆಸ್ಟ್​ ನ್ಯೂ ಏಜ್​ ಆಲ್ಬಂ ವಿಭಾಗದಲ್ಲಿ ಕ್ರೇಜ್​​ ಆಲ್ಬಂ ಸ್ಪರ್ಧಿಸಿತ್ತು.

    ಕೇಜ್ ಅವರ ಸಂಗೀತ ಸಂಯೋಜನೆಯ ಭಾಗವಾಗಿರುವ ಬೆಳಗಾವಿ ಮೂಲದ ಕೀರ್ತಿ ನಾರಾಯಣ್ ಅವರು ಕೀ ಬೋರ್ಡ್ ವಾದಕ ಹಾಗೂ ಸಂಗೀತ ಪರಿಕರ ಸಂಯೋಜನೆಯ ಹೊಣೆಹೊತ್ತಿದ್ದು ಇನ್ನೊಂದು ವಿಶೇಷ.

    ಸುಮಾರು 10 ವರ್ಷಗಳ ಪರಿಶ್ರಮ ಈಗ ಫಲ ನೀಡುತ್ತಿದೆ. ರಿಕ್ಕಿ ಅವರ ಸ್ವರಜ್ಞಾನಕ್ಕೆ ತಕ್ಕಂತೆ ಸಂಯೋಜನೆ ಮಾಡುವ ಹೊಣೆ ನಮ್ಮ ಮೇಲಿತ್ತು. ನಾನು ಅದನ್ನು ಉಳಿಸಿಕೊಂಡ ನಂಬಿಕೆಯಿದೆ ಎಂದು ಕೀರ್ತಿ ಹೇಳಿದ್ದಾರೆ.

    Two Indians Ricky Kej and Neela Vaswani win 57th Annual Grammy Awards

    ರಿಕ್ಕಿ 3 ಸಾವಿರಕ್ಕೂ ಅಧಿಕ ರೇಡಿಯೋ ಹಾಗೂ ಟಿವಿ ಜಿಂಗಲ್ಸ್ ಗೆ ಸಂಗೀತ ನೀಡಿದವರು. 2011ರ ವಿಶ್ವಕಪ್ ಉದ್ಘಾಟನಾ ಸಮಾರಂಭಕ್ಕೂ ರಿಕ್ಕಿದೇ ಮ್ಯೂಸಿಕ್. ಸುಮಾರು 13ಕ್ಕೂ ಅಧಿಕ ಅಲ್ಬಂ ಹೊರ ತಂದಿರುವ ರಿಕ್ಕಿ ಈಗ 57ನೇ ಗ್ರ್ಯಾಮಿ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ್ದಾರೆ.

    ಭಾರತ ಮತ್ತು ಆಫ್ರಿಕಾ ಸಂಗೀತಗಾರರ ಜೊತೆಗಾರಿಕೆಯಲ್ಲಿ ಮೂಡಿಬಂದಿರುವ 'ವಿಂಡ್ಸ್‌ ಆಫ್ ಸಂಸಾರ್‌' ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಕುರಿತಾದ ಫ್ಯೂಶನ್‌ ಹಾಡುಗಳನ್ನು ಒಳಗೊಂಡಿದೆ. ವಿಂಡ್ಸ್ ಆಫ್ ಸಂಸಾರ ಗೀತೆಯ ತುಣುಕು ಇಲ್ಲಿ ನೋಡಿ...

    2002ರಲ್ಲಿ ಸಂಗೀತ ಜಗತ್ತಿನಲ್ಲಿ ಸಿತಾರ್‌ ವಾದನದ ಮೂಲಕ ತಮ್ಮದೇ ಛಾಪು ಮೂಡಿಸಿರುವ ಪಂಡಿತ್‌ ರವಿಶಂಕರ್‌ಗೆ ಸಂಗೀತ ಕ್ಷೇತ್ರದ ಹೆಮ್ಮೆಯ ಗ್ರ್ಯಾಮಿ ಪ್ರಶಸ್ತಿ ಸಂದಿದ್ದನ್ನು ಇಲ್ಲಿ ಸ್ಮರಿಸಬಹುದು. ನಂತರ ತಬಲಾ ಮಾಂತ್ರಿಕ ಝಾಕೀರ್ ಹುಸೇನ್, ವಿಶ್ವ ಮೋಹನ್, 2010ರಲ್ಲಿ ಎ.ಆರ್ ರೆಹಮಾನ್ ಈ ಪ್ರಶಸ್ತಿ ಗೆದ್ದಿದ್ದರು.

    Two Indians Ricky Kej and Neela Vaswani win 57th Annual Grammy Awards

    ನೀಲಾಗೆ ಗ್ರ್ಯಾಮಿ: ನೀಲಾ ವಾಸ್ವಾನಿ ಅವರು ಮಕ್ಕಳ ವಿಭಾಗದಲ್ಲಿ ಗ್ರ್ಯಾಮಿ ಪ್ರಶಸ್ತಿ ಬಾಚಿಕೊಂಡಿದ್ದಾರೆ. I Am Malala: How One Girl Stood Up For Education And Changed The World (Malala Yousafzai) ಸಂಗೀತ ಆಲ್ಬಂನ ಕಥಾ ರೂಪಕ್ಕೆ ನೀಲಾ ದನಿಗೂಡಿಸಿದ್ದರು.

    ಗ್ರ್ಯಾಮಿ ಪ್ರಶಸ್ತಿ ವಿಜೇತ ಸಿತಾರ್ ವಾದಕ ದಿವಂಗತ ಪಂಡಿತ್‌ ರವಿಶಂಕರ್‌ ಅವರ ಪುತ್ರಿ ಅನೌಷ್ಕ ಶಂಕರ್ ಅವರ ಆಲ್ಬಂ ಟ್ರೇಸಸ್ ಆಫ್ ಯೂ ಕೂಡಾ ಈ ಬಾರಿ ವರ್ಲ್ಡ್ ಮ್ಯೂಸಿಕ್ ಆಲ್ಬಂ ಕೆಟಗರಿಯಲ್ಲಿ ನಾಮನಿರ್ದೇಶನಗೊಂಡಿತ್ತು. ಅದರೆ, ಏಂಜಲಿಕ್ ಕಿಜೋ ಅವರ ಈವ್ ಈ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿತು.

    English summary
    Bengaluru-based musician Ricky Kej’s collaborated album Winds Of Samsara won the Best New Age Album trophy at the 57th Annual Grammy Awards here.Another Indian artist to make it big at the awards this year was Neela Vaswani. She won the trophy in the Best Children’s Album category for I Am Malala: How One Girl Stood Up For Education And Changed The World (Malala Yousafzai)
    Monday, February 9, 2015, 18:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X