ಗಾಯಕಿ ಲತಾ ಮಂಗೇಶ್ಕರ್ ಆರೋಗ್ಯ ಈಗ ಹೇಗಿದೆ?

ಭಾರತದ ಮೇರು ಗಾಯಕಿ ಲತಾ ಮಂಗೇಶ್ಕರ್ ಕಳೆದ 24 ದಿನಗಳಿಂದಲೂ ಆಸ್ಪತ್ರೆಯಲ್ಲಿದ್ದಾರೆ. ಕೊರೊನಾ ಕಾರಣದಿಂದ ಲತಾ ಮಂಗೇಶ್ಕರ್ ಅವರನ್ನು ಜನವರಿ 08 ರಂದು ಮುಂಬೈನ ಬೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.

92 ವರ್ಷ ವಯಸ್ಸಿನ ಲತಾ ಮಂಗೇಶ್ಕರ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ ದಿನದಿಂದಲೂ ಅವರನ್ನು ವೆಂಟಿಲೇಟರ್‌ ಸಹಾಯದಲ್ಲಿ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಲತಾ ಅವರ ಆರೋಗ್ಯ ತೀರ ಕ್ಷೀಣಿಸಿದೆ, ಆರೋಗ್ಯವಾಗಿ ಅವರು ಆಸ್ಪತ್ರೆಯಿಂದ ಹೊರಗೆ ಬರುವುದು ಅಸಾಧ್ಯ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಈಗ ಲತಾ ಅಭಿಮಾನಿಗಳಿಗೆ ನೆಮ್ಮದಿಯ ಸುದ್ದಿಯೊಂದು ಆಸ್ಪತ್ರೆಯಿಂದ ಬಂದಿದೆ.

ಲತಾ ಮಂಗೇಶ್ಕರ್‌ಗೆ ಅಳವಡಿಸಲಾಗಿದ್ದ ವೆಂಟಿಲೇಟರ್ ಅನ್ನು ತೆಗೆದಿದ್ದು, ಲತಾ ಮಂಗೇಶ್ಕರ್ ಅವರು ಸ್ವಾಭಾವಿಕವಾಗಿ ಉಸಿರಾಡುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾತನಾಡಿರುವ ಲತಾ ಮಂಗೇಶ್ಕರ್ ಅವರಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಪ್ರತಿತ್ ಸಂಭಾನಿ, ''ಲತಾ ಮಂಗೇಶ್ಕರ್ ಅವರಿಗೆ ಅಳವಡಿಸಲಾಗಿದ್ದ ವೆಂಟಿಲೇಟರ್‌ ಅನ್ನು ತೆಗೆಯಲಾಗಿದೆ. ಅವರ ಆರೋಗ್ಯದಲ್ಲಿ ತುಸು ಸುಧಾರಣೆ ಕಂಡು ಬಂದ ಕಾರಣ ನಾವು ವೆಂಟಿಲೇಟರ್ ತೆಗೆದಿದ್ದೇವೆ'' ಎಂದಿದ್ದಾರೆ.

Update On Singer Lata Mangeshkars Health
''ಕಳೆದ ಎರಡೂವರೆ ದಿನಗಳಿಂದ ಲತಾ ಮಂಗೇಶ್ಕರ್ ವೆಂಟಿಲೇಟರ್‌ ಸಹಾಯದಲ್ಲಿಲ್ಲ. ವೆಂಟಿಲೇಟರ್ ತೆಗೆದಿದ್ದೇವಾದರೂ ಅವರನ್ನು ಇನ್ನೂ ತೀವ್ರ ನಿಗಾ ಘಟಕದಲ್ಲಿಯೇ ಇರಲಿಸಲಾಗಿದೆ. ಅಲ್ಲಿಯೇ ಅವರಿಗೆ ಚಿಕಿತ್ಸೆ ಮುಂದುವರೆಸಿದ್ದೇವೆ. ಲತಾ ಮಂಗೇಶ್ಕರ್ ಅವರ ಆರೋಗ್ಯ ಪರಿಸ್ಥಿತಿ ಮತ್ತು ವಯಸ್ಸು ಅವರನ್ನು ಐಸಿಯುವಿನಲ್ಲಿಯೇ ಉಳಿಸಿಕೊಳ್ಳುವಂತೆ ಮಾಡಿದೆ'' ಎಂದಿದ್ದಾರೆ ವೈದ್ಯ ಪ್ರತಿತ್ ಸಂಭಾನಿ.

ಕೆಲವು ದಿನಗಳ ಹಿಂದೆ ಲತಾ ಮಂಗೇಶ್ಕರ್ ಆರೋಗ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳು ಹರಿದಾಡಿದ್ದವು. ಲತಾ ಮಂಗೇಶ್ಕರ್ ನಿಧನ ಹೊಂದಿದರೆಂದು ಕೆಲವರು ಸಂತಾಪ ಸಹ ಸೂಚಿಸಿದ್ದರು. ಆಗ ಕುಟುಂಬ ಸದಸ್ಯರು ಅಭಿಮಾನಿಗಳಲ್ಲಿ, ಸಾರ್ವಜನಿಕರಲ್ಲಿ ಮನವಿ ಮಾಡಿ ಲತಾ ಮಂಗೇಶ್ಕರ್ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಹರಡಬಾರದೆಂದು ಮನವಿ ಮಾಡಿದ್ದರು.

ಲತಾ ಮಂಗೇಶ್ಕರ್‌ ಅವರನ್ನು ಜನವರಿ 08ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಕೋವಿಡ್‌ ನಿಂದಾಗಿ ನ್ಯುಮೋನಿಯಾ ಆಗಿತ್ತು. ಇದು ಆತಂಕಕ್ಕೆ ಕಾರಣವಾಗಿತ್ತು. ಆದರೆ ಈಗ ವೈದ್ಯರು ಹೇಳಿರುವಂತೆ ಲತಾ ಅವರ ಆರೋಗ್ಯದಲ್ಲಿ ತುಸು ಚೇತರಿಕೆ ಕಂಡು ಬಂದಿದೆ. ಲತಾ ಮಂಗೇಶ್ಕರ್ 2019ರಲ್ಲಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. 2019ರ ನವೆಂಬರ್‌ನಲ್ಲಿ ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಲತಾ ಮಂಗೇಶ್ಕರ್ ಅವರ ಸಹೋದರಿ ವೈರಲ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿಸಿದ್ದರು. 2021ರ ಸೆಪ್ಟೆಂಬರ್‌ ತಿಂಗಳಲ್ಲಿ ಲತಾ ಮಂಗೇಶ್ಕರ್ 92ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಕೇವಲ ಆಪ್ತರಿಗಷ್ಟೇ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಭಾರತ ರತ್ನ ಲತಾ ಮಂಗೇಶ್ಕರ್‌ ಅವರಿಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದರು.

ಗಾಯಕಿ ಲತಾ ಮಂಗೇಶ್ಕರ್, ಸೆಪ್ಟೆಂಬರ್ 28, 1929ರಲ್ಲಿ ಜನಿಸಿದರು. ಭಾರತದ ಹಲವು ಭಾಷೆಗಳಲ್ಲಿ ಲತಾ ಮಂಗೇಶ್ಕರ್ ಅವರು ಹಾಡಿದ್ದಾರೆ. ಹಿಂದಿ ಭಾಷೆಯಲ್ಲಿ ಅತೀ ಹೆಚ್ಚು ಹಾಡುಗಳನ್ನು ಹಾಡಿರುವ ಗಾಯಕಿ ಕನ್ನಡದಲ್ಲಿಯೂ ಒಂದು ಹಾಡನ್ನು ಹಾಡಿದ್ದಾರೆ. 1967ರಲ್ಲಿ ತೆರೆಕಂಡ 'ಕ್ರಾಂತಿ ವೀರ ಸಂಗೊಳ್ಳಿರಾಯಣ್ಣ' ಸಿನಿಮಾದಲ್ಲಿ 'ಬೆಳ್ಳನೆ ಬೆಳಗಾಯಿತು' ಎಂಬ ಹಾಡನ್ನು ಹಾಡಿದ್ದಾರೆ. ಇದು ಲತಾ ಮಂಗೇಶ್ಕರ್ ಕನ್ನಡದಲ್ಲಿ ಹಾಡಿದ ಏಕೈಕ ಹಾಡು.

More from Filmibeat

English summary
Here is an update on legendary singer Lata Mangeshkar's health. Doctor says Lata Mangeshkar off from Ventilator said her doctor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X