Kabzaa Third Song : ಕಬ್ಜ ಚಿತ್ರದ 3ನೇ ಹಾಡು ರಿಲೀಸ್; ಉಪ್ಪಿ ಮೇಲೆ ಸುರ್ ಸುರ್ ಸುರ್‌ಬತ್ತಿ ಬಿಟ್ಟ ಬಸಣ್ಣಿ!

ಸೆಟ್ಟೇರಿದಾಗಿನಿಂದಲೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಕಬ್ಜ ಚಿತ್ರ ಇದೀಗ ಹಾಡುಗಳನ್ನು ಒಂದೊಂದಾಗಿ ಬಿಡುಗಡೆ ಮಾಡುವ ಮೂಲಕ ಹೈಪ್ ಅನ್ನು ದುಪ್ಪಟ್ಟುಗೊಳಿಸುತ್ತಿದೆ. ತನ್ನ ಟೀಸರ್ ಮೂಲಕ ಸಿನಿ ರಸಿಕರನ್ನು ದೊಡ್ಡ ಮಟ್ಟದಲ್ಲಿ ಸೆಳೆದಿದ್ದ ಕಬ್ಜ ಚಿತ್ರದ ಮೂರನೇ ಹಾಡು ಇಂದು ( ಫೆಬ್ರವರಿ 26 ) ಶಿಡ್ಲಘಟ್ಟದಲ್ಲಿ ನಡೆಯುತ್ತಿರುವ ಆಡಿಯೊ ಬಿಡುಗಡೆ ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡಿದೆ. ಹಾಗೆಯೇ ಆನಂದ್ ಆಡಿಯೊ ಯುಟ್ಯೂಬ್ ಚಾನೆಲ್‌ನಲ್ಲೂ ಸಹ ಹಾಡು ಬಿಡುಗಡೆಯಾಗಿದೆ.
ಈ ಹಾಡನ್ನು ಬಿಡುಗಡೆ ಮಾಡುವ ಮುನ್ನ 'ದ ಸೆಲೆಬ್ರೇಷನ್ ಸಾಂಗ್ ಆಫ್ ದ ಇಯರ್' ಎಂದು ಪ್ರಚಾರ ಮಾಡಿದ್ದ ಚಿತ್ರತಂಡ ಮಾತನ್ನು ಉಳಿಸಿಕೊಂಡಿದೆ. ನಿಜಕ್ಕೂ ಕೇಳುಗರಿಗೆ ಹಾಗೂ ನೋಡುಗರಿಗೆ ಈ ಹಾಡು ಒಂದು ಸಂಭ್ರಮವೇ. ರವಿ ಬಸ್ರೂರು ಹಾಡಿಗಾಗಿ ಹಾಕಿರುವ ಟ್ಯೂನ್ ವಿಭಿನ್ನ ಫೀಲ್ ನೀಡುತ್ತಿದ್ದು, ಲಿರಿಕಲ್ ವಿಡಿಯೊ ಕಟ್ ಸಹ ಚೆನ್ನಾಗಿದೆ.
ಚುಮ್ ಚುಮ್ ಚಳಿ ಚಳಿ ಎಂಬ ಸಾಲಿನೊಂದಿಗೆ ಶುರುವಾಗುವ ಈ ಹಾಡಿನಲ್ಲಿ ಈ ಹಿಂದೆ ಯಜಮಾನ ಚಿತ್ರದಲ್ಲಿ ಬಸಣ್ಣಿಯಾಗಿ ಹೆಜ್ಜೆ ಹಾಕಿದ್ದ ನಟಿ ತಾನ್ಯಾ ಹೋಪ್ ಸೊಂಟ ಬಳುಕಿಸಿದ್ದಾರೆ. ಉಪೇಂದ್ರ ವಿಂಟೇಜ್ ಸೂಟ್ ಧರಿಸಿ ಬಿಂದಾಸ್ ಸ್ಟೆಪ್ಸ್ ಹಾಕಿದ್ದಾರೆ. ಪ್ರಮೋದ್ ಮರವಂತೆ ಈ ಹಾಡಿನ ಸಾಹಿತ್ಯ ಬರೆದಿದ್ದು, ಏರಾ ಉಡುಪಿ, ಮನೀಶ್ ದಿನಕರ್ ಹಾಗೂ ಸಂತೋಷ್ ವೆಂಕಿ ದನಿ ನೀಡಿದ್ದಾರೆಸಿನಿ
ಇನ್ನು ಲಿರಿಕಲ್ ವಿಡಿಯೊದಲ್ಲಿ ತಾನ್ಯಾ ಹೋಪ್ ಥೇಟ್ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ರೀತಿಯೇ ಒಂದೆರಡು ಕಡೆ ಕಾಣಿಸುತ್ತಿದ್ದು, ನಿರ್ದೇಶಕ ಆರ್ ಚಂದ್ರು ಅವರ ಈ ಆಯ್ಕೆಯೂ ಪಕ್ಕಾ ಕೆಲಸ ನಿರ್ವಹಿಸಿದೆ. ತೆಲುಗಿನ ಜಾನಿ ಮಾಸ್ಟರ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ರಾಜಕುಮಾರ, ನಟ ಸಾರ್ವಭೌಮ ಹಾಗೂ ಯುವರತ್ನ ಮತ್ತು ಸುದೀಪ್ ನಟನೆಯ ವಿಕ್ರಾಂತ್ ರೋಣ ಚಿತ್ರದ ರಾರಾ ರಕ್ಕಮ್ಮ ಹಾಡಿನ ಬಳಿಕ ಮತ್ತೊಮ್ಮೆ ಈ ಹಾಡಿನ ಮೂಲಕ ಕನ್ನಡದ ಹಾಡಿಗೆ ನೃತ್ಯ ಸಂಯೋಜಿಸಿದ್ದಾರೆ.
ಉಪ್ಪಿ ಡಿಫರೆಂಟ್ ಸ್ಟೆಪ್ಸ್, ತಾನ್ಯಾ ಹೋಪ್ ಗ್ಲಾಮರಸ್ ಲುಕ್, ರವಿ ಬಸ್ರೂರು ಸಂಗೀತ ಲಿರಿಕಲ್ ವಿಡಿಯೊ ಮೂಲಕವೇ ಸಿನಿ ರಸಿಕರ ಮನ ಗೆದ್ದಿದ್ದು, ಇನ್ನು ವಿಡಿಯೊ ಸಾಂಗ್ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಎದೆಗೆ ಸುರ್ ಸುರ್ ಸುರ್ ಬತ್ತಿ ಇಡುವುದು ಪಕ್ಕ. ಚಿತ್ರ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಮಾರ್ಚ್ 17ರಂದು ತೆರೆಗೆ ಬರಲಿದೆ.


Click it and Unblock the Notifications











