ಕುಣಿಸೋಕೆ ಬಂದ ಜಾನಿ ಮಾಸ್ಟರ್‌ನ ಕುಣಿಸಿದ ರಿಯಲ್ ಸ್ಟಾರ್: ಉಪ್ಪಿ ಸಿಗ್ನೇಚರ್ ಸ್ಟೆಪ್ ವೈರಲ್
ಆರ್. ಚಂದ್ರು ನಿರ್ದೇಶನದ 'ಕಬ್ಜ' ಸಿನಿಮಾ ಸಾಂಗ್ ಶೂಟಿಂಗ್ ಭರದಿಂದ ಸಾಗ್ತಿದೆ. ನೈಸ್ ರೋಡ್ ಬಳಿ ಭರ್ಜರಿ ಸೆಟ್ ಹಾಕಿ ಸ್ಪೆಷಲ್ ನಂಬರ್ ಸೆರೆ ಹಿಡಿಯಲಾಗ್ತಿದೆ. ಜಾನಿ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ, ತಾನ್ಯಾ ಹೋಪ್ ಬಿಂದಾಸ್ ಸ್ಟೆಪ್ ಹಾಕ್ತಿದ್ದಾರೆ.
ರವಿ ಬಸ್ರೂರು ಟ್ಯೂನ್ ಹಾಕಿರೋ ಸಾಂಗ್ ಉಪ್ಪಿ ಡಿಫ್‌ರೆಂಟ್ ಸ್ಟೈಲ್‌ನಲ್ಲಿ ಡ್ಯಾನ್ಸ್ ಮಾಡ್ತಿದ್ದಾರೆ. ಸದ್ಯ ಸಾಂಗ್ ಶೂಟಿಂಗ್‌ನ ಸಣ್ಣ ಝಲಕ್ ರಿಲೀಸ್ ಆಗಿದೆ. ಅದರಲ್ಲಿ ಕೊರಿಯೋಗ್ರಫರ್ ಜಾನಿ ಮಾಸ್ಟರ್ ರಿಯಲ್ ಸ್ಟಾರ್ ಉಪ್ಪಿಗೆ ಸ್ಟೆಪ್ಸ್ ಹೇಳಿಕೊಡ್ತಿರೋದನ್ನ ನೋಡಬಹುದು. ಅಷ್ಟೇ ಆಗಿದ್ದರೆ ಪರವಾಗಿಲ್ಲ. ಮಾಸ್ಟರ್ ಹೇಳಿಕೊಟ್ಟ ಡ್ಯಾನ್ಸ್ ಮಾಡೋದನ್ನು ಕಲೀತಾ ಕಲೀತಾ ತಮ್ಮ ಸಿಗ್ನೇಚರ್ ಸ್ಟೆಪ್ ಅನ್ನು ಮಾಸ್ಟರ್‌ಗೆ ಉಪೇಂದ್ರ ಹೇಳಿಕೊಟ್ಟಿದ್ದಾರೆ. ಜಾನಿ ಅದನ್ನು ಅಷ್ಟೇ ಮಜವಾಗಿ ಮಾಡಿ ಎಂಜಾಯ್ ಮಾಡಿದ್ದಾರೆ.
ಈ ಸಣ್ಣ ವಿಡಿಯೋ ಝಲಕ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಉಪೇಂದ್ರ ಸಿಕ್ಕಾಪಟ್ಟೆ ಸ್ಟೈಲಿಶ್ ಲುಕ್‌ನಲ್ಲಿ ದರ್ಶನ ಕೊಟ್ಟಿದ್ದಾರೆ. ಒಂದಷ್ಟು ಡ್ಯಾನ್ಸರ್ ರಿಯಲ್ ಸ್ಟಾರ್ ಸ್ಟೆಪ್ಸ್‌ಗೆ ಸಾಥ್ ಕೊಟ್ಟಿದ್ದಾರೆ. ಅಂದಹಾಗೆ ಫೆಬ್ರವರಿ 26ಕ್ಕೆ ಶಿಡ್ಲಘಟ್ಟದ ಜೂನಿಯರ್ ಕಾಲೇಜ್ ಮೈದಾನದಲ್ಲಿ ಆಡಿಯೋ ಲಾಂಚ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ. ಚಂದ್ರು ಬಹುಕೋಟಿ ವೆಚ್ಚದಲ್ಲಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 'ಕಬ್ಜ' ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಚಿತ್ರದಲ್ಲಿ ಉಪ್ಪಿ ಜೋಡಿಯಾಗಿ ಶ್ರಿಯಾ ಶರಣ್ ನಟಿಸಿದ್ದಾರೆ.

'ಕಬ್ಜ' ರೆಟ್ರೋ ಸ್ಟೈಲ್ ಗ್ಯಾಂಗ್‌ಸ್ಟರ್ ಸಿನಿಮಾ ಆಗಿದ್ದು, ಈಗಾಗಲೇ ಚಿತ್ರದ ಟೀಸರ್ ಹಾಗೂ ಒಂದು ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಚಿತ್ರದಲ್ಲಿ ಕಿಚ್ಚ ಸುದೀಪ್ ಗೆಸ್ಟ್ ಅಪಿಯರೆನ್ಸ್ ಮಾಡ್ತಿದ್ದಾರೆ. ಈಗಾಗಲೇ ಸಿನಿಮಾ ಶೂಟಿಂಗ್ ಮುಕ್ತಾಯವಾಗಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೀತಿದೆ. ಮಾರ್ಚ್ 17ಕ್ಕೆ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಕಬ್ಜ' ಸಿನಿಮಾ ತೆರೆಗೆ ಬರಲಿದೆ. ಅದಕ್ಕೆ ತಕ್ಕಂತೆ ಪ್ರಮೋಷನ್, ರಿಲೀಸ್ ಪ್ಲ್ಯಾನ್ ನಡೀತಿದೆ.


Click it and Unblock the Notifications











