ಗುರು.. ನನ್ ಹುಡುಗಿ ಹೇಳಿದ್ದೇನು ಗೊತ್ತಾ...? ಓ ನಲ್ಲ, ನೀನಲ್ಲ.. ಕರಿಮಣಿ ಮಾಲೀಕ ನೀನಲ್ಲ: ಲೈನ್ಸ್ ಸಕತ್ ವೈರಲ್!
ಈಗೇನಿದ್ದರು ಸೋಶಿಯಲ್ ಮೀಡಿಯಾ ಕಾಲ. ಯಾವಾಗ ಯಾರು ಹೇಗೆ ಫೇಮಸ್ ಆಗ್ತಾರೆ ಅನ್ನೋದೆ ಗೊತ್ತಾಗಲ್ಲ. ರೀಲ್ಸ್‌ಗಳ ಲೋಕದಲ್ಲಿ ನಾವಿದ್ದೇವೆ. ಹಾಡುಗಳು.. ಹಾಡಿನ ಒಂದೊಂದು ಸಾಲು ಕೂಡ ಒಮ್ಮೆಮ್ಮೆ ಸಕತ್ ಹಿಟ್ ಆಗುತ್ತವೆ. ಈಗ ಸದ್ಯ ಇನ್‌ಸ್ಟಾಗ್ರಾಮ್‌ನಲ್ಲಿ ಸಕತ್ ವೈರಲ್ ಆಗುತ್ತಿರುವುದು "ಓ ನಲ್ಲ, ನೀನಲ್ಲ.. ಕರಿಮಣಿ ಮಾಲೀಕ ನೀನಲ್ಲ".
ಎಸ್.... 1999ರಲ್ಲಿ ಬಿಡುಗಡೆಯಾದ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಕನ್ನಡ ಸಿನಿಮಾ 'ಉಪೇಂದ್ರ' ಬಿಡುಗಡೆಯಾಗಿತ್ತು. 1999ರ ಅಕ್ಟೋಬರ್ 22ಕ್ಕೆ ಬಿಡುಗಡೆಯಾದ ಈ ಸಿನಿಮಾ ಸಕತ್ ಹಿಟ್ ಆಗಿತ್ತು. ನಟಿ ಪ್ರೇಮಾ, ರವೀನಾ ಟಂಡನ್, ದಾಮಿನಿ ಮೂವರು ನಾಯಕಿಯರಾಗಿದ್ದ ಇದರ ಹಾಡುಗಳು ಕೂಡ ಭಾರಿ ಸದ್ದು ಮಾಡಿದ್ದವು. ಈಗ ಮತ್ತೆ ಈ ಸಿನಿಮಾದ 'ಏನಿಲ್ಲ.. ಏನಿಲ್ಲ..' ಹಾಡು ಸಕತ್ ವೈರಲ್ ಆಗುತ್ತಿದೆ.

ಮತ್ತೆ ಸೋಶಿಯಲ್ ಮಿಡಿಯಾದಲ್ಲಿ ಓ ನಲ್ಲ, ನೀನಲ್ಲ.. ಕರಿಮಣಿ ಮಾಲೀಕ ನೀನಲ್ಲ!
ಇನ್‌ಸ್ಟಾಗ್ರಾಮ್‌ನಲ್ಲಿ ಉತ್ತರ ಕರ್ನಾಟಕ ಮೂಲದ ಯುವಕ ಕನಕ ಕೋಟಿ 'ಉಪೇಂದ್ರ' ಸಿನಿಮಾದ ಏನಿಲ್ಲ ಏನಿಲ್ಲ ಹಾಡಿನ ಓ ನಲ್ಲ, ನೀನಲ್ಲ.. ಕರಿಮಣಿ ಮಾಲೀಕ ನೀನಲ್ಲ ಸಾಲು ಬಳಸಿ ಡೈಲಾಗ್ ಹೊಡೆದು ರೀಲ್ಸ್ ಹಾಕಿದ್ದರು. ತಾನು ಪ್ರೀತಿಸಿದ ಹುಡುಗಿ ಕೈ ಕೊಟ್ಟು ಹೋದಾಗ ಆಕೆ ಹೇಳಿದ ಮಾತುಗಳು ಎಂದು ಹೇಳಿ ಈ ರೀಲ್ಸ್ ಪೋಸ್ಟ್ ಮಾಡಿದ್ದರು. ಇದು ಸಕತ್ ವೈರಲ್ ಆಗುತ್ತಿದೆ.
ಲವ್ ಪೇಲ್ಯೂರ್ ಆದವರು.. ಪ್ರೀತಿಸಿದ ಹುಡುಗಿ ಸಿಗದೆ ನೊಂದವರು ಎಲ್ಲರೂ ಇದಕ್ಕೆ ರೀಲ್ಸ್ ಮಾಡುತ್ತಿದ್ದಾರೆ. ಕನಕ ಕೋಟಿ ಅವರ ಒರಿಜಿನಲ್ ಡೈಲಾಗ್ ಈಗ ರೀಲ್ಸ್ ರೂಪದಲ್ಲಿ ಕನ್ನಡಿಗರ ಮನೆಗಳನ್ನು ತಲುಪುತ್ತಿದೆ. ಇದರ ಜೊತೆಗೆ ಉಪೇಂದ್ರ ಸಿನಿಮಾದ 'ಏನಿಲ್ಲ...ಏನಿಲ್ಲ' ಹಾಡಿನ ಸಕತ್ ವೈರಲ್ "ಓ ನಲ್ಲ, ನೀನಲ್ಲ.. ಕರಿಮಣಿ ಮಾಲೀಕ ನೀನಲ್ಲ" ಸಾಲು ಸಕತ್ ಸದ್ದು ಮಾಡುತ್ತಿದೆ.
ಈಗಾಗಲೇ ಈ ಸಾಲುಗಳಿಗೆ ಸಾವಿರಾರು ಮಂದಿ ರೀಲ್ಸ್ ಮಾಡಿದ್ದಾರೆ. ಈ ವಿಡಿಯೋವನ್ನು ವೈರಲ್ ಮಾಡಿದ್ದಾರೆ. ಕನಕ ಕೋಟಿ ಅವರ ಒರಿಜಿನಲ್ ವಿಡಿಯೋಗೆ 3.2 ಮಿಲಿಯನ್ ವೀವ್ಸ್ ಬಂದಿದೆ. ಆದರೆ, ವಿಡಿಯೋ ವೈರಲ್ ಅದ ನಂತರ ಇವರು ಹಂಚಿಕೊಂಡಿರುವ ಇದೇ ವಿಡಿಯೋಗೆ ಮಿಲಿಯನ್‌ಗಟ್ಟಲೆ ವೀವ್ಸ್ ಬರುತ್ತಿದೆ. ಜೊತೆಗೆ ರೀಲ್ಸ್ ವೈರಲ್ ಮಾಡಿದ ಜನರಿಗೆ ಧನ್ಯವಾದ ಹೇಳಿರುವ ವಿಡಿಯೋ 6.4 ಮಿಲಿಯನ್ಸ್ ವೀವ್ಸ್ ಬಂದಿದೆ.

ಉಪೇಂದ್ರ ಸಿನಿಮಾ 'ಏನಿಲ್ಲ ಏನಿಲ್ಲ' ಹಾಡಿನ ಲಿರೀಕ್ಸ್ ಹೀಗಿದೆ
ಏನಿಲ್ಲ ಏನಿಲ್ಲ, ನಿನ್ನ ನನ್ನ ನಡುವೆ ಏನಿಲ್ಲ
ನಿಜದಂತಿರುವ ಸುಳ್ಳಲ್ಲ, ಸುಳ್ಳುಗಳೆಲ್ಲ ನಿಜವಲ್ಲ
ಸುಳ್ಳಿನ ನಿಜವು ಸುಳ್ಳಲ್ಲ
ಏನಿಲ್ಲ ಏನಿಲ್ಲ, ಏನೇನಿಲ್ಲ
ಕಳೆದ ದಿನಗಳೇನೂ ಇಲ್ಲ
ನೆನಪುಗಳಲಿ ಏನೇನಿಲ್ಲ
ಉತ್ತರ, ದಕ್ಷಿಣ, ಸೇರಿಸೋ ದಿಂಬಲಿ ನೀನಿಲ್ಲ
ಪ್ರಶ್ನೆಗೆ, ಉತ್ತರ, ಹುಡುಕಿದರೆ ಏನೇನಿಲ್ಲ
ಕೆದಕಿದರೆ ಏನೇನಿಲ್ಲ
ಏನಿಲ್ಲ ಏನಿಲ್ಲ, ನಿನ್ನ ನನ್ನ ನಡುವೆ ಏನಿಲ್ಲ, ಏನೇನಿಲ್ಲ
ಮನಸಿನೊಳಗೆ ಖಾಲಿ ಖಾಲಿ
ನೀ ಮನದೊಳಗೆ ಇದ್ದರೂ
ಮಲ್ಲಿಗೆ, ಸಂಪಿಗೆ, ತರದೆ ಹೋದರು ನೀ ನನಗೆ.
ಓ ನಲ್ಲ, ನೀನಲ್ಲ
ಕರಿಮಣಿ ಮಾಲೀಕ ನೀನಲ್ಲ
ಕರಿಮಣಿ ಮಾಲೀಕ ನೀ...ನಲ್ಲ
ಏನಿಲ್ಲ ಏನಿಲ್ಲ, ನಿನ್ನ ನನ್ನ ನಡುವೆ ಏನಿಲ್ಲ
ನಿಜದಂತಿರುವ ಸುಳ್ಳಲ್ಲ, ಸುಳ್ಳುಗಳೆಲ್ಲ ನಿಜವಲ್ಲ
ಏನಿಲ್ಲ ಏನಿಲ್ಲ, ನಿನ್ನ ನನ್ನ ನಡುವೆ ಏನಿಲ್ಲ, ಏನೇನಿಲ್ಲ


Click it and Unblock the Notifications











