ಮಹಾಶಿವರಾತ್ರಿ ಹಬ್ಬಕ್ಕೆ ಚೆನ್ನೈನಲ್ಲಿ 'ಕಬ್ಜ' ಖದರ್: ಹಳದಿ ಸೀರೆಯಲ್ಲಿ ಕಣ್ಣು ಕುಕ್ಕಿದ ಶ್ರಿಯಾ ಶರಣ್!
ಸ್ಯಾಂಡಲ್‌ವುಡ್‌ನ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಉಪೇಂದ್ರ, ಕಿಚ್ಚ ಸುದೀಪ್ ನಟಿಸುವ 'ಕಬ್ಜ' ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ನಿರ್ದೇಶಕ ಹಾಗೂ ನಿರ್ಮಾಪಕ ಆರ್ ಚಂದ್ರು ಸಿನಿಮಾ ಪ್ರಚಾರವನ್ನೂ ಆರಂಭಿಸಿದ್ದಾರೆ.
ಪ್ಯಾನ್ ಇಂಡಿಯಾ ಸಿನಿಮಾ ಆಗಿರೋದ್ರಿಂದ ಸಿನಿಮಾದ ಹೊಚ್ಚ ಹೊಸ ಹಾಡನ್ನು ಚೆನ್ನೈನಲ್ಲಿ ರಿಲೀಸ್ ಮಾಡಲಾಗಿದೆ. ಮಹಾಶಿವರಾತ್ರಿ ಹಬ್ಬದ ವೇಳೆ ಶಿವನನ್ನು ಕೊಂಡಾಡುವ "ನಮಾಮಿ ನಮಾಮಿ.." ಹಾಡು ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ.

'ಕಬ್ಜ' ಸಿನಿಮಾದ ಹಾಡು ಯೂಟ್ಯೂಬ್‌ನಲ್ಲಿ ರಿಲೀಸ್ ಆಗಿದ್ದರೂ, ಅಂದುಕೊಂಡಂತೆ ಗಣ್ಯರ ಸಮ್ಮುಖದಲ್ಲಿ ಚೆನ್ನೈನಲ್ಲಿ ಬಿಡುಗಡೆ ಮಾಡಿದೆ. ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವರು ಶ್ರಿಯಾ ಶರಣ್. ಹಳದಿ ಸೀರೆಯುಟ್ಟು ಬಂದಿದ್ದ ನಟಿ ಗ್ಲಾಮರಸ್ ಲುಕ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದರು.
ಹಳದಿ ಸೀರೆ, ಅದಕ್ಕೆ ಹೊಂದಿಕೊಂಡಂತಹ ಡಿಸೈನರ್ ಮ್ಯಾಚಿಂಗ್ ಬ್ಲೌಸ್ ತೊಟ್ಟು, ಕ್ಯಾಮರಾ ಮುಂದೆ ಬಂದಾಗ ಆಕೆಯ ಫ್ಯಾನ್ಸ್ ಫಿದಾ ಆಗಿದ್ದರು. ಇನ್ನು 'ಕಬ್ಜ'ದ ಹಾಡು ಕೂಡ ಅಷ್ಟೇ ಬ್ಯೂಟಿಫುಲ್ ಆಗಿ ಮೂಡಿ ಬಂದಿದೆ. ಈಗ ಬಗ್ಗೆ ವೇದಿಕೆ ಮೇಲೆ ಮನಬಿಚ್ಚಿ ಮಾತಾಡಿದ್ದಾರೆ.
'ಕಬ್ಜ' ಸಿನಿಮಾದಲ್ಲಿ ನಟಿಸಿರುವುದು ಬಹಳ ಖುಷಿಯಾಗಿದೆ. ಶಿವನನ್ನು ಆರಾಧಿಸುವ ಈ ಹಾಡು ಬಹಳ ಮಧುರವಾಗಿದೆ. ನನ್ನ ಪಾತ್ರ ಕೂಡ ಅಷ್ಟೇ ಚೆನ್ನಾಗಿದ್ದು, ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ" ಶ್ರಿಯಾ ಶರಣ್ ಖುಷಿ ವ್ಯಕ್ತಪಡಿಸಿದ್ದಾರೆ.

ಅಂದ್ಹಾಗೆ, "ನಮಾಮಿ ನಮಾಮಿ.." ಸಾಂಗ್ ಅನ್ನು ಕಿನಾಲ್ ರಾಜ್ ಬರೆದಿದ್ರೆ, ಗಾಯಕಿ ಐಶ್ವರ್ಯಾ ರಂಗರಾಜನ್ ಅದ್ಭುತವಾಗಿ ಹಾಡಿದ್ದಾರೆ. ರವಿ ಬಸ್ರೂರ್ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಇನ್ನು ಇದೇ ತಿಂಗಳ ಫೆಬ್ರವರಿ 26 ರಂದು ಶಿಡ್ಲಘಟ್ಟದಲ್ಲಿ ಲಕ್ಷಾಂತರ ಜನರ ಮುಂದೆ ಅದ್ಧೂರಿ ಸಮಾರಂಭದಲ್ಲಿ ಮತ್ತೊಂದು ಸೂಪರ್ ಡೂಪರ್ ಸಾಂಗ್ ಅನ್ನು ಬಿಡುಗಡೆ ಮಾಡುತ್ತಿದೆ ಚಿತ್ರತಂಡ. ಹಾಗೇ ಮಾರ್ಚ್ 17ರಂದು ಅಪ್ಪು ಹುಟ್ಟುಹಬ್ಬದಂದೇ ಈ ಸಿನಿಮಾ ರಿಲೀಸ್ ಆಗುತ್ತಿದೆ.


Click it and Unblock the Notifications











