'ಏನಿಲ್ಲ ಏನಿಲ್ಲ' ವೈರಲ್ ಬೆನ್ನಲ್ಲೇ 'ನಂದು ತುಂಬಾ ದೊಡ್ಡದು, ನಿಂದು ಚಿಕ್ಕದು' ಎಂದ ಉಪ್ಪಿ

ವಿಭಿನ್ನ ಆಲೋಚನೆಗಳ ವಿಭಿನ್ನ ಸಿನಿಮಾಗಳಿಂದ ಸದ್ದು ಮಾಡಿದವರು ಉಪೇಂದ್ರ. ಎಷ್ಟೇ ವರ್ಷಗಳು ಕಳೆದರೂ ರಿಯಲ್ ಸ್ಟಾರ್ ವಿಚಿತ್ರ ಆಲೋಚನೆಗಳಿಗೆ ವಯಸ್ಸಾಗಲ್ಲ. ಮತ್ತೆ ಮತ್ತೆ ವಿಭಿನ್ನ ವಿಚಾರಗಳ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಸದ್ಯ 'UI' ಸಿನಿಮಾದಲ್ಲಿ ಉಪ್ಪಿ ಬ್ಯುಸಿಯಾಗಿದ್ದಾರೆ.

'ವ್ಯಾಲಂಟೈನ್ಸ್ ಡೇ' ದಿನವೇ ಚಿತ್ರದ ಚೀಪ್ ಸಾಂಗ್‌ ಟೀಸರ್ ರಿಲೀಸ್ ಮಾಡಿದ್ದಾರೆ. ಸಣ್ಣ ಸಾಂಗ್ ಝಲಕ್ ಕೇಳಿದವರು ಉಪ್ಪಿ ಚಮಕ್ಕು, ಗಿಮಿಕ್ಕು ನೋಡಿ ಫಿದಾ ಆಗಿದ್ದಾರೆ. ಉಪೇಂದ್ರಗೆ ಉಪೇಂದ್ರನೇ ಸಾಟಿ ಎನ್ನುತ್ತಿದ್ದಾರೆ. ಸಾಹಿತ್ಯ ಕೇಳುತ್ತಿದ್ದರೆ ಗೂಢಾರ್ಥ, ದ್ವಂದ್ವಾರ್ಥ ಏನೇನೋ ಅರ್ಥ ಮಾಡಿಕೊಂಡು ತಲೆ ಕೆಡಿಸಿಕೊಂಡಿದ್ದಾರೆ.

Upendra starrer UI films Cheap Song Promo released

'ಚೀಪ್.. ಚೀಪ್ ಎಲ್ಲಾ ಚೀಪ್ ಚೀಪ್' ಎಂದು ಹಾಡು ಶುರುವಾಗುತ್ತದೆ. ನಂದು ತುಂಬಾ ದೊಡ್ಡದು ಅವನಿಗಿಂತ ನಿಂದು ಚಿಕ್ಕದು. ನಿಂದು ತುಂಬಾ ಚಿಕ್ಕದು, ಇವನಿಗಿಂತ ಅವಂದು ದೊಡ್ಡದು ಎಂದು ಹಾಡು ಮುಂದುವರೆಯುತ್ತದೆ. ಉಪೇಂದ್ರ ಹೇಳುತ್ತಿರುವ ಆ ದೊಡ್ಡದು, ಚಿಕ್ಕದು ಏನು? ಎನ್ನುವುದನ್ನು ತೆರೆಮೇಲೆ ನೋಡಬೇಕಿದೆ. ಒಟ್ನಲ್ಲಿ ಸಣ್ಣ ಸಾಂಗ್ ಝಲಕ್‌ನಿಂದಲೇ ಉಪ್ಪಿ ಗೆದ್ದಿದ್ದಾರೆ. ಇದೇ 26ರಂದು ಕಂಪ್ಲಿಟ್ ಸಾಂಗ್ ಬಿಡುಗಡೆ ಆಗಲಿದೆ.

ಬಹಳ ವಿಭಿನ್ನ ಗೆಟಪ್‌ನಲ್ಲಿ ಉಪೇಂದ್ರ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಒಂದಷ್ಟು ಡ್ಯಾನ್ಸರ್ಸ್ ರಿಯಲ್ ಸ್ಟಾರ್‌ಗೆ ಸಾಥ್ ನೀಡಿದ್ದಾರೆ. ಮನೋಹರನ್ ಹಾಗೂ ಕೆ.ಪಿ ಶ್ರೀಕಾಂತ್ ನಿರ್ಮಾಣದ 'UI' ಚಿತ್ರವನ್ನು ಉಪೇಂದ್ರ ನಿರ್ದೇಶಿಸಿ ನಟಿಸಿದ್ದಾರೆ. ಇತ್ತೀಚೆಗೆ ಚಿತ್ರದ ಟೀಸರ್ ರಿಲೀಸ್ ಆಗಿ ಹಿಟ್ ಆಗಿತ್ತು. ಇದು ಚೀಪ್ ಸಾಂಗ್ ಪ್ರೋಮೊ ಸರದಿ.

ಉಪೇಂದ್ರ ಬಹಳ ಡಿಫ್‌ರೆಂಟ್ ಆಗಿ ಚಿಂತಿಸುತ್ತಾರೆ. ಯಾವುದೋ ವಿಚಾರವನ್ನು ಮತ್ಯಾವುದೋ ರೀತಿಯಲ್ಲಿ ಹೇಳುತ್ತಾರೆ. ತಮ್ಮ ಸಿನಿಮಾ ಹಾಡುಗಳಲ್ಲಿ ಕೂಡ ಇಂತಹ ಪ್ರಯತ್ನ ಮಾಡುತ್ತಾ ಬಂದಿದ್ದಾರೆ. ಎರಡೆರಡು ಅರ್ಥ ಕೊಡುವಂತೆ ಸಾಹಿತ್ಯ ಬರೆದು ಗಮನ ಸೆಳೆದಿದ್ದಾರೆ.

25 ವರ್ಷಗಳ ಹಿಂದೆ 'ಉಪೇಂದ್ರ' ಚಿತ್ರಕ್ಕಾಗಿ ಬರೆದ 'ಏನಿಲ್ಲ ಏನಿಲ್ಲ' ಸಾಂಗ್ ಈಗ ಟ್ರೆಂಡ್ ಆಗುತ್ತಿರುವುದು ಗೊತ್ತೇಯಿದೆ. ನೀನಲ್ಲ ಎಂದು ಕೆಲವರು ನೀ ನಲ್ಲ ಎಂದು ಮತ್ತೆ ಕೆಲವರು ಹಾಡಿಕೊಳ್ಳುತ್ತಿದ್ದಾರೆ. ಅದೇ ರೀತಿ ಈಗ ದೊಡ್ಡದು, ಚಿಕ್ಕದು ಅಂತ ಹೇಳಿ ರಿಯಲ್ ಸ್ಟಾರ್ ಮತ್ತೆ ಕುತೂಹಲ ಹುಟ್ಟು ಹಾಕಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತದ ಹಾಡನ್ನು ವಿಜಯ್ ಪ್ರಕಾಶ್, ನಕಾಶ್ ಹಾಗೂ ದೀಪಕ್ ಬ್ಲೂ ಹಾಡಿದ್ದಾರೆ. ಚಿನ್ನಿ ಪ್ರಕಾಶ್ ಕೊರಿಯೊಗ್ರಫಿಯಲ್ಲಿ ಬಹಳ ಅದ್ಧೂರಿಯಾಗಿ ಹಾಡನ್ನು ಸೆರೆಹಿಡಿಯಲಾಗಿದೆ.

Upendra starrer UI films Cheap Song Promo released

ಕೇವಲ ಎರಡು ಸಾಲುಗಳ ಸಣ್ಣ ಸಾಂಗ್ ಪ್ರೋಮೊ ಕೇಳಿ ಅಭಿಮಾನಿಗಳು ಉಪ್ಪಿ ಈಸ್ ಬ್ಯಾಕ್ ಎನ್ನುತ್ತಿದ್ದಾರೆ. ಇಂತಹ ಆಲೋಚನೆಗಳು ಉಪ್ಪಿಗೆ ಮಾತ್ರ ಬರೋದು, ಚಿಕ್ಕದೋ ದೊಡ್ಡದೋ ಸಾಂಗ್ ಮಾತ್ರ ಸೂಪರ್, ಕಂಪ್ಲೀಟ್ ಸಾಂಗ್‌ಗಾಗಿ ಕಾಯ್ತಿದ್ದೀವಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

9 ವರ್ಷಗಳ ಬಳಿಕ ಉಪೇಂದ್ರ ನಿರ್ದೇಶಿಸಿ, ನಟಿಸುತ್ತಿರುವ ಸಿನಿಮಾ 'UI'. ಟೈಟಲ್‌ನಿಂದಲೇ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಹೆಚ್. ಸಿ ವೇಣು ಛಾಯಾಗ್ರಹಣ, ವಿಜಯ್ ರಾಜ್‌ ಸಂಕಲನ ಚಿತ್ರಕ್ಕಿದೆ. ದುರಾಸೆ ಅತಿಯಾಗಿ ಪ್ರಪಂಚ ಯಾವ ಮಟ್ಟಕ್ಕೆ ಹೋಗಿದೆ? ಕೆಟ್ಟದ್ದನ್ನು ನಾಶ ಮಾಡಲು ಕಲ್ಕಿ ಬರ್ತಾನಾ? ಎನ್ನುವ ಕಲ್ಪನೆಯಲ್ಲಿ ಉಪೇಂದ್ರ ಈ ಸಿನಿಮಾ ಕಟ್ಟಿಕೊಟ್ಟಂತೆ ಕಾಣುತ್ತಿದೆ.

ಇದು AI ಪ್ರಪಂಚ ಅಲ್ಲ, UI ಪ್ರಪಂಚ ಎಂದು ಉಪೇಂದ್ರ ಈ ಕಥೆ ಹೇಳುತ್ತಿದ್ದಾರೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ಮೇಕಿಂಗ್, ಪ್ರಮೋಷನ್, ರಿಲೀಸ್ ಪ್ಲ್ಯಾನ್ ನಡೀತಿದೆ. ಚಿತ್ರದಲ್ಲಿ ಸಾಕಷ್ಟು ಗ್ರಾಫಿಕ್ಸ್ ವರ್ಕ್ ಕೂಡ ಇದೆ. ಇದೇ ಕಾರಣಕ್ಕೆ ಸಿನಿಮಾ ತಡವಾಗುತ್ತಿದೆ.

More from Filmibeat

English summary
UI movie first single promo out now
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X