ಆತ್ಮಹತ್ಯೆಗೆ ಶರಣಾದ Rapper ಲಿಲ್: ಕೊನೆಯ ಇನ್ಸ್ಟಾಗ್ರಾಮ್ ಪೋಸ್ಟ್ ವೈರಲ್
ಅಮೆರಿಕದ ಯುವ Rapper ಲಿಲ್ ಲೋಡೆಡ್ ಆತ್ಮಹತ್ಯೆಗೆ ಶರಣಾಗಿದ್ದಾರೆ. 20 ವರ್ಷದ ಲಿಲ್ ನಿಧನದ ಸುದ್ದಿ ಅವರ ಅಭಿಮಾನಿಗಳಿಗೆ ಶಾಕ್ ನೀಡಿದೆ. ಲಿಲ್ ಲೋಡೆಡ್ ಸಾವಿನ ಬಗ್ಗೆ ಅವರ ವಕೀಲ ಅಶ್ಕಾನ್ ಮೆಹರಿಯಾರಿ ಖಚಿತ ಪಡಿಸಿದ್ದಾರೆ. ಲಿಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಲು ತುಂಬ ದುಃಖವಾಗುತ್ತೆ ಎಂದು ಹೇಳಿದ್ದಾರೆ.
ಲಿಲ್ ಆತ್ಮಹತ್ಯೆಗೆ ನಿಖರ ಕಾರಣ ಬಹಿರಂಗವಾಗಿಲ್ಲ. ಲಿಲ್ ಲೋಡೆಡ್ ಮೂಲ ಹೆಸರು ದಶಾನ್ ರಾಬರ್ಟ್ಸನ್. 2019ರಲ್ಲಿ ಬಿಡುಗಡೆಯಾಗಿದ್ದ 6locc 6a6y ಮೂಲಕ ಪ್ರಖ್ಯಾತಿಗಳಿಸಿದ್ದ ಲಿಲ್ ಸಂಗೀತ ಕ್ಷೇತ್ರದಲ್ಲಿ ಉಜ್ವಲ ಭವಿಷ್ಯಹೊಂದಿದ್ದರು. ಲಿಲ್ ಸಾಯುವ ಮೊದಲು ಇನ್ಸ್ಟಾಗ್ರಾಮ್ ನಲ್ಲಿ ಹಾಕಿದ್ದ ಪೋಸ್ಟ್ ಈಗ ವೈರಲ್ ಆಗಿದೆ.
ಸಾವಿನ ಬಗ್ಗೆ ಮೊದಲೇ ಸುಳಿವು ನಿಡಿದ್ರಾ ಎನ್ನುವ ಅನುಮಾನ ಕಾಡುತ್ತಿದೆ. ದಯವಿಟ್ಟು ನನ್ನನ್ನು ಕ್ಷಮಿಸಿ. ನಾನು ನಿಮ್ಮನ್ನು ಹೆಮ್ಮೆ ಪಡಿಸುವಲ್ಲಿ ಮತ್ತು ಮೆಚ್ಚಿಸುವಲ್ಲಿ ಸೋತಿದ್ದೇನೆ. ನನ್ನ ಎಲ್ಲ ತಪ್ಪುಗಳ ಮೂಲಕ ನಿಮ್ಮ ರಾಜ್ಯಕ್ಕೆ ಪ್ರವೇಶವನ್ನು ನಾನು ಕೇಳುತ್ತೇನೆ. ನಿಮ್ಮ ಎಲ್ಲಾ ಮಕ್ಕಳನ್ನು ಪ್ರೀತಿಸುತ್ತೀರಿ ಎಂದು ನನಗೆ ತಿಳಿದಿದೆ. ನನ್ನ ಹೃದಯ ಮತ್ತು ಆತ್ಮ ನಿಮ್ಮೊಂದಿಗೆ ಸೇರಲು ಸಿದ್ಧವಾಗಿದೆ' ಎಂದು ಬರೆದುಕೊಂಡಿದ್ದರು.

ಈ ಪೋಸ್ಟ್ ಈಗ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. ಈ ಪೋಸ್ಟ್ ನೋಡಿ ಅಭಿಮಾನಿಗಳು ಲಿಲ್ ಸಾವಿನ ಬಗ್ಗೆ ಮೊದಲೇ ಸುಳಿವು ನೀಡಿದ್ದರು ಎಂದು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











