»   » ಜಯನಗರದಲ್ಲಿ ವಿ ಹರಿಕೃಷ್ಣ ಮ್ಯೂಸಿಕಲ್ ನೈಟ್

ಜಯನಗರದಲ್ಲಿ ವಿ ಹರಿಕೃಷ್ಣ ಮ್ಯೂಸಿಕಲ್ ನೈಟ್

Posted By:
Subscribe to Filmibeat Kannada

ಇದೇ ಮೊದಲ ಬಾರಿಗೆ ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಅವರು ಸಂಗೀತ ರಸಸಂಜೆ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಹರಿಕೃಷ್ಣ ಅವರಿಗೂ ಈ ರೀತಿಯ ಕಾರ್ಯಕ್ರಮಗಳಿಗೂ ಗಾವುದ ದೂರ. ಆದರೂ ಈ ಬಾರಿ ಅವರು ಧೈರ್ಯ ಮಾಡಿರುವುದು ವಿಶೇಷ.

ಇದೇ ಡಿಸೆಂಬರ್ 7ರಂದು ಬೆಂಗಳೂರು ಜಯನಗರದ ನ್ಯಾಶನಲ್ ಕಾಲೇಜು ಮೈದಾನದಲ್ಲಿ ಹರಿಕೃಷ್ಣ ಮ್ಯೂಸಿಕಲ್ ನೈಟ್ ನಡೆಯಲಿದೆ. ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಅಮೂಲ್ಯ ಅಭಿನಯದ 'ಶ್ರಾವಣಿ ಸುಬ್ರಹ್ಮಣ್ಯ' ಆಡಿಯೋ ಬಿಡುಗಡೆ ಸಮಾರಂಭದ ಪ್ರಯುಕ್ತ ಹಮ್ಮಿಕೊಂಡಿರುವ ಕಾರ್ಯಕ್ರಮ. [ನಾನಿನ್ನೂ ನಟನೆಯಲ್ಲಿ ಯುಕೆಜಿ; ಗೋಲ್ಡನ್ ಸ್ಟಾರ್]


ಈಗಾಗಲೆ ಶ್ರಾವಣಿ ಸುಬ್ರಹ್ಮಣ್ಯ ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ಒಂದಲ್ಲ ಎರಡಲ್ಲ ಮೂರು ಬಾರಿ ಎಂಬುದು ವಿಶೇಷ. ಮೊದಲು ಡೈರೆಕ್ಟ್ ಆಗಿ ಮಾರುಕಟ್ಟೆಗೆ ಬಿಡಲಾಗಿತ್ತು. ಆ ಬಳಿಕ ಉದಯವಾಣಿ ಕಚೇರಿಯಲ್ಲಿ ಲೋಕಾರ್ಪಣೆ ಮಾಡಲಾಯಿತು. ಮೂರನೇ ಸಲ ಪತ್ರಿಕಾಗೋಷ್ಠಿಯಲ್ಲಿ ರಿಲೀಸ್ ಮಾಡಲಾಯಿತು.

ಈಗ ನಾಲ್ಕನೇ ಬಾರಿ ಸಾರ್ವಜನಿಕರ ಸಮ್ಮುಖದಲ್ಲಿ ಭರ್ಜರಿ ಕಾರ್ಯಕ್ರಮದ ಮೂಲಕ ಬಿಡುಗಡೆ ಮಾಡಲಾಗುತ್ತಿರುವುದು ಸ್ಪೆಷಲ್. ಈ ರಸಸಂಜೆ ಕಾರ್ಯಕ್ರಮದಲ್ಲಿ ಶ್ರಾವಣಿ ಸುಬ್ರಹ್ಮಣ್ಯ ಹಾಡುಗಳ ಜೊತೆಗೆ ಇನ್ನಷ್ಟು ಹಿಟ್ ಸಾಂಗ್ ಗಳ ಝಲಕ್ ಇರುತ್ತದೆ. ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಎಲ್ಲರಿಗೂ ಮುಕ್ತ ಅವಕಾಶ ಇದೆ. ಸಂಜೆ 5.30ಕ್ಕೆ ರಸಸಂಜೆ. (ಒನ್ಇಂಡಿಯಾ ಕನ್ನಡ)

English summary
Music director V Harikrishna musical night will held on 7th December at the National College Grounds in Jayanagar at 5.30 pm. Golden Star Ganesh's "Shravani Subramanya" audio Audio also Releasing Grandly in the event.
Please Wait while comments are loading...