ಹರಿಕೃಷ್ಣರ ಹೆಂಡತಿಯಾಗಿದ್ದು ಅದೃಷ್ಟ; ವಾಣಿ ಹರಿಕೃಷ್ಣ
Next »
« Previous
Vani Harikrishna
ಜೊತೆಗೆ, ನಿಮಗೆಲ್ಲಾ ತಿಳಿದಿರುವಂತೆ ನಾನು ಸಂಗೀತ ನಿರ್ದೇಶಕಿಯಾಗುವುದಕ್ಕಿಂತ ಮೊದಲು ಗಾಯಕಿಯಾಗಿ ಸಿನಿಪ್ರೇಕ್ಷಕರಿಗೆ ಪರಿಚಿತಳು. ಚಿಕ್ಕಂದಿನಿಂದಲೂ ಹಾಡುವುದರಲ್ಲಿ ಆಸಕ್ತಿಯಿದ್ದ ನನಗೆ ಹಿನ್ನೆಲೆ ಗಾಯನದ ಅವಕಾಶ ತಾನಾಗಿ ಒಲಿದು ಬಂತು. ಅಂದರೆ, ದಿಢೀರ್ ಬಂತು ಅಂತ ಅರ್ಥವಲ್ಲ, ಇಳೆಯರಾಜಾರ ಸಂಗೀತ ನಿರ್ದೇಶನದ ಹಾಡುಗಳಿಗೆ ಕೋರಸ್ ಹಾಡುತ್ತಿದ್ದೆ. ನಂತರವೇ ನಾನು ಹಿನ್ನೆಲೆ ಗಾಯಕಿಯಾಗಿ ಬೆಳಕಿಗೆ ಬಂದಿದ್ದು.
* ನೀವು ಮೊದಲು ಹಾಡಿದ ಗೀತೆ ಯಾವುದು?
ನಾನು ಮೊದಲು ಹಾಡಿದ್ದು 'ಮಂಜು ಮುಸುಕಿದ ದಾರಿ' ಚಿತ್ರದಲ್ಲಿ. ಆದರೆ ಆ ಚಿತ್ರ ಬಿಡುಗಡೆಯಾಗಿಲ್ಲ. ಹೀಗಾಗಿ ಆ ಹಾಡು ಪ್ರೇಕ್ಷಕರ ಕಿವಿ ತಲುಪಿಲ್ಲ. ಬಿಡುಗಡೆಯಾದ, ಟೈಗರ್ ಪ್ರಭಾಕರ್ ನಟನೆಯ 'ಕಿಂಗ್' ಚಿತ್ರದಲ್ಲಿ ನಾನು ಹಾಡಿದ ಹಾಡೇ ನನ್ನ ವೃತ್ತಿ ಜೀವನದ ಮೊದಲ ಹಾಡು ಎನ್ನಬಹುದು.
* ನೀವು ಧ್ವನಿ ನೀಡಿರುವ ಕೆಲವು ಹಾಡುಗಳನ್ನು ಹೆಸರಿಸಿ..
'ಕಿಂಗ್' ನಂತರ ಬಹುಶಃ ನಾನು 'ಮೈ ಡಿಯರ್ ಟೈಗರ್' ಚಿತ್ರದಲ್ಲಿ ಹಾಡಿದ್ದೇನೆ ಎಂದು ನೆನಪು. ಉಳಿದಂತೆ, ಹಾಲು ಸಕ್ಕರೆ, ಮ್ಯಾಜಿಕ್ ಅಜ್ಜಿ, ಮೌರ್ಯ, ಸ್ನೇಹನಾ ಪ್ರೀತಿನಾ, ಪಯಣ, ಇಂತಿ ನಿನ್ನ ಪ್ರೀತಿಯ, ಮೇಘವೇ ಮೇಘವೇ, ಮಳೆಯಲಿ ಜೊತೆಯಲಿ, ಚೆಲುವೆಯೇ ನಿನ್ನೇ ನೋಡಲು, ಸಾರಥಿ, ಪರಮಾತ್ಮ, ಹಾಗೂ ಇತ್ತೀಚಿನ ಅದ್ದೂರಿ ಮುಂತಾದ ಚಿತ್ರಗಳು ನನಗೆ ನೆನಪಿವೆ. ಕೆಲವೊಂದು ಚಿತ್ರಗಳು ತಕ್ಷಣಕ್ಕೆ ನೆನಪಾಗುತ್ತಿಲ್ಲ.
* ಓಕೆ, ನಿಮ್ಮ ಪತಿ ವಿ ಹರಿಕೃಷ್ಣ ಮತ್ತು ಮಗನ ಬಗ್ಗೆ ನಾಲ್ಕು ಮಾತು ಹೇಳಿ..
ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕರಾಗಿರುವ ವಿ ಹರಿಕೃಷ್ಣ ಅವರ ಬಗ್ಗೆ ನಾನು ಹೆಚ್ಚು ಹೇಳುವುದಕ್ಕಿಂತ ಅವರೇನು ಎನ್ನುವುದು ಎಲ್ಲರಿಗೂ ಗೊತ್ತಿದೆ. ಸಂಗೀತ ಹಾಗೂ ಸಂಗೀತ ನಿರ್ದೇಶನವೇ ಸರ್ವಸ್ವ ಅಂದುಕೊಂಡು ಬದುಕುತ್ತಿರುವವರು ಅವರು. ಅವರ ಜೀವನ ಸಂಗಾತಿಯಾಗಿರುವುದು ನನಗೆ ತುಂಬಾ ಹೆಮ್ಮೆಯ ಸಂಗತಿ.
ಹರಿಕೃಷ್ಣ ಅವರೊಂದಿಗೆ ನನಗೆ 1997 ರಲ್ಲಿ ಮದುವೆಯಾಯ್ತು. ಮೊದಲೂ ಸಂಗೀತದ ನಂಟಿದ್ದ ಕುಟುಂಬದೊಂದಿಗೇ ಬೆಳೆದಿದ್ದ ನನಗೆ ಸಹಜವಾಗಿಯೇ ಸಂಗೀತ ನಿರ್ದೇಶಕರೊಂದಿಗೆ ಬದುಕು ನಡೆಸುವ ಅದೃಷ್ಟವೂ ಜೊತೆಯಾಗಿದೆ. ಅವರು ಸಂಗೀತ ನಿರ್ದೇಶನದ ನಿಮಿತ್ತ ಹೆಚ್ಚಾಗಿ ಚೆನ್ನೈನಲ್ಲೇ ಇರುತ್ತಾರೆ. ಆದರೂ ನಮ್ಮ ಮನೆ ಇರುವುದು ಬೆಂಗಳೂರಿನಲ್ಲೇ.
ನಮ್ಮ ಇಡೀ ಕುಟುಂಬಕ್ಕೆ ಸಂಗೀತವೇ ಜೀವನವಾಗಿರುವುದರಿಂದ ಅಗತ್ಯ ಹೊಂದಾಣಿಕೆ ಸುಲಭ. ನಮ್ಮ ಮಗನಿಗೆ ಆದಿಗೆ (ಆದಿ ಹರಿಕೃಷ್ಣ) ಸಂಗೀತದಲ್ಲಿ ಆಸಕ್ತಿಯಿದೆ, ಕಲಿತಿದ್ದಾನೆ, ಕಲಿಯುತ್ತಿದ್ದಾನೆ. ಚೆನ್ನಾಗಿ ಹಾರ್ಮೋನಿಯಂ ನುಡಿಸುತ್ತಾನೆ. ಇತ್ತೀಚಿಗೆ ಸ್ನೇಹಿತರು ಚಿತ್ರದಲ್ಲಿ ಹಾಡೊಂದನ್ನು ಹಾಡಿದ್ದಾನೆ.
* ನೀವು ಸಂಗೀತ ನಿರ್ದೇಶನಕ್ಕೆ ಕಾಲಿಟ್ಟಿದ್ದು ಹೇಗೆ?
ನಾನು ಈಗಾಗಲೇ ಹೇಳಿದ ಹಾಗೆ, ಸಂಗೀತವಾಗಲೀ ಅಥವಾ ಸಂಗೀತ ನಿರ್ದೇಶನವಾಗಲೀ ನನಗೆ ಹೊಸದಲ್ಲ. ಮುಂದಿನ ಪುಟ ನೋಡಿ...
Next »
« Previous
More from Filmibeat
English summary
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+
X