For Quick Alerts
  ALLOW NOTIFICATIONS  
  For Daily Alerts

  ಲವ್ ಫೇಲ್ಯೂರ್ ಆದವರಿಗಾಗಿ ಅನಿಶ್ ಹೊಸ ಸಾಂಗ್

  By Pavithra
  |

  'ವಾಸು ನಾನ್ ಪಕ್ಕಾ ಕಮರ್ಷಿಯಲ್' ಅನಿಶ್ ತೇಜೇಶ್ವರ್ ಅಭಿನಯ ಮಾಡಿರುವ ಸಿನಿಮಾ. ಈಗಾಗಲೇ ಟೀಸರ್ ಮತ್ತು ಹಾಡುಗಳಿಂದ ಸದ್ದು ಮಾಡುತ್ತಿರುವ "ವಾಸು ನಾನ್ ಪಕ್ಕಾ ಕಮರ್ಷಿಯಲ್" ಚಿತ್ರದ ಮೊದಲ ವಿಡಿಯೋ ಸಾಂಗ್ ಬಿಡುಗಡೆ ಆಗಿದೆ.

  ಹೇಳು ಬಾ ಏನಾದರು... ಅಂತ ಶುರುವಾಗುವ ಹಾಡಿಗೆ ಅಜನೀಶ್ ಬಿ ಲೋಕನಾಥ್ ಸಂಗೀತ ಸಂಯೋಜಿಸುವುದರ ಜೊತೆಯಲ್ಲಿ ಹಾಡನ್ನು ತಾವೇ ಹಾಡಿದ್ದಾರೆ. ನಿರ್ದೇಶಕ ಅಲೆಮಾರಿ ಹರಿ ಸಂತು ಹಾಡನ್ನು ಬರೆದಿದ್ದು ವಿಡಿಯೋ ಸಾಂಗ್ ನೋಡಿ ಅಭಿಮಾನಿಗಳು ಹಾಗೂ ಕನ್ನಡ ಸಿನಿಮಾರಂಗದ ಸ್ಟಾರ್ ಗಳು ಖುಷಿಯಾಗಿದ್ದಾರೆ. ರೋರಿಂಗ್ ಸ್ಟಾರ್ ಶ್ರೀ ಮುರಳಿ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ.

  ಪಕ್ಕಾ ಕಮರ್ಷಿಯಲ್ ಆಗಿ ಬಂದ ಅನಿಶ್ ತೇಜೇಶ್ವರ್ಪಕ್ಕಾ ಕಮರ್ಷಿಯಲ್ ಆಗಿ ಬಂದ ಅನಿಶ್ ತೇಜೇಶ್ವರ್

  ಪೊಲೀಸ್ ಸ್ಟೇಷನ್ ನಲ್ಲಿ ಹಾಡಿನ ಚಿತ್ರೀಕರಣ ಮಾಡಿದ್ದು ಹಾಡಿನಲ್ಲಿ ಗಿರಿ ಹಾಗೂ ನಟ ಜೀವನ್ ಕಾಣಿಸಿಕೊಂಡಿದ್ದಾರೆ. 'ವಾಸು ನಾನ್ ಪಕ್ಕಾ ಕಮರ್ಷಿಯಲ್' ಚಿತ್ರವನ್ನು ಅಜಿತ್ವಾಸನ್ ಉಗ್ಗಿನಾ ನಿರ್ದೇಶನ ಮಾಡಿದ್ದು ವಿಂಕ್ ವಿಷಲ್ ಪ್ರೊಡಕ್ಷನ್ ಲಿಮಿಟೆಡ್ ಅಡಿಯಲ್ಲಿ ಚಿತ್ರ ನಿರ್ಮಾಣ ಆಗಿದೆ. ಚಿತ್ರಕ್ಕೆ ಶರತ್ ಗೌಡ ಕಾರ್ಯಕಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ.

  ಅಜನೀಶ್ ಬಿ ಲೋಕನಾಥ್ ಸಂಗೀತವಿರುವ 'ವಾಸು ನಾನ್ ಪಕ್ಕಾ ಕಮರ್ಷಿಯಲ್' ಚಿತ್ರದಲ್ಲಿ ಅನಿಶ್ ಜೋಡಿಯಾಗಿ ನಟಿ ನಿಶ್ವಿಕಾ ನಾಯ್ಡು ಅಭಿನಯ ಮಾಡಿದ್ದಾರೆ. ಸದ್ಯ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಜುಲೈ ನಲ್ಲಿ ಸಿನಿಮಾ ತೆರೆಗೆ ತರಲು ಸಿದ್ದತೆ ಮಾಡಿಕೊಂಡಿದ್ದಾರೆ.

  English summary
  Kannada Vasu Nan Pakka commercial film video song released. Anish and Nishwika Naidu have acted in 'Vasu Naan Paka and Commercial' Cinema.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X