For Quick Alerts
  ALLOW NOTIFICATIONS  
  For Daily Alerts

  ಜನಪ್ರಿಯ ಸಂಗೀತ ನಿರ್ದೇಶಕ ರಾಮ್ ಲಕ್ಷ್ಮಣ್ ನಿಧನ; ಲತಾ ಮಂಗೇಶ್ಕರ್ ಸಂತಾಪ

  |

  ಬಾಲಿವುಡ್ ಖ್ಯಾತ ಸಂಗೀತ ನಿರ್ದೇಶಕ ರಾಮ್ ಲಕ್ಷ್ಮಣ್ ನಾಗಪುರದ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 78 ವರ್ಷದ ಸಂಗೀತ ನಿರ್ದೇಶಕ ಶನಿವಾರ ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ ಎಂದು ಅವರ ಪುತ್ರ ಅಮರ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

  'ನನ್ನ ತಂದೆ ಇಂದು ಬೆಳಗ್ಗೆ 2 ಗಂಟೆಗೆ ಹೃದಯಾಘಾತದಿಂದ ನಿಧನಹೊಂದಿದರು. ಅವರು ಕೆಲವು ದಿನಗಳ ಹಿಂದೆಯಷ್ಟೆ ಕೋವಿಡ್ 19 ಲಸಿಕೆಯ ಎರಡನೇ ಡೋಸ್ ಪಡೆದಿದ್ದರು. ಬಳಿಕ ತುಂಬಾ ದುರ್ಬಲರಾಗಿದ್ದರು' ಎಂದು ದಿ ಇಂಡಿಯನ್ ಇಕ್ಸಪ್ರೆಸ್ ಗೆ ಮಾಹಿತಿ ನೀಡಿದ್ದಾರೆ.

  ಹಿರಿಯ ಸಿನಿಮಾ PRO, ನಿರ್ಮಾಪಕ ರಾಜು ನಿಧನಕ್ಕೆ ಕಂಬನಿ ಮಿಡಿದ ಟಾಲಿವುಡ್ ಹಿರಿಯ ಸಿನಿಮಾ PRO, ನಿರ್ಮಾಪಕ ರಾಜು ನಿಧನಕ್ಕೆ ಕಂಬನಿ ಮಿಡಿದ ಟಾಲಿವುಡ್

  ಪ್ರಸಿದ್ಧ ಸಂಗೀತ ನಿರ್ದೇಶಕನ ನಿಧನಕ್ಕೆ ಬಾಲಿವುಡ್ ನ ಅನೇಕ ಮಂದಿ ಸಂತಾಪ ಸೂಚಿಸಿದ್ದಾರೆ. ರಾಮ್ ಲಕ್ಷ್ಮಣ್, ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ನೆಚ್ಚಿನ ಕಾಂಪೋಸರ್ ಆಗಿದ್ದರು. ರಾಮ್ ಲಕ್ಷ್ಮಣ್ ನಿಧನಕ್ಕೆ ಲತಾ ಮಂಗೇಶ್ಕರ್ ತೀವ್ರ ಸಂತಾಪ ಸೂಚಿಸಿದ್ದಾರೆ.

  ಟ್ವೀಟ್ ಮಾಡಿ, 'ಅತ್ಯಂತ ಪ್ರತಿಭಾವಂತ ಮತ್ತು ಜನಪ್ರಿಯ ಸಂಗೀತ ನಿರ್ದೇಶಕ ರಾಮ್ ಲಕ್ಷ್ಮಣ್ ಅವರು ನಿಧನರಾಗಿದ್ದಾರೆ ಎಂದು ತಿಳಿಯಿತು. ಈ ಸುದ್ದಿ ಕೇಳಿ ನನಗೆ ತುಂಬಾ ತೀವ್ರ ನೋವಾಯಿತು. ಅವರು ಮಹಾನ್ ವ್ಯಕ್ತಿ. ನಾನು ಅವರು ನಿರ್ದೇಶನದ ಅನೇಕ ಹಾಡುಗಳನ್ನು ಹಾಡಿದ್ದೇನೆ, ತುಂಬಾ ಜನಪ್ರಿಯತೆ ತಂದುಕೊಟ್ಟಿದೆ' ಎಂದು ಹೇಳಿದ್ದಾರೆ.

  ರಾಮ್ ಲಕ್ಷ್ಮಣ್ ನಿರ್ದೇಶನದ ಸಂಗೀತದಲ್ಲಿ ಲತಾ ಮಂಗೇಶ್ಕರ್ ಮಾಯೆ ನಿ ಮಾಯೆ..ದೀದಿ ತೇರಾ ದೇವಾರ್ ದಿವಾನಾ..ಕಬೂತಾರ್ ಜಾ ಜಾ ಜಾ..ಸೇರಿದಂತೆ ಇನ್ನು ಅನೇಕ ಜನಪ್ರಿಯ ಹಾಡುಗಳಿಗೆ ಧ್ವನಿಯಾಗಿದ್ದಾರೆ.

  ರಾಮ್ ಲಕ್ಷ್ಮಣ್, ಮೈನೆ ಪ್ಯಾರ್ ಕಿಯಾ, ಹಮ್ ಆಪ್ಕೆ ಕೌನ್, ಹಮ್ ಸಾಥ್ ಸಾಥ್ ಹೈ, 100 ಡೇಸ್ ಸೇರಿದಂತೆ ಮುಂದಾದ ಸೂಪರ್ ಹಿಟ್ ಸಿನಮಾಗಳಿಗೆ ಸಂಗೀತ ನೀಡಿದ್ದಾರೆ. ಹಿಂದಿ, ಮರಾಠಿ, ಭೋಜಪುರಿಯಲ್ಲಿ 200ಕ್ಕೂ ಅಧಿಕ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ.

  ವಿಜಯ್ ಪಾಟೀಲ್ ಆಗಿ ಜನಿಸಿದ ಅವರು ಸ್ನೇಹಿತ ಸುರೇಂದ್ರ (ರಾಮ್) ನಿಧನದ ಬಳಿಕ ಸ್ನೇಹಿತನ ನೆನಪಿಗಾಗಿ ತನ್ನ ಹೆಸರಿನ ಜೊತೆ ರಾಮ್ ಸೇರಿಸಿಕೊಂಡು, ರಾಮ್ ಲಕ್ಷ್ಮಣ್ ಹೆಸರಿನಲ್ಲೇ ಮುಂದುವರೆದರು. ಮರಾಠಿ ಚಿತ್ರರಂಗದಿಂದ ವೃತ್ತಿ ಜೀವನ ಪ್ರಾರಂಭಿಸಿದ ರಾಮ್ ಲಕ್ಷ್ಮಣ್ ಬಳಿಕ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಡುವ ಮೂಲಕ ಖ್ಯಾತಿಗಳಿಸಿದ್ದಾರೆ.

  English summary
  Veteran Music Director Ram Laxman passes away due to cardiac arrest.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X