twitter
    For Quick Alerts
    ALLOW NOTIFICATIONS  
    For Daily Alerts

    ವಾಣಿ ಜಯರಾಂ ಸಾವು: ಮರಣೋತ್ತರ ಪರೀಕ್ಷೆ ವಿವರ ಬಹಿರಂಗ

    |

    ಭಾರತೀಯ ಸಂಗೀತ ಲೋಕದ ಹೆಸರಾಂತ ಗಾಯಕಿ ವಾಣಿ ಜಯರಾಂ ಶನಿವಾರ (ಫೆಬ್ರವರಿ 04) ಸಾವನ್ನಪ್ಪಿದ್ದರು. ಒಂಟಿಯಾಗಿಯೇ ವಾಸವಿದ್ದ ಗಾಯಕಿಯ ಸಾವಿನ ಬಗ್ಗೆ ಅನುಮಾನಗಳು ಮೂಡಿದ್ದವು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.

    ಗಾಯಕಿ ವಾಣಿ ಜಯರಾಂ ಸಾವಿನ ಬಗ್ಗೆ ಅನುಮಾನ ಮೂಡಲು ಹಲವು ಕಾರಣಗಳಿತ್ತು. ವಾಣಿ ಜಯರಾಂ ತಲೆಗೆ ಪೆಟ್ಟಾಗಿತ್ತು. ಅಲ್ಲದೆ ಗಾಯಕಿ ಬಿದ್ದಿದ್ದ ಸ್ಥಳ ರಕ್ತದ ಕಲೆಗಳು ಬಿದ್ದಿದ್ದವು. ಹೀಗಾಗಿ ಪೋಲಿಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದರು.

    ವಾಣಿ ಜಯರಾಂ ಹಾಡಿದ ಮೊದಲ ಹಾಗೂ ಕೊನೆಯ ಕನ್ನಡ ಹಾಡು ಯಾವುದು ಬಲ್ಲಿರೆ?ವಾಣಿ ಜಯರಾಂ ಹಾಡಿದ ಮೊದಲ ಹಾಗೂ ಕೊನೆಯ ಕನ್ನಡ ಹಾಡು ಯಾವುದು ಬಲ್ಲಿರೆ?

    ಈ ಹಿನ್ನೆಲೆಯಲ್ಲಿ ಗಾಯಕಿ ವಾನಿ ಜಯರಾಂ ಅವರ ಪಾರ್ಥೀವ ಶರೀರವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ನಿನ್ನೆ( ಫೆಬ್ರವರಿ 05) ಗಾಯಕಿ ಮರಣೋತ್ತರ ವರದಿ ಬಂದಿದ್ದು, ಇದರಲ್ಲಿ ಗಾಯಕಿ ಸಾವಿನ ಬಗ್ಗೆ ಯಾವುದೇ ರೀತಿಯ ಅನುಮಾನಗಳು ಇಲ್ಲ ಎಂದು ಹೇಳಲಾಗಿದೆ.

    ಪೊಲೀಸರಿಗೆ ಅನುಮಾನ

    ಪೊಲೀಸರಿಗೆ ಅನುಮಾನ

    ಇನ್ನೊಂದು ಕಡೆ ಅಕ್ಕ ಪಕ್ಕದ ಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನೂ ಪೊಲೀಸರು ಪರಿಶೀಲನೆ ಮಾಡಿದ್ದರು. ಅದರಲ್ಲೂ ಕೂಡ ಯಾರೂ ವಾಣಿ ಜಯರಾಂ ಅವರ ಮನೆಗೆ ಹೋಗಿದ್ದಾಗಲಿ ಅಥವಾ ಅವರ ಮನೆಯಿಂದ ಬಂದಿದ್ದಾಗಲಿ ಕಂಡು ಬಂದಿಲ್ಲ. ಹೀಗಾಗಿ ಗಾಯಕಿಯ ಸಾವನ್ನು ಸಹಜ ಸಾವು ಎಂಬ ತೀರ್ಮಾನಕ್ಕೆ ಪೊಲೀಸ್‌ ಅಧಿಕಾರಿಗಳು ಬಂದಿದ್ದಾರೆ.

    ಸಾವು ಸಂಭವಿಸಿದ್ದು ಹೇಗೆ?

    ಸಾವು ಸಂಭವಿಸಿದ್ದು ಹೇಗೆ?

    ವಾಣಿ ಜಯರಾಂ ಅವರು ಮಲಗಿದ್ದ ಮಂಚದ ಪಕ್ಕದಲ್ಲಿ ಮರದ ಟೇಬಲ್ ಇತ್ತು. ಈ ಟೇಬಲ್ ಮೇಲೆ ವಾಣಿ ಜಯರಾಂ ಬಿದ್ದಿದ್ದ ಪರಿಣಾಮ ತಲೆಗೆ ಬಲವಾದ ಏಟಾಗಿದೆ. ಕೂಡಲೇ ಅವರಿಗೆ ರಕ್ತಸ್ರಾವವಾಗಿದೆ. ಗಾಯಕಿಯ ಸಾವು ಹೃದಯಾಘಾತದಿಂದ ಆಗಿದ್ದು, ಬೇರೆ ಯಾವುದೇ ಅನುಮಾನವಿಲ್ಲ ಎಂದು ಪೊಲೀಸರು ಗಾಯಕಿ ಸಾವಿನ ಬಗ್ಗೆ ಎದ್ದಿದ್ದ ಅನುಮಾನಗಳನ್ನು ಬಗೆಹರಿಸಿದ್ದಾರೆ.

    ಬೆಳಗ್ಗೆ ಬಾಗಿಲು ತೆಗೆದಿರಲಿಲ್ಲ

    ಬೆಳಗ್ಗೆ ಬಾಗಿಲು ತೆಗೆದಿರಲಿಲ್ಲ

    ವಾಣಿ ಜಯರಾಂ ಚೆನ್ನೈನ ನುಂಗಂಬಾಕ್ಕಂನ ಹಡ್ಡೋಸ್ ರಸ್ತೆಯಲ್ಲಿರುವ ಮನೆಯಲ್ಲಿ ಒಬ್ಬರೇ ವಾಸವಿದ್ದರು. ಹೀಗಾಗಿ ಅವರ ಸಹಾಯಕ್ಕೆಂದು ಪ್ರತಿದಿನ ಮನೆ ಕೆಲಸ ಮಾಡಲು ಬರುತ್ತಿದ್ದರು. ಎಂದಿನಂತೆ ಬೆಳಗ್ಗೆ ಮನೆಕೆಲಸದವರು ಎಷ್ಟು ಪ್ರಯತ್ನ ಪಟ್ಟರೂ ಗಾಯಕಿ ಬಾಗಿಲು ತೆರೆದಿರಲಿಲ್ಲ. ಆಗಲೇ ಪಕ್ಕದ ಮನೆತವರಿಗೆ ತಿಳಿಸಿ, ಆ ಬಳಿಕ ಪೊಲೀಸರಿಗೆ ಮಾಹಿತಿಯನ್ನು ತಿಳಿಸಿದ್ದರು. ಆ ಬಳಿಕ ಅವರನ್ನು ಆಸ್ಪತ್ರೆ ಕರೆದುಕೊಂಡು ಹೋಗಿದ್ದರು.

    ಕನ್ನಡ ಸಿನಿಮಾಗಳಲ್ಲೂ ಗಾಯನ

    ಕನ್ನಡ ಸಿನಿಮಾಗಳಲ್ಲೂ ಗಾಯನ

    ವಾಣಿ ಜಯರಾಂ ತಮಿಳಿನ ವಲ್ಲೂರಿನಲ್ಲಿ ಜನಿಸಿದ್ದರು. ತಾಯಿ ಕೂಡ ಶಾಸ್ತ್ರೀಯ ಸಂಗೀತ ಕಲಿತಿದ್ದರಿಂದ, ವಾಣಿ ಜಯರಾಂ ಕೂಡ ಗಾಯನದ ಕಡೆಗೆ ವಾಲಿದ್ದರು. ತಮಿಳಿನಲ್ಲಿ ಅತೀ ಹೆಚ್ಚ ಹಾಡುಗಳನ್ನು ಹಾಡಿದ್ದರು. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಮರಾಠಿ, ಓಡಿಯಾ, ಗುಜರಾತಿ, ಬಂಗಾಳಿ ಸೇರಿದಂತೆ ಭಾರತೀಯ ನಾನಾ ಭಾಷೆಗಳ ಸಿನಿಮಾಗಳಿಗೆ ಇವರು ಧ್ವನಿ ನೀಡಿದ್ದರು. ಕನ್ನಡದಲ್ಲಿ 50 ಹೆಚ್ಚು ಸಿನಿಮಾಗಳಿಗೆ ಹಾಡಿದ್ದು, ಅನುಭವ, ಶಿವ ಮೆಚ್ಚಿದ ಕಣ್ಣಪ್ಪ, ರಣರಂಗ, ಮಲಯ ಮಾರುತ, ಒಲವಿನ ಉಡುಗೊರೆಯಂತಹ ಸಿನಿಮಾದ ಹಾಡುಗಳಿಗೆ ಹಾಡಿದ್ದಾರೆ.

    English summary
    Veteran Singer Vani Jayaram Mysterious Death Reason Revealed By Police, Know More.
    Monday, February 6, 2023, 10:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X