'ವಿಕ್ರಾಂತ್ ರೋಣ' 'ಗಡಾಂಗ್ ರುಕ್ಕಮ್ಮ' ಹಾಡು ಬಿಡುಗಡೆಗೆ ಮುಹೂರ್ತ ಫಿಕ್ಸ್
'ಕೆಜಿಎಫ್ 2' ಸಿನಿಮಾದ ಬಳಿಕ ಕನ್ನಡದ ಬಹುನಿರೀಕ್ಷಿತ ಸಿನಿಮಾ 'ವಿಕ್ರಾಂತ್ ರೋಣ'. ಸುದೀಪ್ ನಟನೆಯ ಈ ಸಿನಿಮಾದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಅಭಿಮಾನಿಗಳಿಗೆ ಇದೆ.
ಸಿನಿಮಾದ ಬಿಡುಗಡೆ ದಿನಾಂಕ ಈಗಾಗಲೇ ಘೋಷಣೆ ಆಗಿದ್ದು, ಇದೀಗ ಸಿನಿಮಾದ ಮೊದಲ ಹಾಡು ಹೊರಗೆ ಬರಲಿದೆ. ಸಿನಿಮಾದ ಮೊದಲ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಗೆ ದಿನಾಂಕ ನಿಗದಿಪಡಿಸಲಾಗಿದ್ದು, ಹಾಡು ಬಿಡುಗಡೆ ದಿನಾಂಕವನ್ನು ನಟ ಸುದೀಪ್ ಹಂಚಿಕೊಂಡಿದ್ದಾರೆ.
ಜಾಕ್ವೆಲಿನ್ ಫರ್ನಾಂಡಿಸ್, ಸುದೀಪ್ ನಟಿಸಿರುವ 'ರಾ ರಾ ರುಕ್ಕಮ್ಮ' ಹಾಡು ಐದು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಕನ್ನಡದಲ್ಲಿ ಮೇ 23 ರಂದು ಮಧ್ಯಾಹ್ನ 3:05 ನಿಮಿಷಕ್ಕೆ ಬಿಡುಗಡೆ ಆಗಲಿದೆ. ಹಿಂದಿಯಲ್ಲಿ ಮೇ 24ರಂದು ಮಧ್ಯಾಹ್ನ 1:05ಕ್ಕೆ ಬಿಡುಗಡೆ ಆಗಲಿದೆ. ತೆಲುಗು ಭಾಷೆಯಲ್ಲಿ ಮೇ 25ಕ್ಕೆ ಮಧ್ಯಾಹ್ನ 1:05 ಕ್ಕೆ ಬಿಡುಗಡೆ ಆಗಲಿದೆ. ತಮಿಳಿನಲ್ಲಿ ಮೇ 26ರಂದು ಮಧ್ಯಾಹ್ನ 1ಕ್ಕೆ ಬಿಡುಗಡೆ ಆಗಲಿದೆ. ಮೇ 27 ರಂದು ಮಧ್ಯಾಹ್ನ 1 ಗಂಟೆಗೆ ಮಲಯಾಳಂನಲ್ಲಿ ಹಾಡು ಬಿಡುಗಡೆ ಆಗಲಿದೆ.

ಸಿನಿಮಾದ ಲಿರಿಕಲ್ ವಿಡಿಯೋ ಅಷ್ಟೆ ಈಗ ಬಿಡುಗಡೆ ಆಗಲಿದೆ. ಜಾಕ್ವೆಲಿನ್ ಫರ್ನಾಂಡೀಸ್ ಸೊಂಟ ಕುಣಿಸಿರುವ ಈ ಹಾಡನ್ನು ದೊಡ್ಡ ಮೊತ್ತ ಖರ್ಚು ಮಾಡಿ ಚಿತ್ರಿಕರಿಸಲಾಗಿದೆ. ಜಾಕ್ವೆಲಿನ್ ಫರ್ನಾಂಡಿಸ್ ನಟಿಸಿರುವ ಮೊದಲ ಕನ್ನಡ ಸಿನಿಮಾ 'ವಿಕ್ರಾಂತ್ ರೋಣ' ಆಗಿದ್ದು, ಜಾಕ್ವೆಲಿನ್ ನೃತ್ಯವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ.
ಇನ್ನು 'ವಿಕ್ರಾಂತ್ ರೋಣ' ಸಿನಿಮಾವು ಜುಲೈ 28ರಂದು ತೆರೆಗೆ ಬರಲಿದೆ. ಪಿವಿಆರ್ ಪಿಕ್ಚರ್ಸ್‌ನವರು ಸಿನಿಮಾವನ್ನು ಉತ್ತರ ಭಾರತದಲ್ಲಿ ಬಿಡುಗಡೆ ಮಾಡಲಿದ್ದು, ಸಿನಿಮಾವು ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಸಹ ಬಿಡುಗಡೆ ಆಗಲಿದೆ. ಜೊತೆಗೆ ಸಿನಿಮಾವು 3ಡಿ ತಂತ್ರಜ್ಞಾನ ಸಹ ಹೊಂದಿದ್ದು, ಒಂದೊಳ್ಳೆ 3ಡಿ ಅನುಭವವನ್ನು ಸಿನಿಮಾ ನೀಡಲಿದೆ ಎಂದಿದೆ ಚಿತ್ರತಂಡ.
ಸುದೀಪ್ ನಾಯಕ ನಟನಾಗಿ ನಟಿಸಿರುವ 'ವಿಕ್ರಾಂತ್ ರೋಣ' ಸಿನಿಮಾದಲ್ಲಿ ನಿರೂಪ್ ಭಂಡಾರಿ, ಶ್ರದ್ಧಾ ಶ್ರೀನಾಥ್ ಇನ್ನಿತರ ನಟರು ನಟಿಸಿದ್ದಾರೆ. ಸಿನಿಮಾವನ್ನು 'ರಂಗಿತರಂಗ' ಖ್ಯಾತಿಯ ಅನುಪ್ ಭಂಡಾರಿ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಸುದೀಪ್‌ರ ಆಪ್ತ ನಿರ್ಮಾಪಕ ಹಾಗೂ ವಿತರಕ ಜಾಕ್ ಮಂಜು.


Click it and Unblock the Notifications











