ರೀಲ್ಸ್ ಪ್ರಪಂಚಕ್ಕೆ ವಿನಯ್ ರಾಜ್‌ಕುಮಾರ್; ' ಓ ನಲ್ಲ ಕರಿಮಣಿ ಮಾಲೀಕ ನೀನಲ್ಲ' ಎಂದ ಅಣ್ಣಾವ್ರ ಮೊಮ್ಮಗ

ಎಲ್ಲೆಲ್ಲೂ ಕರಿಮಣಿ ಮಾಲೀಕನ ಹಾವಳಿ ಜೋರಾಗಿದೆ. ಒಮ್ಮೆಯಾದರೂ ಈ ಹಾಡು ಕಿವಿ ಮೇಲೆ ಬೀಳದೇ ದಿನ ಮುಗಿಯುತ್ತಿಲ್ಲ ಎನ್ನುವಂತಾಗಿಬಿಟ್ಟಿದೆ. ಸೋಶಿಯಲ್ ಮೀಡಿಯಾ ಓಪನ್ ಮಾಡಿದರೆ ಓ ನಲ್ಲ ನೀನಲ್ಲ ಕರಿಮಣಿ ಮಾಲೀಕ ಎನ್ನುವ ರಾಗ ಹೊರಳುತ್ತಿದೆ.

25 ವರ್ಷಗಳ ಹಿಂದೆ ಬಂದಿದ್ದ 'ಉಪೇಂದ್ರ' ಚಿತ್ರದ ಹಾಡಿದು. ಗುರುಕಿರಣ್ ಸಂಗೀತದ ಹಾಡಿಗೆ ಉಪ್ಪಿ ಸಾಹಿತ್ಯ ಬರೆದಿದ್ದರು. ಪ್ರತಿಮಾ ರಾವ್ ಹಾಡನ್ನು ಹಾಡಿದ್ದರು. ಅವತ್ತಿನ ಕಾಲಕ್ಕೆ ಹಾಡು ಹಿಟ್ ಆಗಿತ್ತು. ಆದರೆ ಈಗ ಸೋಶಿಯಲ್ ಮೀಡಿಯಾ ಜಮಾನದಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡ್ತಿದೆ. ಈ ಹಾಡು ಇಷ್ಟೊಂದು ವೈರಲ್ ಆಗುವುದಕ್ಕೆ ಕಾರಣ ಕನಕ ಎಂಬುವ ಯುವಕ.

Vinay Rajkumar and Sunis O Nalla Neenalla Karimani Maalika reels goes viral

ಮೂಲತಃ ಕಲ್ಯಾಣ ಕರ್ನಾಟಕ ಭಾಗದ ವಿಜಯನಗರದ ಕೊಟ್ಟೂರಿನ ಯುವಕ ಕನಕ ಈ ಹಾಡನ್ನು ಬಳಸಿ ಒಂದು ರೀಲ್ಸ್ ಮಾಡಿದ್ದ. ಆ ರೀಲ್ಸ್ ನೋಡ ನೋಡುತ್ತಲೇ ವೈರಲ್ ಆಗಿಬಿಡ್ತು. ಜನ ಕೇಳಿ ಕೇಳಿ ಏನೋ ಚೆನ್ನಾಗಿದೆ ಅಲ್ಲ ಅತ ಪದೇ ಪದೆ ಕೇಳೋಕೆ ಆರಂಭಿಸಿದರು. ಬಳಿಕ ಒರಿಜಿನಲ್ ಹಾಡನ್ನು ಮತ್ತೆ ಮತ್ತೆ ಕೇಳಿದರು. ಬಳಿಕ ಅದಕ್ಕೆ ಮತ್ತಷ್ಟು ರೀಲ್ಸ್ ಮಿಕ್ಸ್ ಮಾಡಿ ಒಬ್ಬೊಬ್ಬರು ಒಂದೊಂದು ರೂಪ ಕೊಟ್ಟರು. ಬೆಳ್ಳುಳ್ಳಿ ಕಬಾಬ್ ಚಂದ್ರು ಅವರ ರಾಹುಲ್ಲಾ ಡೈಲಾಗ್ಸ್ ಮಿಕ್ಸ್ ಮಾಡಿ ವಿಕಾಸ್ ವಿಕ್ಕಿಪಿಡಿಯ ವೈರಲ್ ಮಾಡಿದರು.

ಈಗ ಎಲ್ಲೆಲ್ಲೂ ಕರಿಮಣಿ ಮಾಲೀಕನ ಹಾವಳಿ ಜೋರಾಗಿದೆ. ಇದೀಗ ನಟ ವಿನಯ್ ರಾಜ್‌ಕುಮಾರ್‌ ಕೂಡ ಈ ಕ್ರೇಜ್‌ನ ಭಾಗವಾಗಿದ್ದಾರೆ. 'ಒಂದು ಸರಳ ಪ್ರೇಮಕಥೆ' ಸಕ್ಸಸ್ ಸಂಭ್ರಮದಲ್ಲಿ ವಿನಯ್ ತೇಲುತ್ತಿದ್ದಾರೆ. ಇಂತಹ ಹೊತ್ತಲ್ಲೇ ಕನಕ ಮಾಡಿದ್ದ 'ಕರಿಮಣಿ ಮಾಲೀಕ' ರೀಲ್ಸ್‌ಗೆ ಲಿಪ್ ಸಿಂಕ್ ಮಾಡಿ ಹೊಸ ರೀಲ್ಸ್ ಕ್ರಿಯೇಟ್ ಆಗಿದೆ.

ಇದು ವಿನಯ್ ರಾಜ್‌ಕುಮಾರ್ ಮಾಡಿರುವ ಮೊದಲ ರೀಲ್ಸ್. ನಿರ್ದೇಶಕ ಸಿಂಪಲ್ ಸುನಿ ಕೂಡ ವಿನಯ್‌ಗೆ ಸಾತ್ ಕೊಟ್ಟಿದ್ದಾರೆ. ಒಟ್ನಲ್ಲಿ ಈ ಹೊಸ ರೀಲ್ಸ್ ಅಭಿಮಾನಿಗಳ ಮನಗೆದ್ದಿದೆ. ಅಭಿಮಾನಿಗಳು ಕಾಮೆಂಟ್ ಮಾಡಿ ಸೂಪರ್ ಎಂದು ಮೆಚ್ಚಿಕೊಂಡಿದ್ದಾರೆ. ಮತ್ತೆ ಕೆಲವರು "ನಿಮ್ಮನ್ನು ಬಿಡಲಿಲ್ವಾ?" ಎಂದು ಬರೆಯುತ್ತಿದ್ದಾರೆ.

ಒಂದೊಳ್ಳೆ ಸಕ್ಸಸ್‌ಗಾಗಿ ಕಾಯುತ್ತಿದ್ದ ವಿನಯ್ 'ಒಂದು ಸರಳ ಪ್ರೇಮಕಥೆ' ಸಿನಿಮಾ ಮೂಲಕ ಗೆಲುವಿನ ನಗೆ ಬೀರಿದ್ದಾರೆ. ಸದ್ಯ ಸಿನಿಮಾ ಪ್ರಚಾರದಲ್ಲಿ ಭಾಗಿ ಆಗುತ್ತಿದ್ದಾರೆ. ಚಿತ್ರದಲ್ಲಿ ಮಲ್ಲಿಕಾ ಸಿಂಗ್ ನಾಯಕಿಯಾಗಿ ನಟಿಸಿದ್ದಾರೆ. ನಟ ಶಿವಣ್ಣ, ನಟಿ ರಮ್ಯಾ ಸೇರಿದಂತೆ ಹಲವರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಚಿತ್ರಕ್ಕೆ ಎಲ್ಲೆಡೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ಚಿತ್ರವನ್ನು ವಿತರಣೆ ಮಾಡಿದೆ.

ಮೈಸೂರು ರಮೇಶ್ ನಿರ್ಮಾಣದ ಚಿತ್ರಕ್ಕೆ ವೀರ್ ಸಮರ್ಥ್ ಸಂಗೀತ, ಕಾರ್ತಿಕ್ ಶರ್ಮಾ, ಸಭಾ ಕುಮಾರ್ ಛಾಯಾಗ್ರಹಣವಿದೆ. ಸಿಂಪಲ್ ಸುನಿ ತಮ್ಮ ಸ್ಟೈಲ್‌ ಚಮಕ್‌ಗಳನ್ನು ಕೊಡುತ್ತಾ ಈ ರೊಮ್ಯಾಂಟಿಕ್ ಲವ್‌ಸ್ಟೋರಿ ಕಟ್ಟಿಕೊಟ್ಟಿದ್ದಾರೆ. ಸುನಿ ಡೈಲಾಗ್ ಪಂಚ್‌ಗಳು, ಒನ್‌ ಲೈನರ್‌ಗಳು ಮಜಾ ಕೊಡುತ್ತದೆ.

ವಿನಯ್ ನಟನೆಯ 'ಪೆಪೆ' ಸಿನಿಮಾ ಕೂಡ ಬಹಳ ಕುತೂಹಲ ಮೂಡಿಸಿದೆ. ಚಿತ್ರದಲ್ಲಿ ಸಿಕ್ಕಾಪಟ್ಟೆ ರಗಡ್ ಲುಕ್‌ನಲ್ಲಿ ಅಣ್ಣಾವ್ರ ಮೊಮ್ಮಗ ಕಾಣಿಸಿಕೊಂಡಿದ್ದಾರೆ. 'ಅಂದೊಂದಿತ್ತು ಕಾಲ' ಎನ್ನುವ ಮತ್ತೊಂದು ಚಿತ್ರದಲ್ಲೂ ವಿನಯ್ ನಟಿಸಿದ್ದಾರೆ.

More from Filmibeat

English summary
Vinay Rajkumar makes his debut on Reels.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X