'ಮಾಸ್ ಲೀಡರ್'ನ 'ಗೆಳೆಯ ಎನಲೇ' ವಿಡಿಯೋ ಹಾಡು ನೋಡಿ..

By Suneel

'ರೋಸ್' ಖ್ಯಾತಿಯ ಸಹನಾ ಮೂರ್ತಿ(ನರಸಿಂಹ) ನಿರ್ದೇಶನದ 'ಮಾಸ್ ಲೀಡರ್' ಚಿತ್ರ ಹಲವು ಕಾರಣಗಳಿಂದ ಕನ್ನಡ ಸಿನಿ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ. ಇನ್ನು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಡ್ರಗ್ ಮಾಫಿಯಾದಲ್ಲಿ ತೊಡಗಿಕೊಂಡಿರುವವರನ್ನು ಸದೆಬಡೆಯುವ ಶಿವನಾಗಿ ಖಡಕ್ ಲೀಡರ್ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಇಷ್ಟುದಿನ ಶಿವಣ್ಣನ ಚಿತ್ರದ ಲುಕ್, ಟ್ರೈಲರ್ ಮತ್ತು ಹಾಡುಗಳಿಂದ ಕುತೂಹಲ ಹೆಚ್ಚಿಸಿದ್ದ 'ಮಾಸ್ ಲೀಡರ್' ಚಿತ್ರ, ಈಗ 'ಗೆಳೆಯ ಎನಲೇ' ಎಂಬ ವಿಡಿಯೋ ಹಾಡಿನಿಂದ ಕನ್ನಡ ಸಿನಿ ಪ್ರಿಯರನ್ನು ಇನ್ನಷ್ಟು ಗಮನ ಸೆಳೆದಿದೆ.

Watch 'Geleya Enale' video song from 'Mass Leader' Movie

ಚೇತನ್ ಗಂಧರ್ವ ಮತ್ತು ಶ್ರೇಯಾ ಘೋಷಲ್ ಹಾಡಿರುವ 'ಗೆಳೆಯ ಎನಲೇ.. ಇನಿಯಾ ಎನಲೇ' ಎಂಬ ಅಫೀಶಿಯಲ್ ವಿಡಿಯೋ ಸಾಂಗ್ ಒಂದನ್ನು ಚಿತ್ರತಂಡ ಮೊನ್ನೆಯಷ್ಟೇ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಿದ್ದು, ಈ ಹಾಡು ಪ್ರೇಕ್ಷಕರಿಗೆ ಹೆಚ್ಚು ಆಕರ್ಷಣೀಯವಾಗಿದೆ. ಬಿಡುಗಡೆ ಆದ ಎರಡು ದಿನಗಳಲ್ಲೇ 23 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆ ಪಡೆದಿದೆ. ಕಾರಣ ಈ ಪೂರ್ಣ ಸಾಂಗ್ ಉತ್ತಮ ಸಾಹಿತ್ಯದೊಂದಿಗೆ ಕೇಳಲು ಮತ್ತು ನೋಡಲು ಡೀಸೆಂಟ್ ಆಗಿದೆ. ಅಲ್ಲದೇ ಪೂರ್ಣವಾಗಿ ಹಿಮಾವೃತ ಪ್ರದೇಶದಲ್ಲಿ ಶೂಟ್ ಮಾಡಿದ್ದು, ವಿಸ್ಯುವಲ್ ಸಹ ತುಂಬಾ ರಿಚ್ ಆಗಿದೆ.

'ಗೆಳಯ ಎನಲೇ... ಇನಿಯಾ ಎನಲೇ' ಹಾಡಿನಲ್ಲಿ ಬಹುಭಾಷಾ ನಟ ವಂಶಿ ಕೃಷ್ಣ ಮತ್ತು ಆಶಿಕಾ ರಂಗನಾಥ್ ರವರು ಕಾಣಿಸಿಕೊಂಡಿದ್ದಾರೆ. ಕೇಳಲು ಇಂಪಾದ, ನೋಡಲು ಅದ್ಭುತವಾಗಿರುವ ಈ ವಿಡಿಯೋ ಹಾಡು ಈ ಕೇಳಗಿನಂತಿದೆ ನೋಡಿ.

More from Filmibeat

English summary
Watch 'Geleya Enale' video song from Shivarajkumar starrer 'Mass Leader' Movie. This Movie Directed by Sahana Murthy, features Pranitha Subash, Vamsi Krishna, Ashika Ranganath, Sharmila Mandre, Baby Parinita, Vijay Raghavendra and others.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X