»   » ವಿಡಿಯೋ: ಡ್ಯಾನ್ಸ್ ಕಿಂಗ್ ಪ್ರಭುದೇವ ಜೊತೆ 'ಮಿಲ್ಕಿ ಬ್ಯೂಟಿ'ಯ ಝಲಕ್

ವಿಡಿಯೋ: ಡ್ಯಾನ್ಸ್ ಕಿಂಗ್ ಪ್ರಭುದೇವ ಜೊತೆ 'ಮಿಲ್ಕಿ ಬ್ಯೂಟಿ'ಯ ಝಲಕ್

By: Sony
Subscribe to Filmibeat Kannada

ಡ್ಯಾನ್ಸ್ ಕಿಂಗ್ ಕನ್ನಡಿಗ ಪ್ರಭುದೇವ, ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಮತ್ತು ಖ್ಯಾತ ಖಳನಟ ಸೋನು ಸೂದ್ ಒಂದಾಗಿರುವ 'ಟುಟಕ್ ಟುಟಕ್ ಟುಟಿಯಾ' ಸಿನಿಮಾ, ಸಾಕಷ್ಟು ಸದ್ದು ಮಾಡುತ್ತಿದೆ.

ಟ್ರೈಲರ್ ಮೂಲಕ ಬಹಳ ನಿರೀಕ್ಷೆ ಮೂಡಿಸಿರುವ ಈ ಚಿತ್ರ ಮೂರು ಭಾಷೆಯಲ್ಲಿ ಏಕಕಾಲದಲ್ಲಿ ಮೂಡಿಬರುತ್ತಿದೆ. ಹಿಂದಿಯಲ್ಲಿ 'ಟುಟಕ್ ಟುಟಕ್ ಟುಟಿಯಾ', ತೆಲುಗಿನಲ್ಲಿ 'ಅಭಿನೇತ್ರಿ' ಮತ್ತು ತಮಿಳಿನಲ್ಲಿ 'ದೇವಿ' ಎಂಬ ಹೆಸರಿನಲ್ಲಿ ತೆರೆ ಕಾಣುತ್ತಿದೆ.[ಬೆನ್ನಿಗೆ ಗಾಯವಾಗಿ ಆಸ್ಪತ್ರೆಗೆ ದಾಖಲಾದ 'ಡ್ಯಾನ್ಸ್ ಕಿಂಗ್' ಪ್ರಭುದೇವ]

Watch Hindi Movie 'Tutak Tutak Tutiya' Title video song

ಚಿತ್ರಕ್ಕೆ ವಿಜಯ್ ಅವರು ಆಕ್ಷನ್-ಕಟ್ ಹೇಳಿದ್ದು, ಮೊದಲ ಬಾರಿಗೆ ಸೋನು ಸೂದ್ ಅವರು ಬಂಡವಾಳ ಹೂಡಿದ್ದಾರೆ. ಹಾರರ್ ಕಮ್ ಕಾಮಿಡಿ ಸಿನಿಮಾ ಆಗಿರುವ ಈ ಚಿತ್ರದ ಆಡಿಯೋ ಈಗಾಗಲೇ ಬಿಡುಗಡೆ ಆಗಿದೆ.

ಅಂದಹಾಗೆ ಡ್ಯಾನ್ಸ್ ಕಿಂಗ್ ಪ್ರಭುದೇವ ಈ ಸಿನಿಮಾದಲ್ಲಿ ಇದ್ದಾರೆ ಅಂದ ಮೇಲೆ, ಡ್ಯಾನ್ಸ್ ಕೂಡ ಸಖತ್ ಆಗೇ ಇರುತ್ತೆ ಅಲ್ವಾ?. ಹಾಗೆ ಪ್ರಭುದೇವ, ತಮನ್ನಾ ಮತ್ತು ಸೋನು ಸೂದ್ ಅವರು ಜಬರ್ದಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ.[ಮುಂಬೈ ಡಾನ್ಸರ್ ಜತೆ ಪ್ರಭುದೇವ ಎರಡನೇ ಮದುವೆ?]

Watch Hindi Movie 'Tutak Tutak Tutiya' Title video song

ಇದೀಗ ಚಿತ್ರದ ಟೈಟಲ್ ಸಾಂಗ್ ಬಿಡುಗಡೆ ಆಗಿದ್ದು, ಸಖತ್ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ. ಹಿಂದಿ 'ಟುಟಕ್ ಟುಟಕ್ ಟುಟಿಯಾ' ಚಿತ್ರದ 'ಟುಟಕ್ ಟುಟಕ್' ಟೈಟಲ್ ಸಾಂಗ್ ನಲ್ಲಿ ಈ ಮೂರು ಜನ ತುಂಬಾ ಎನರ್ಜಿಟಿಕ್ ಆಗಿ ಕುಣಿದಿದ್ದಾರೆ.

ಇನ್ನು ತಮನ್ನಾ ಅವರು ಕನ್ನಡದ 'ಜಾಗ್ವಾರ್' ಚಿತ್ರದಲ್ಲಿ ನಿಖಿಲ್ ಕುಮಾರ್ ಅವರ ಜೊತೆ, ವಿಶೇಷ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಸದ್ಯಕ್ಕೆ ತಮನ್ನಾ ಅವರು ಟುಟಕ್ ಹಾಡಿಗೆ ಹೇಗೆ ಕುಣಿದಿದ್ದಾರೆ ಅಂತ ನೋಡಿ, ಜಸ್ಟ್ ಆಲೋಚಿಸಿ, ಜಾಗ್ವಾರ್ ನಲ್ಲಿ ಹೇಗೆ ಡ್ಯಾನ್ಸ್ ಮಾಡಿರಬಹುದು ಅಂತ.

Watch Hindi Movie 'Tutak Tutak Tutiya' Title video song

ಅಕ್ಟೋಬರ್ 7ಕ್ಕೆ ಈ ಸಿನಿಮಾ ಮೂರು ಭಾಷೆಯಲ್ಲಿ ಏಕಕಾಲಕ್ಕೆ ತೆರೆ ಕಾಣಲಿದ್ದು, ಸದ್ಯಕ್ಕೆ 'ಟುಟಕ್ ಟುಟಕ್ ಟುಟಿಯಾ' ಚಿತ್ರದ ಟೈಟಲ್ ಸಾಂಗ್ ಕಲರ್ ಫುಲ್ ವಿಡಿಯೋವನ್ನು ನಿಮಗಾಗಿ ಹೊತ್ತು ತಂದಿದ್ದೇವೆ. ಒಂದ್ಸಾರಿ ಈ ಹಾಡಿನ ಝಲಕ್ ನೋಡಿ ಬಿಡಿ....

English summary
Watch Hindi Movie 'Tutak Tutak Tutiya' Title video song. Actor Prabhu Deva, Actress Tamanna Bhatia, Actor Sonu Sood in the lead. The film is a horror comedy and releases on 7th October 2016. DIrected by Vijay.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada