»   » ವಿಡಿಯೋ: 'ಪುಷ್ಪಕ ವಿಮಾನ'ದಲ್ಲಿ 'ಜಿಲ್ಕಾ ಜಿಲ್ಕಾ' ಜೂಹಿ ಚಾವ್ಲಾ

ವಿಡಿಯೋ: 'ಪುಷ್ಪಕ ವಿಮಾನ'ದಲ್ಲಿ 'ಜಿಲ್ಕಾ ಜಿಲ್ಕಾ' ಜೂಹಿ ಚಾವ್ಲಾ

Posted By:
Subscribe to Filmibeat Kannada

'ಪ್ರೇಮ ಲೋಕ' ಚಿತ್ರದಲ್ಲಿ ಶಕುಂತಲಾ ಆಗಿ ಎಲ್ಲರ ಮೆಚ್ಚುಗೆ ಗಳಿಸಿದ್ದ ನಟಿ ಜೂಹಿ ಚಾವ್ಲಾ ಅವರು, ಮತ್ತೆ 'ಪುಷ್ಪಕ ವಿಮಾನ' ಚಿತ್ರದ ಮೂಲಕ ಕನ್ನಡಕ್ಕೆ ಬಂದಿರೋದು ನಿಮಗೆ ಗೊತ್ತೇ ಇದೆ. ಚಿತ್ರದ ಒಂದು ವಿಶೇಷ ಹಾಡಿನಲ್ಲಿ ನಟಿ ಜೂಹಿ ಚಾವ್ಲಾ ಅವರು ಕಲರ್ ಫುಲ್ ಆಗಿ ಕಾಣಿಸಿಕೊಂಡು ಸಾಕಷ್ಟು ನಿರೀಕ್ಷೆ ಮೂಡಿಸಿದ್ದಾರೆ.

ಜೂಹಿ ಕನ್ನಡಕ್ಕೆ ಬರ್ತಾರೆ ಅಂತ ಅಂದಾಗ ಅಭಿಮಾನಿಗಳು ಹುರ್ರೆ ಅಂತ ಕುಣಿದಿದ್ದವರು, ಅವರ ಪೋಸ್ಟರ್ ಗಳು ರಿಲೀಸ್ ಆದಾಗ ಇನ್ನೂ ಖುಷಿಯಾಗಿದ್ದರು. ಇದೀಗ ಅವರು ಕಾಣಿಸಿಕೊಂಡಿರುವ ವಿಶೇಷ ಹಾಡು 'ಜಿಲ್ಕಾ ಜಿಲ್ಕಾ' ಮೇಕಿಂಗ್ ವಿಡಿಯೋ ಬಿಡುಗಡೆ ಆಗಿದೆ. ಸಂಗೀತ ನಿರ್ದೇಶಕ ಚರಣ್ ರಾಜ್ ಅವರು ಚಿತ್ರದ ಹಾಡುಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.[ಚಿತ್ರಗಳು: 'ಪುಷ್ಪಕ ವಿಮಾನ'ದಲ್ಲಿ ಜೂಹಿ ಅವರ ಗೆಟಪ್ ನೋಡಿದ್ರಾ?]


Watch 'Jilka Jilka' song making video by Kannada Movie 'Pushpaka Vimana'

ಬಹಳ ವಿಭಿನ್ನವಾಗಿರುವ ಮೇಕಿಂಗ್ ವಿಡಿಯೋ ನೋಡುತ್ತಿದ್ದರೆ, ಚಿತ್ರದಲ್ಲಿ ಅದೇನೋ ವಿಶೇಷ ಇದೆ ಅಂತಾಯ್ತು. ಹಲವು ದಶಕಗಳ ನಂತರ ಮತ್ತೆ ಜೂಹಿ ಅವರು ಕನ್ನಡದಲ್ಲಿ ಕಾಣಿಸಿಕೊಂಡಿದ್ದು ಎಲ್ಲರಿಗೂ ಖುಷಿ ತಂದಿದೆ.


ಮುರಳಿ ಮಾಸ್ಟರ್ ಅವರು ಕೊರಿಯೋಗ್ರಫಿ ಮಾಡಿರುವ 'ಜಿಲ್ಕಾ ಜಿಲ್ಕಾ' ಹಾಡಿಗೆ, ಜೂಹಿ ಚಾವ್ಲಾ ಅವರು ಈ ವಯಸ್ಸಿನಲ್ಲೂ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ ಅನ್ನೋದು ವಿಶೇಷ. ಸುಮಾರು 2೦ ಲಕ್ಷದ ಅದ್ಧೂರಿ ಸೆಟ್ ನಲ್ಲಿ, 80 ಜನ ಸಹ ಕಲಾವಿದರ ಜೊತೆ ಜೂಹಿ ಅವರು ಭಯಂಕರ ಸ್ಟೆಪ್ ಹಾಕಿದ್ದಾರೆ.['ಪುಷ್ಪಕ ವಿಮಾನ' ಏರ್ತಾರಾ ಕಿಂದರಿ ಜೋಗಿ ಜೂಹಿ ಚಾವ್ಲಾ]


Watch 'Jilka Jilka' song making video by Kannada Movie 'Pushpaka Vimana'

ನವ ನಿರ್ದೇಶಕ ಎಸ್.ರವೀಂದ್ರನಾಥ್ ಆಕ್ಷನ್-ಕಟ್ ಹೇಳಿರುವ 'ಪುಷ್ಪಕ ವಿಮಾನ' ಚಿತ್ರದಲ್ಲಿ ತಂದೆ-ಮಗಳ ಬಾಂಧವ್ಯವನ್ನು ಬಹಳ ಚೆಂದವಾಗಿ ಕಟ್ಟಿಕೊಡಲಾಗಿದೆ. ನಟ ರಮೇಶ್ ಅರವಿಂದ್ ಅವರ 100ನೇ ಸಿನಿಮಾ ಇದಾಗಿದ್ದು, ಚಿತ್ರದಲ್ಲಿ ಯುವಿನಾ ಪಾರ್ಥವಿ ಮತ್ತು ರಚಿತಾ ರಾಮ್ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.


ಜೂಹಿ ಚಾವ್ಲಾ ಅವರ 'ಜಿಲ್ಕಾ ಜಿಲ್ಕಾ' ವಿಶೇಷ ಹಾಡಿನ ಮೇಕಿಂಗ್ ಝಲಕ್ ಕಣ್ತುಂಬಿಕೊಳ್ಳಲು ಈ ವಿಡಿಯೋ ನೋಡಿ...


Watch 'Jilka Jilka' song making video by Kannada Movie 'Pushpaka Vimana'

English summary
Watch the 'Jilka Jilka' Song Making from Kannada Movie 'Pushpaka Vimana'. Starring Kannada Actor Ramesh Arvind, Actress Juhi Chawla, Actress Rachitha Ram, Baby Yuvina and others. Directed by S Ravindranath. Music composed by Charan Raj.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada