For Quick Alerts
  ALLOW NOTIFICATIONS  
  For Daily Alerts

  ಜೋಡಕ್ಕಿ ಗೂಡಲ್ಲಿ ಕಿಚ್ಚ ಸುದೀಪ್ ಕುಚ್ ಕುಚ್

  By Harshitha
  |

  ಬರೀ ಸಿನಿಮಾಗಳಿಗೆ ಮಾತ್ರ ಅಲ್ಲ, ಕಿಚ್ಚ ಸುದೀಪ್ ಕಂಚಿನ ಕಂಠಕ್ಕೂ ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ಡಿಮ್ಯಾಂಡ್ ಇದೆ. ಅನೇಕ ಚಿತ್ರಗಳಿಗೆ ವಾಯ್ಸ್ ಓವರ್ ಕೊಟ್ಟು, ಚಿತ್ರದ ಯಶಸ್ಸಿಗೆ ಬೂಸ್ಟ್ ಕೊಟ್ಟಿರುವ ಸುದೀಪ್, ಉತ್ತಮ ಗಾಯಕ ಕೂಡ ಹೌದು.

  ಸಂಗೀತ ಜ್ಞಾನವನ್ನ ಮೈಗೂಡಿಸಿಕೊಂಡಿರುವ ಸುದೀಪ್, 'ವಾಲಿ' ಚಿತ್ರದ ''ಓ ಸೋನಾ...'' ದಂತಹ ರೋಮ್ಯಾಂಟಿಕ್ ಹಾಡುಗಳನ್ನ ಗುನುಗುವುದಕ್ಕೂ ಸೈ. ಹಾಗೆ, 'ರಂಗ ಎಸ್.ಎಸ್.ಎಲ್.ಸಿ' ಚಿತ್ರದ ''ಡವ್ ಡವ್...'' ನಂತಹ ಮಾಸ್ ಸಾಂಗ್ ಹಾಡುವುದಕ್ಕೂ ಜೈ.

  ''ಜಿಂತಾತ...'', ''ಹಳೇ ರೇಡಿಯೋ...'' ಸೇರಿದಂತೆ ಅನೇಕ ಹಾಡುಗಳಲ್ಲಿ ಗಾನಸುಧೆ ಹರಿಸಿರುವ ಸುದೀಪ್ ಇದೀಗ ಎ.ಪಿ.ಅರ್ಜುನ್ ನಿರ್ದೇಶನದ 'ರಾಟೆ' ಚಿತ್ರದ ಹಾಡಿಗೆ ದನಿಯಾಗಿದ್ದಾರೆ.

  ''ಜೋಡಕ್ಕಿ ಗೂಡ್ಕಟ್ಕಂತ್ತಾವೆ...'' ಅಂತ ಶುರುವಾಗುವ ಸುಮಧುರ ಹಾಡಿಗೆ ಅಷ್ಟೇ ಮಧುರ ಕಂಠದಿಂದ ಸೊಗಸಾಗಿ ಹಾಡಿದ್ದಾರೆ ಸುದೀಪ್. ಪ್ರೊಫೆಶನಲ್ ಸಿಂಗರ್ ನಂತೆ ಫುಲ್ ಫೀಲ್ ನಲ್ಲಿ ಸುದೀಪ್ ಹಾಡಿರುವ ಈ ಹಾಡನ್ನ ಕೇಳ್ತಿದ್ರೆ, ಎಂಥವರಿಗೂ ರೋಮಾಂಚನ ಆಗುವುದು ಗ್ಯಾರೆಂಟಿ.

  ಬರೀ ಮಾಸ್ ಹಾಡುಗಳಿಗೆ ಮಾತ್ರ ಸುದೀಪ್ ಮೀಸಲು ಅನ್ನುತ್ತಿದ್ದವರಿಗೆ ತಾನು ಉತ್ತಮ ಗಾಯಕ ಅಂತ ಸುದೀಪ್ ಈ ಹಾಡಲ್ಲಿ ಪ್ರೂವ್ ಮಾಡಿದ್ದಾರೆ. ವಿ.ಹರಿಕೃಷ್ಣ ಸಂಯೋಜಿಸಿರುವ ರಾಗ-ತಾಳಕ್ಕೆ ಶೃತಿ ಸೇರಿಸಿ ಅಚ್ಚುಕಟ್ಟಾಗಿ ಅಭಿಮಾನಿಗಳ ಪ್ರೀತಿಯ ನಲ್ಲ ಹಾಡಿದ್ದಾರೆ. ಬೇಕಾದ್ರೆ, ನೀವೇ ಕೇಳಿ....

  'ಅಂಬಾರಿ', 'ಅದ್ದೂರಿ' ನಂತ್ರ ನಿರ್ದೇಶಕ ಎ.ಪಿ.ಅರ್ಜುನ್ ನಿರ್ದೇಶಿಸಿರುವ ಮತ್ತೊಂದು ಮನಮಿಡಿಯುವ ಪ್ರೇಮ ಕಥೆ ಈ 'ರಾಟೆ'. ಧನಂಜಯ್ ಮತ್ತು ಶೃತಿ ಹರಿಹರನ್ ನಟಿಸಿರುವ 'ರಾಟೆ', ಈಗಾಗಲೇ ಹಲವು ವಿಶೇಷತೆಗಳಿಂದ ಎಲ್ಲರ ಮನೆಮಾತಾಗಿದೆ. ಇದರೊಂದಿಗೆ ಸುದೀಪ್ ಗಾಯನ, 'ರಾಟೆ' ಚಿತ್ರಕ್ಕೆ ಎಕ್ಸ್ ಟ್ರಾ ವಾಲ್ಯೂ ನೀಡಿದೆ. [ಈ ಆರು ನಟರಲ್ಲಿ ಉತ್ತಮ ಗಾಯಕರಾರು?ನಿಮ್ಮ ಆಯ್ಕೆ]

  ಸೆನ್ಸಾರ್ ನಿಂದ ಗ್ರೀನ್ ಸಿಗ್ನಲ್ ಪಡೆದಿರುವ 'ರಾಟೆ' ಮಾರ್ಚ್ ಮೊದಲ ವಾರದಲ್ಲಿ ತೆರೆಗೆ ಬರಲಿದೆ. ಅಲ್ಲಿಯವರೆಗೂ 'ಜೋಡಕ್ಕಿಯ ಗೂಡನ್ನ' ನೋಡಿ ಸುದೀಪ್ ಹಾಡನ್ನ ಗುನುಗುತ್ತಿರಿ. (ಫಿಲ್ಮಿಬೀಟ್ ಕನ್ನಡ)

  English summary
  A.P.Arjun directed Raate (also spelled as Rhaatee) is in news for melodious songs composed by V.Harikrishna. Video and the Making of Jodakki song sung by Sudeep is out. Watch the video here.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X