»   » 'ಪ್ರೀತಿಗೆ ಬಿದ್ದರೆ ಪ್ರಪಂಚ ಏನಾಗುತ್ತೇ'? ರವಿಮಾಮ ಕೊಟ್ಟ ಉತ್ತರ

'ಪ್ರೀತಿಗೆ ಬಿದ್ದರೆ ಪ್ರಪಂಚ ಏನಾಗುತ್ತೇ'? ರವಿಮಾಮ ಕೊಟ್ಟ ಉತ್ತರ

Posted By:
Subscribe to Filmibeat Kannada

'ಪ್ರಪಂಚವು ಕಾಣದು ಪ್ರೀತಿಗೆ ಬಿದ್ದರೆ' ಎನ್ನುತ್ತಿದ್ದಾರೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರು. ಕನಸುಗಾರ ರವಿಚಂದ್ರನ್ ಅವರ ಬಹುನಿರೀಕ್ಷಿತ ಸಿನಿಮಾ 'ಅಪೂರ್ವ'ದಲ್ಲಿ ಇಂತಹದೊಂದು ಹಾಡಿದ್ದು, ಸಾಕಷ್ಟು ರೆಸ್ಪಾನ್ಸ್ ಗಳಿಸುತ್ತಿದೆ.

ನವ ಪ್ರತಿಭೆ ಅಪೂರ್ವ ಮತ್ತು ರವಿಚಂದ್ರನ್ ಕಾಣಿಸಿಕೊಂಡಿರುವ 'ಅಪೂರ್ವ' ಸಿನಿಮಾ ಈ ಶುಕ್ರವಾರ ತೆರೆ ಕಾಣುತ್ತಿದ್ದು, ಎಲ್ಲರೂ ಚಿತ್ರದ ಬಿಡುಗಡೆಗೆ ಕಾತರದಿಂದ ಕಾದಿದ್ದಾರೆ.[ಕ್ರೇಜಿಸ್ಟಾರ್ ರವಿಚಂದ್ರನ್ ಪ್ರಿಯತಮೆ 'ಅಪೂರ್ವ' ಯಾರೀಕೆ?]


Watch Kannada Movie 'Apoorva' 'Prapanchavu Kaanadu' video song

ಇದೀಗ 'ಅಪೂರ್ವ' ಚಿತ್ರದ 'ಪ್ರಪಂಚವು ಕಾಣದು ಪ್ರೀತಿಗೆ ಬಿದ್ದರೆ' ಎಂಬ ಸುಂದರ ವಿಡಿಯೋ ಸಾಂಗ್ ಹೊರಬಂದಿದ್ದು, ಹಾಡಿನಲ್ಲಿ ರವಿಚಂದ್ರನ್ ಅವರ ಕ್ರಿಯೇಟಿವಿಟಿ ಬಹಳ ಸ್ಪಷ್ಟವಾಗಿ ವ್ಯಕ್ತವಾಗುತ್ತಿದೆ.


ಬಹಳ ಅರ್ಥಪೂರ್ಣ ಸಾಹಿತ್ಯಕ್ಕೆ ತಕ್ಕುದಾದ ಸಂಗೀತ ನೀಡಿರುವ ರವಿಚಂದ್ರನ್ ಅವರು ತಮ್ಮ ಚಿತ್ರದಲ್ಲಿ ಸುಂದರವಾದ ರೋಮ್ಯಾಂಟಿಕ್ ಹಾಡುಗಳನ್ನು ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.['ಅಪೂರ್ವ' ಚಿತ್ರದ ಬಗ್ಗೆ ರಹಸ್ಯ ಬಿಚ್ಚಿಟ್ಟ ಕ್ರೇಜಿ ಸ್ಟಾರ್ ರವಿಚಂದ್ರನ್.!]


Watch Kannada Movie 'Apoorva' 'Prapanchavu Kaanadu' video song

ಈ ಮೊದಲೇ ಆಡಿಯೋ ಸಾಂಗ್ ಬಿಡುಗಡೆ ಆಗಿದ್ದು, ಎಲ್ಲರ ಮೆಚ್ಚುಗೆ ಗಳಿಸಿತ್ತು. ಇದೀಗ ವಿಡಿಯೋ ಸಾಂಗ್ ಒಂದನ್ನು ಬಿಡುಗಡೆ ಮಾಡಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಅಭಿಮಾನಿಗಳಿಗೆ ಚಿತ್ರದ ಬಗ್ಗೆ ಇನ್ನೂ ಕುತೂಹಲ ಹೆಚ್ಚಿಸಿದ್ದಾರೆ.


ಸಂಗೀತ ನಿರ್ದೇಶಕ ಗೌತಮ್ ಶ್ರೀವತ್ಸ ಅವರು ಹಾಡಿರುವ 'ಪ್ರಪಂಚವು ಕಾಣದು ಪ್ರೀತಿಗೆ ಬಿದ್ದರೆ' ಎಂಬ ಹಾಡು ಎಲ್ಲರ ಮೆಚ್ಚುಗೆ ಗಳಿಸಿದ್ದು, ನೋಡಲು ಸಖತ್ ಕಲರ್ ಫುಲ್ ಆಗಿದೆ. ಈ ಹಾಡನ್ನು ಮತ್ತೆ ಮತ್ತೆ ನೋಡಬೇಕೆನ್ನಿಸುತ್ತಿದ್ದು, ಪ್ರೇಮಿಗಳು ಈ ಹಾಡು ಕೇಳಿದರೆ ಎಲ್ಲೋ ಕಳೆದು ಹೋಗೋದು ಗ್ಯಾರೆಂಟಿ.


ಕ್ರೇಜಿಸ್ಟಾರ್ ಅವರ ಟಿಪಿಕಲ್ ಸ್ಟೈಲ್ ಮತ್ತು ಕಲರ್ ಫುಲ್ 'ಪ್ರಪಂಚವು ಕಾಣದು ಪ್ರೀತಿಗೆ ಬಿದ್ದರೆ' ವಿಡಿಯೋ ಸಾಂಗ್ ಅನ್ನು ಈ ಶುಕ್ರವಾರ ಚಿತ್ರಮಂದಿರದಲ್ಲಿ ನೋಡುವ ಮೊದಲು ಇಲ್ಲೊಮ್ಮೆ ನೋಡಿ ಎಂಜಾಯ್ ಮಾಡಿ...English summary
Watch Kannada Movie 'Apoorva' 'Prapanchavu Kaanadu' video song. Kannada Actor Ravichandran, Actress Apoorva in the lead role. Music Composed by Ravichandran. The movie is directed by Ravichandran.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada