»   » ಹೆಲ್ಮೆಟ್ ಧರಿಸುವ ಎಲ್ಲರೂ ಈ ಹಾಡನ್ನ ಕೇಳಲೇಬೇಕು.!

ಹೆಲ್ಮೆಟ್ ಧರಿಸುವ ಎಲ್ಲರೂ ಈ ಹಾಡನ್ನ ಕೇಳಲೇಬೇಕು.!

Posted By:
Subscribe to Filmibeat Kannada

ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಓಕೆ.! ಹಿಂಬದಿ ಸವಾರರಿಗೆ ಯಾಕೆ? ಈ ಓಕೆ! ಯಾಕೆ? ಎಂಬ ನಡುವೆ ನಿಯಮ ಜಾರಿ ಆಗಿ ಒಂದು ತಿಂಗಳು ಕಳೆದೇ ಹೋಗಿದೆ. ಕಷ್ಟವೋ, ಸುಖವೋ ಬೈಕ್ ನಲ್ಲಿ ಕೂರುವವರೆಲ್ಲರೂ ಹೆಲ್ಮೆಟ್ ಧರಿಸಲೇಬೇಕು. [ಹೆಲ್ಮೆಟ್ ಕಡ್ಡಾಯ; ಯಾರಿಗ್ಹೇಳೋಣ ನಮ್ಮ ಪ್ರಾಬ್ಲಮ್ಮು..]

ಅಷ್ಟಕ್ಕೂ, 'ಫಿಲ್ಮಿಬೀಟ್ ಕನ್ನಡ'ದಲ್ಲಿ ಯಾಕೆ ಹೆಲ್ಮೆಟ್ ತಲೆ ನೋವು ಅಂತ ಕನ್ ಫ್ಯೂಸ್ ಆದ್ರಾ? 'ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಎಷ್ಟು ಸರೀರಿ..?' ಎಂಬ ಪ್ರಶ್ನೆ ಇಟ್ಟುಕೊಂಡು ನಿರ್ದೇಶಕ ಪವನ್ ಒಡೆಯರ್ ಒಂದು ಹಾಡು ರಚಿಸಿದ್ದಾರೆ. ಹೆಲ್ಮೆಟ್ ಹಾಡು ಹೇಗಿದೆ ಅಂತ ನೀವೇ ಒಮ್ಮೆ ಕೇಳಿ....

ಪವನ್ ಒಡೆಯರ್ ನಿರ್ದೇಶನದ 'ಜೆಸ್ಸಿ' ಚಿತ್ರದ ಪ್ರಮೋಷನ್ ನಿಮಿತ್ತ ಈ 'ಹೆಲ್ಮೆಟ್ ಹಾಡು' ರೆಡಿಯಾಗಿದೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನದ 'ಜೆಸ್ಸಿ' ಚಿತ್ರದ ಹಾಡಿನ ಟ್ಯೂನ್ ನಲ್ಲೇ 'ಹೆಲ್ಮೆಟ್ ಹಾಡು' ತಯಾರಾಗಿರುವುದು ಮತ್ತೊಂದು ವಿಶೇಷ. [ಹೆಣ್ಮಕ್ಳ ಹೆಲ್ಮೆಟ್ ಹಿಂಗಿದ್ರ ಹೆಂಗ್...? ಹೇಳ್ರಲ್ಲಾ..!]

ಹೀಗಿದ್ದರೂ ನಾಳೆ ಪ್ರೇಮಿಗಳ ದಿನ. ಪ್ರೇಮಿಗಳಿಗೆ 'ಹೆಲ್ಮೆಟ್ ಕಡ್ಡಾಯ' ನಿಯಮ ಖುಷಿ ಕೊಟ್ಟಿರುವುದರಿಂದ 'ಜೆಸ್ಸಿ' ಚಿತ್ರತಂಡದಿಂದ ಎಲ್ಲಾ ಪ್ರೇಮಿಗಳಿಗೆ 'ಹೆಲ್ಮೆಟ್ ಹಾಡು' ಗಿಫ್ಟ್ ಆಗಿ ಸಿಕ್ಕಿದೆ. ಮಜವಾಗಿರುವ ಹಾಡನ್ನ ನೀವೂ ಕೇಳಿ, ಖುಷಿ ಪಡಿ...[ಹೆಲ್ಮೆಟ್ ಕಡ್ಡಾಯ; ಸಿ.ಎಂ ಮನೆ ಮುಂದೆ ಯುವಕ-ಯುವತಿ ಮಾಡಿದ್ದೇನು?]

English summary
Based on the current scenario where Helmet is mandatory for pillion riders, Director Pavan Wadeyar has written 'Helmet Song' as a part of Promotion for his directorial project 'Jessie'. Watch 'Helmet Song' here.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada