'ಹೂನ ಹೂನ' ಅಂತ ಸುದೀಪ್ ಜೊತೆ ನಿತ್ಯಾ ಮೆನನ್ ಕಿಲಕಿಲ

By Suneetha

ಖ್ಯಾತ ತಮಿಳು ನಿರ್ದೇಶಕ ಕೆ.ಎಸ್ ರವಿಕುಮಾರ್ ನಿರ್ದೇಶನದ 'ಕೋಟಿಗೊಬ್ಬ 2' ಚಿತ್ರ ಆಗಸ್ಟ್ ನಲ್ಲಿ ತೆರೆಗೆ ಬರುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದ್ದು, ಆಗಸ್ಟ್ 12ಕ್ಕೆ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡದವರು ಯೋಜನೆ ಹಾಕಿಕೊಂಡಿದ್ದಾರೆ.

ಇನ್ನು ಚಿತ್ರದ ಆಡಿಯೋ ಈಗಾಗಲೇ ಬಿಡುಗಡೆ ಆಗಿರುವುದರಿಂದ 'ಕೋಟಿಗೊಬ್ಬ 2' ತೆರೆ ಮೇಲೆ ಬರೋವರೆಗೂ ಅಭಿಮಾನಿಗಳು ಹಾಡು ಕೇಳ್ತಾ ಇರ್ಲಿ ಅಂತ ಚಿತ್ರತಂಡದವರು ಒಂದೊಂದೇ ವಿಡಿಯೋ ಸಾಂಗ್ ಗಳನ್ನು ಬಿಡುಗಡೆ ಮಾಡ್ತಾ ಇದ್ದಾರೆ.[ಆಗಸ್ಟ್ ನಲ್ಲಿ 'ಕೋಟಿಗೊಬ್ಬ'ನ ದರ್ಬಾರ್ ಶುರುವಾಗುತ್ತಾ.?]

Watch Kannada Movie 'Kotigobba 2' 'Hunna Hunna' Lyrical Video song

ಮೊನ್ನೆ ಮೊನ್ನೆ 'ಕೋಟಿಗೊಬ್ಬ' ಎಂಬ ಟೈಟಲ್ ಟ್ರ್ಯಾಕ್ ಬಿಡುಗಡೆ ಮಾಡಿದ್ದ ಚಿತ್ರತಂಡ ಇದೀಗ ಸುದೀಪ್ ಮತ್ತು ನಿತ್ಯಾ ಮೆನನ್ ನಡುವಿನ ರೋಮ್ಯಾಂಟಿಕ್ 'ಹುನ್ನ ಹುನ್ನ' ಎಂಬ ಹಾಡನ್ನು ರಿಲೀಸ್ ಮಾಡಿದ್ದಾರೆ.

ಬೆಂಗಳೂರಿನ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ನಡೆದಿರುವ ಈ ಹಾಡಿನಲ್ಲಿ ಸುದೀಪ್ ಮತ್ತು ನಿತ್ಯಾ ಮೆನನ್ ಅವರು ಬಹಳ ಮುದ್ದು-ಮುದ್ದಾಗಿ ಕಾಣಿಸುತ್ತಿದ್ದಾರೆ.[ಎಕ್ಸ್ ಕ್ಲೂಸಿವ್: 'ಕೋಟಿಗೊಬ್ಬ-2' ಚಿತ್ರದ ಬೊಂಬಾಟ್ ಫೋಟೋಗಳು]

Watch Kannada Movie 'Kotigobba 2' 'Hunna Hunna' Lyrical Video song

ಸಂಗೀತ ನಿರ್ದೇಶಕ ಡಿ.ಇಮ್ಮಾನ್ ಕಂಪೋಸ್‌ ಮಾಡಿರುವ ಈ ಹಾಡನ್ನು ಗಾಯಕ ಜಿತಿನ್ ರಾಜ್, ಗಾಯಕಿ ಸಾಷಾ ತಿರುಪತಿ ಮತ್ತು ಗಾಯಕ ಮೆಕ್ ರೂಡ್ ಹಾಡಿದ್ದು, ಈ ಹಾಡು ಸಖತ್ ಕಲರ್ ಫುಲ್ ಆಗಿದೆ.[ಧ್ವನಿಸುರುಳಿ ವಿಮರ್ಶೆ: ಸುದೀಪ್ ಅಭಿನಯದ ಕೋಟಿಗೊಬ್ಬ 2]

ಅಭಿಮಾನಿಗಳು ಕೂಡ ಈ ಹಾಡನ್ನು ಬಹಳ ಮೆಚ್ಚಿಕೊಂಡಿದ್ದು, ಸುದೀಪ್ ಅವರ ಸ್ಟೈಲಿಷ್ ಲುಕ್ ಗೆ ಮಾರು ಹೋಗಿದ್ದಾರೆ. ಅಂದಹಾಗೆ ಈ ಹಾಡಿನ ಬಗ್ಗೆ ನಾವು ಹೇಳೋದಕ್ಕಿಂತ ಸದ್ಯಕ್ಕೆ ಬಿಡುಗಡೆ ಆಗಿರುವ ರೋಮ್ಯಾಂಟಿಕ್ 'ಹುನ್ನ ಹುನ್ನ' ಲಿರಿಕಲ್ ವಿಡಿಯೋ ಸಾಂಗ್ ನೀವೇ ನೋಡಿ ಎಂಜಾಯ್ ಮಾಡೋದು ವಾಸಿ...

More from Filmibeat

English summary
Watch Actor Sudeep and Actress Nithya menen starrer Kannada Movie 'Kotigobba 2' 'Hunna Hunna' Lyrical Video song. The movie is directed by KS Ravikumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X