ಕನ್ನಡದಲ್ಲಿ ಕೊಲವೆರಿಡಿ ಹಾಡು ಬಂದಿದೆ, ಹೆಡ್ ಸೆಟ್ ಹಾಕ್ಕೊಳ್ಳಿ
ಕಾಲಿವುಡ್ ಅಂಗಳದಲ್ಲಿ ''ವೈ ದಿಸ್ ಕೊಲವೆರಿ...'' ಅಂತ ಧನುಷ್ ಹಾಡಿದ್ದೇ ತಡ, ಸೂಪರ್ ಸ್ಟಾರ್ ರಜನಿಕಾಂತ್ ಅಳಿಯ ನಟ ಧನುಷ್ ಏಕ್ದಂ ವರ್ಲ್ಡ್ ವೈಡ್ ಫೇಮಸ್ ಆಗಿಬಿಟ್ಟರು.
'ಕೊಲವೆರಿ' ಕಮಾಲ್ ನಿಂದ ಗಾಯನ ಲೋಕದಲ್ಲೂ ಅಪಾರ ಬೇಡಿಕೆ ಕಂಡುಕೊಂಡಿರುವ ನಟ ಧನುಷ್ ಕನ್ನಡಕ್ಕೆ ಕಾಲಿಟ್ಟಿರುವ ಸುದ್ದಿ ಹಳೆಯದ್ದೇ. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 'ವಜ್ರಕಾಯ' ಚಿತ್ರದ ಹಾಡೊಂದಕ್ಕೆ ಕಾಲಿವುಡ್ ನಟ ಧನುಷ್ ಗಾನಸುಧೆ ಹರಿಸಿದ್ದಾರೆ.
ಹಾಗಾದ್ರೆ, ನಟ ಧನುಷ್ ಹಾಡಿರುವ ಹಾಡು ಹೇಗಿದೆ ಅನ್ನುವ ಕುತೂಹಲಕ್ಕೆ ಇದೀಗ ಬ್ರೇಕ್ ಬಿದ್ದಿದೆ. 'ವಜ್ರಕಾಯ' ಚಿತ್ರದಲ್ಲಿ ಧನುಷ್ ಹಾಡಿರುವ ಹಾಡಿನ ಝಲಕ್ ರಿಲೀಸ್ ಆಗಿದೆ ನೋಡಿ......
ತಮಿಳಿನ ''ವೈ ದಿಸ್ ಕೊಲವೆರಿ...'' ರೇಂಜ್ ನಲ್ಲಿ ಗೀತ ಸಾಹಿತಿ ಮೋಹನ್ ರಚಿಸಿರುವ ''ನೋ ಪ್ರಾಬ್ಲಂ....ನೋ ಪ್ರಾಬ್ಲಂ....'' ಹಾಡಿಗೆ ದನಿಯಾಗಿದ್ದಾರೆ ಧನುಷ್. ಅರ್ಜುನ್ ಜನ್ಯ ಹಾಕಿರುವ ಪೆಪ್ಪಿ ತಾಳಕ್ಕೆ, ಧನುಷ್ 'ಶೃತಿ' ಸರಿಯಾಗಿ ಸೇರಿರುವ ಕಾರಣ, ಹಾಡನ್ನ ಕೇಳಿದ ತಕ್ಷಣ ಎಂಥವರೂ ತಲೆದೂಗುವುದು ಗ್ಯಾರೆಂಟಿ. [ಕನ್ನಡಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಅಳಿಯ ಧನುಷ್]
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ನಿರ್ದೇಶಕ ಎ.ಹರ್ಷ ನೀಡಿದ ಆಹ್ವಾನದ ಮೇರೆಗೆ ಹಾಗು ಡಾ.ರಾಜ್ ಕುಟುಂಬದ ಮೇಲಿನ ಅಭಿಮಾನಕ್ಕೆ ಯಾವುದೇ ಸಂಭಾವನೆ ಪಡೆಯದೆ ನಟ ಧನುಷ್ ಹಾಡಿದ್ದಾರೆ.
ಇದರಿಂದ ಖುಷಿಯಾದ ನಿರ್ಮಾಪಕರು ಮಾತ್ರ ನಾಲ್ಕು ಲಕ್ಷ ರೂಪಾಯಿ ಬೆಲೆ ಬಾಳುವ ಕೈಗಡಿಯಾರವನ್ನ ಧನುಷ್ ಗೆ ಉಡುಗೊರೆಯಾಗಿ ನೀಡಿದ್ದಾರೆ. 'ಭಜರಂಗಿ' ಚಿತ್ರದ ನಂತ್ರ ಹರ್ಷ ಮತ್ತು ಶಿವಣ್ಣ ಕಾಂಬಿನೇಷನ್ ನಲ್ಲಿ ರೆಡಿಯಾಗುತ್ತಿರುವ ಎರಡನೇ ಚಿತ್ರ ಈ 'ವಜ್ರಕಾಯ'. [ಕನ್ನಡ ಹಾಡು ಹಾಡಲು ನಟ ಧನುಷ್ ಗೆ ರು. 4 ಲಕ್ಷ]

ಕಾಲಿವುಡ್ ಮತ್ತು ಟಾಲಿವುಡ್ ನಿಂದ ದೊಡ್ಡ ತಾರಾ ದಂಡೇ ಪ್ರತ್ಯಕ್ಷವಾಗಿರುವ 'ವಜ್ರಕಾಯ' ಚಿತ್ರದ ಹೈಲೈಟ್ ಈ ''ನೋ ಪ್ರಾಬ್ಲಂ...'' ಹಾಡು. ಆಡಿಯೋ ರಿಲೀಸ್ ಆಗುವವರೆಗೂ ಯಾವುದೇ ಪ್ರಾಬ್ಲಂ ಇಲ್ಲದೇ ಈ ಟೀಸರ್ ನೋಡಿ ಎಂಜಾಯ್ ಮಾಡಿ. (ಫಿಲ್ಮಿಬೀಟ್ ಕನ್ನಡ)
ಯಾಕಮ್ಮ ನಗ್ತೀಯಾ...ಹಿಂಗ್ಯಾಕೆ ಕೊಲ್ತೀಯಾ...
ನಿನ್ ನಗು ನೋಡ್ಬುಟ್ಟು ಬಲ್ಬ್ ಆಫ್ ಆಗೋಯ್ತು...
ಸ್ಟ್ರಾಂಗ್ ಇತ್ತು ನನ್ ಬಾಡಿ...ವೀಕ್ ಆಯ್ತು ನಿನ್ ನೋಡಿ...
ಆಗ್ಬಿಟ್ರೆ ನಾವ್ ಜೋಡಿ ಕೊಲವೆರಿಡಿ.
ಕೇಳೇ ಟ್ವಿಂಕಲ್ ಟ್ವಿಂಕಲ್ ಲಿಟಿಲ್ ಸ್ಟಾರ್..
ನೀನೇ ನನ್ನ ಸೂಪರ್ ಸ್ಟಾರ್...
ನಾನೇ ನಿನ್ನ ರಾಜ್ ಕುಮಾರ.


Click it and Unblock the Notifications












