For Quick Alerts
  ALLOW NOTIFICATIONS  
  For Daily Alerts

  ವಿಡಿಯೋ : ಸಂಗೀತಗಾರ ಭರತ್ ಬಿಜೆ ಸಂದರ್ಶನ

  By Mahesh
  |

  ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಭರತ್ ಬಿಜೆ ಓದಿದ್ದು ಇಂಜಿನಿಯರಿಂಗ್ ಆದರೆ, ಆಸಕ್ತಿ ಬೆಳೆಸಿಕೊಂಡಿದ್ದು ಸಂಗೀತ ಸಂಯೋಜನೆಯಲ್ಲಿ...ಭರತ್ ಬಿಜೆ ಅವರು ಸುನಿ ನಿರ್ದೇಶನದ ಎರಡನೇ ಚಿತ್ರ ಬಹು ಪರಾಕ್ ಗೂ ಉತ್ತಮ ಸಂಯೋಜನೆ ನೀಡಿದ್ದಾರೆ.

  ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಮತ್ತು ಬಹು ಪರಾಕ್ ಚಿತ್ರದ ಸಂಗೀತ ನಿರ್ದೇಶಕ ಭರತ್ ಬಿ ಜೆ ಅವರು ಸಂವಾದ ಡಾಟ್ ಕಾಮ್ ಗೆ ಇತ್ತೀಚೆಗೆ ಸಂದರ್ಶನ ನೀಡಿದ್ದಾರೆ. ಭರತ್ ಚಲನಚಿತ್ರ ಸಂಗೀತದ ಬೆಳೆವಣಿಗೆ, ಮಾರುಕಟ್ಟೆ ವ್ಯಾಪ್ತಿ, ಪರಭಾಷಾ ಗಾಯಕರ ಬಳಕೆ ಮತ್ತು ತನ್ನ ಹೊಸ ಚಿತ್ರ ಬಹುಪರಾಕ್ ಚಿತ್ರದ ಬಗ್ಗೆ ಮಾತಾಡಿದ್ದಾರೆ.

  ಗಾಯಕ, ಸಂಗೀತ ಸಂಯೋಜಕ, ಯುಫೋನಿ ಹೆಸರಿನ ಮ್ಯೂಸಿಕ್ ತಂಡ ಬೆಳೆಸುತ್ತಾ ಸಂಗೀತ ಸಂಘಟಕರೂ ಆಗಿರುವ ಭರತ್ ಬಿಜೆಗೆ ಸಂಗೀತ, ಹಾಡುಗಾರಿಕೆಯಲ್ಲಿ ಆಸಕ್ತಿ ಬೆಳೆಯಲು 'ಮಹಾಭಾರತ' ಸೀರಿಯಲ್ ಕಾರಣವಂತೆ.

  ವಿಶಾಲ್ ಭಾರದ್ವಾಜ್, ಎ.ಆರ್ ರೆಹಮಾನ್, ಏರೋಸ್ಮಿತ್, ಇಳಯರಾಜ, ಲಿಂಕನ್ ಪಾರ್ಕ್ ಇಷ್ಟಪಡುವ ಭರತ್ ಬಿಜೆ ರಾಗ ಸಂಯೋಜನೆಗೆ ಬಳಸುವ ಸಾಧನಗಳು ಕನ್ನಡ ಚಿತರಂಗದಲ್ಲೇ ವಿಶಿಷ್ಟವಾಗಿದೆ ಎನ್ನಬಹುದು. ವಿಡಿಯೋ ಸರಣಿಯಲ್ಲಿ ಭರತ್ ಬಿಜೆ ಮಾತಲ್ಲೇ ಅವರ ಬಗ್ಗೆ ಕೇಳಿ.. ನೋಡಿ ಆನಂದಿಸಿ.. [ಮತ್ತೊಬ್ಬ ಸಂಗೀತ ನಿರ್ದೇಶಕನ ಸಂದರ್ಶನ]

  ಭರತ್ ಬಿಜೆ ಸಂಗೀತ ಸಾಧನ ಖಜಾನೆ

  ಭರತ್ ಬಿಜೆ ಸಂಗೀತ ಸಾಧನ ಖಜಾನೆ

  ಭರತ್ ಬಿಜೆ ಸಂಗೀತ ಸಾಧನ ಖಜಾನೆಯಲ್ಲಿರುವುದು M-Audio Axiom pro 61 Midi controller, SSL Alpha link MX AD/DA, SSL MADI Xtreme I/O PCIe card, SPL Channel one(Mic pre and channel strip), UAD2 Satellite Quad DSP, SONODYNE sound monitors, Cubase 7.5 DAW, Vienna Ensemble and library.

  ಭರತ್ ಬಿಜೆ ಸಂದರ್ಶನ ಭಾಗ -1

  ಸಂದರ್ಶನ, ಸಂಕಲನ ಮತ್ತು ಕ್ಯಾಮೆರಾ : ಕುಂಟಾಡಿ ನಿತೇಶ್ Kuntady Nithesh .

  ಸಹಕಾರ: ವಾಸುಕಿ ರಾಘವನ್ Vasuki Raghavan

  ಭರತ್ ಬಿಜೆ ಸಂದರ್ಶನ ಭಾಗ -2

  ಸಾಹಿತ್ಯಕ್ಕೆ ಸಂಯೋಜನೆ ಸುಲಭನಾ? ಸಂಯೋಜನೆ ಗೊತ್ತು ಮ್ಯೂಸಿಕ್ ಪ್ರೊಡೆಕ್ಷನ್ ಎಂದರೆ ಏನು?

  ಬಹುಪರಾಕ್ ಕಿಚಡಿ ಸಾಂಗ್ಸ್,

  ಬಹುಪರಾಕ್ ಕಿಚಡಿ ಸಾಂಗ್ಸ್, ಎಲ್ಲರಿಗೂ ಸಲ್ಲುವಂಥ ಹಾಡುಗಳಿವೆ. ಲಂಕೇಶ್ ಸಾಹಿತ್ಯಕ್ಕೆ ಸಂಯೋಜನೆ ಮಾಡಿದ್ದು, ಶಿಶುನಾಳ ಷರೀಫರ ಗೀತೆ ಅಳವಡಿಕೆ, ಲ್ಯಾಟಿನ್ ರಾಕ್.. ಫ್ರೆಶ್ ಆಗಿದೆ ಹಾಡೂಗಳು ಎಂಬ ಹೊಗಳಿಕೆ ಸಿಕ್ಕಿದೆ.

  ಬಹುಪರಾಕ್ ಆಡಿಯೋ, ವಿಡಿಯೋ ಸಾಂಗ್ಸ್

  ಬಹುಪರಾಕ್ ಆಡಿಯೋ, ವಿಡಿಯೋ ಸಾಂಗ್ಸ್

  * ಮಾಧುರ್ಯ ಹಾಗೂ ಮೋಹಕ ಸಾಹಿತ್ಯವನ್ನೇ ಉಸಿರಾಗಿಸಿಕೊಂಡಿರುವ ಬಹುಪರಾಕ್ ಆಡಿಯೋ ವಿಮರ್ಶೆಇಲ್ಲಿ ಓದಿ.

  * ಬಹುಪರಾಕ್ 'ಸಾಹಿತ್ಯ' ದರ್ಬಾರ್

  * ಹಾಡುಗಳ 'ವಿಡಿಯೋ' ಪರೇಡ್

  English summary
  Watch Simpallag Ondh love story fame Musician Bharath BJ interview by Kuntady Nithesh with the help of Vasuki Raghavan. This Videos series is presented by Samvaada.com.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X