»   » 2015ರ 'ಮೋಸ್ಟ್ ಕಾಂಟ್ರವರ್ಶಿಯಲ್' ಹಾಡು ನಿಮ್ಮ 'ಫಿಲ್ಮಿಬೀಟ್ ಕನ್ನಡ'ದಲ್ಲಿ

2015ರ 'ಮೋಸ್ಟ್ ಕಾಂಟ್ರವರ್ಶಿಯಲ್' ಹಾಡು ನಿಮ್ಮ 'ಫಿಲ್ಮಿಬೀಟ್ ಕನ್ನಡ'ದಲ್ಲಿ

Posted By:
Subscribe to Filmibeat Kannada

ಕಳೆದ ವರ್ಷದಿಂದ ಅಭಿಮಾನಿಗಳ ಕುತೂಹಲ ಕೆರಳಿಸಿದ್ದ ಸಿನಿಮಾ 'ಉಪ್ಪಿ-2'. ವರ್ಷಗಳ ನಂತ್ರ ರಿಯಲ್ ಸ್ಟಾರ್ ಉಪೇಂದ್ರ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದರಿಂದ 'ಉಪ್ಪಿ-2' ಬಗ್ಗೆ ಎಲ್ಲರಿಗೂ ನಿರೀಕ್ಷೆ ತುಸು ಜಾಸ್ತಿ ಇತ್ತು.

ಆ ನಿರೀಕ್ಷೆಗೆ ಉಪೇಂದ್ರ ಅಂತೂ ಮೋಸ ಮಾಡಿಲ್ಲ. ರುಚಿ ರುಚಿಯಾದ ಉಪ್ಪಿಟ್ಟನ್ನ ನಿಮಗೆಲ್ಲರಿಗೂ ಬಡಿಸಿದ್ದಾರೆ. ಹಾಗೇ, ಇದೇ ಚಿತ್ರ ಬೇಜಾನ್ ಸದ್ದು ಮಾಡಿದ್ದು ಗಾಂಧಿನಗರದ ಎಲ್ಲಾ ನಾಯಕರ ಕಾಲೆಳೆದ 'ಎಲ್ರ ಕಾಲೆಳಿತದೆ ಕಾಲ' ಹಾಡಿಂದ.


uppi2

'ಎಲ್ರ ಕಾಲೆಳಿತದೆ ಕಾಲ' ಹಾಡನ್ನ ಕೇಳಿ ನವರಸ ನಾಯಕ ಜಗ್ಗೇಶ್ ರೊಚ್ಚಿಗೆದ್ದಿದ್ದರು. ಟ್ವಿಟ್ಟರ್ ನಲ್ಲಿ ಸಮರ ಸಾರಿದ್ದರು. ಜಗ್ಗೇಶ್ ವಿರುದ್ಧ ಉಪೇಂದ್ರ ಫ್ಯಾನ್ಸ್ ಕೂಡ ತೊಡೆ ತಟ್ಟಿ ನಿಂತರು. [ಟ್ವಿಟ್ಟರ್ ನಲ್ಲಿ ಜಗ್ಗೇಶ್ ವಿರುದ್ಧ ಉಪೇಂದ್ರ ಅಭಿಮಾನಿಗಳ ಯುದ್ಧ]


ವಾರಗಟ್ಟಲೆ ಇಬ್ಬರ ಯುದ್ಧ ನಡೆಯಿತು. ಈ ವರ್ಷದ ದಿ ಮೋಸ್ಟ್ ಕಾಂಟ್ರವರ್ಶಿಯಲ್ ಸಾಂಗ್ ಅಂತಲೇ 'ಖ್ಯಾತಿ' ಪಡೆದಿರುವ 'ಎಲ್ರ ಕಾಲೆಳಿತದೆ ಕಾಲ' ಹಾಡನ್ನ ನೀವೆಲ್ಲಾ ಚಿತ್ರಮಂದಿರಗಳಲ್ಲಿ ನೋಡಿರಬಹುದು.


ಮತ್ತೆ-ಮತ್ತೆ ಆ ಹಾಡನ್ನ ನೋಡ್ಬೇಕು ಅಂತ ನಿಮಗೆ ಅನಿಸಿದ್ರೆ, ಈ ಪುಟಕ್ಕೆ ಭೇಟಿ ನೀಡುತ್ತಿರಿ. ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ 'ಉಪ್ಪಿ-2' ಚಿತ್ರದ 'ಎಲ್ರ ಕಾಲೆಳಿತದೆ ಕಾಲ' ಹಾಡು ಲಭ್ಯವಾಗಿದೆ. [ಗಾಂಧಿನಗರದ ಎಲ್ಲಾ 'ರಿಯಲ್' ನಟರ ಕಾಲೆಳೆದ ಉಪೇಂದ್ರ]


ವಿವಾದ ಸೃಷ್ಟಿಸಿದರೂ, ವಿವಾದಕ್ಕೆ ಗುರಿಯಾಗದೆ, ಎಲ್ಲಾ ನಾಯಕ ನಟರಿಗೆ ಉಪೇಂದ್ರ ಬಿಸಿ ಹೇಗೆ ಮುಟ್ಟಿಸಿದ್ದಾರೆ ಅಂತ ಇನ್ನೊಮ್ಮೆ ಈ ವಿಡಿಯೋದಲ್ಲಿ ನೀವೇ ನೋಡಿ........


uppi2
English summary
Kannada Actor-Director Upendra has released the video song 'No Excuse Me Please' from 'Uppi-2', which created controversy in Sandalwood. Watch the Song here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada