For Quick Alerts
  ALLOW NOTIFICATIONS  
  For Daily Alerts

  ಭಗ್ನಪ್ರೇಮಿಗೆ ಯೋಗರಾಜ್ ಭಟ್ರ ತರ್ಲೆ, ಯಾಕಿಂಗೆ ಬ್ರೋ.?

  By Suneetha
  |

  ಯಾವುದಾದರೂ ಕನ್ನಡ ಹಾಡಿನಲ್ಲಿ ತರ್ಲೆ ಸಾಹಿತ್ಯ ಇದೆ ಅಂತಾದರೆ ಅದನ್ನು ಖಂಡಿತ ಯೋಗರಾಜ್ ಭಟ್ರೆ ಬರೆದಿರ್ತಾರೆ. ಅವರ ಸಾಹಿತ್ಯ ಅಂದಮೇಲೆ, ಅದರಲ್ಲಿ ಒಂದಷ್ಟು ಕಾಮಿಕ್-ಗಿಮಿಕ್ ಇದ್ದೇ ಇರುತ್ತೆ.

  'ಕಡ್ಡಿಪುಡಿ' ಚಿತ್ರದ 'ಬುಡ್ ಬುಡ್ ಕೆ ಮಾಲಿಂಗ ಮೊನ್ನೆ ಸತ್ತೋದ, ಮೊನ್ನೆ ಸತ್ತೋದ', 'ಪರಪಂಚ' ಚಿತ್ರದ 'ಹೆಲ್ತ್ ಇಂಪಾರ್ಟೆಂಟು, ಹೆಲ್ತ್ ಇಂಪಾರ್ಟೆಂಟು, ಹೊಟ್ಟೆ ನೋಡ್ಕೊಳ್ಳಿ ಎಲ್ರೂ ಬಗ್ಗ್ ಬಿಟ್ಟು'. ಇಂತಹ ವಿಭಿನ್ನ ಮತ್ತು ಫನ್ನಿ ಸಾಹಿತ್ಯ ಬರೆದು ಸಂಗೀತ ಪ್ರಿಯರ ಮೆಚ್ಚುಗೆ ಗಳಿಸುವಲ್ಲಿ ಭಟ್ರದು ಒಂದು ಕೈ ಮುಂದು.['ನಾನು ಮತ್ತು ವರಲಕ್ಷ್ಮಿ'ಯ ಹಾಡುಗಳನ್ನು ಆಲಿಸಲು ಸಜ್ಜಾಗಿ]

  ಇದೀಗ ಇಂತಹದೇ ಒಂದು ವಿಭಿನ್ನ ಸಾಹಿತ್ಯವನ್ನು 'ನಾನು ಮತ್ತು ವರಲಕ್ಷ್ಮಿ' ಚಿತ್ರಕ್ಕೆ ಭಟ್ರು ಬರೆದಿದ್ದಾರೆ. ನಿರ್ದೇಶಕ ಪ್ರೀತಂ ಗುಬ್ಬಿ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಚೊಚ್ಚಲ ಪ್ರತಿಭೆಗಳು ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಕಾಲಿಟ್ಟಿವೆ.

  ಖ್ಯಾತ ಸಂಗೀತ ನಿರ್ದೇಶಕ ಜಿ.ಕೆ ವೆಂಕಟೇಶ್ ಅವರ ಮೊಮ್ಮಗ ಪೃಥ್ವಿ ಅವರು ಚೊಚ್ಚಲ ನಟನಾಗಿ ಹಾಗೂ ನಟಿ ಮಾಳವಿಕಾ ಮೋಹನ್ ಕಾಣಿಸಿಕೊಳ್ಳುತ್ತಿರುವ, ಈ ಚಿತ್ರದಲ್ಲಿನ ಒಂದು ಲವ್ ಫೈಲ್ಯೂರ್ ಸಾಂಗ್ ಗೆ ಯೋಗರಾಜ್ ಭಟ್ರು ಸಖತ್ ಆಗಿ ಸಾಹಿತ್ಯ ಬರೆದಿದ್ದಾರೆ.['ನಾನು ಮತ್ತು ವರಲಕ್ಷ್ಮಿ' ಚಿತ್ರದ ಟ್ರೈಲರ್ ನೋಡಿದ್ರಾ?]

  Watch 'Naanu Mattu Varalakshmi' 'Na Chennagidhe Yes Bro' making song

  'ನಾ ಚೆನ್ನಾಗಿದ್ದೆ, ಎಸ್ ಬ್ರೊ, ನಾ ಡಲ್ಲಾಗೋದೇ, ವೈ ಬ್ರೋ' ಎಂಬ ಹಾಡನ್ನು ಭಟ್ರು ಬರೆದಿದ್ದು, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಅವರು ಈ ಹಾಡನ್ನು ಹಾಡಿದ್ದಾರೆ. ಇದೀಗ ಹಾಡಿನ ಮೇಕಿಂಗ್ ವಿಡಿಯೋ ಬಿಡುಗಡೆ ಆಗಿದ್ದು, ಸಾಕಷ್ಟು ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ.[ಬಣ್ಣ ಹಚ್ಚಿದ ಜಿ.ಕೆ.ವೆಂಕಟೇಶ್ ಮೊಮ್ಮಗ ಪೃಥ್ವಿ]

  ಭಾರತದ ಮೊಟ್ಟ ಮೊದಲ ಬೈಕ್ ರೇಸಿಂಗ್ ಸಿನಿಮಾ ಇದಾಗಿದ್ದು, ಚಿತ್ರದಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಬೈಕ್ ರೇಸರ ಕೋಚ್ ಆಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಆಡಿಯೋ ಬಿಡುಗಡೆ ಆಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಸಿನಿಮಾ ತೆರೆ ಕಾಣಲಿದೆ.['ನಾನು ಮತ್ತು ವರಲಕ್ಷ್ಮಿ' ಸ್ಯಾಂಡಲ್ ವುಡ್ ನ ಮೊದಲ ಬೈಕ್ ರೇಸಿಂಗ್ ಸಿನಿಮಾ..!]

  ಪ್ರೀತಿಸಿದವಳನ್ನು ಕಳೆದುಕೊಂಡು, ಭಯಂಕರ ಫೀಲಿಂಗಲ್ಲಿರೋ ನಾಯಕನಿಗೆ ಭಟ್ರು ಬರೆದಿರುವ 'ಎಸ್ ಬ್ರೋ' ಹಾಡಿನ ಮೇಕಿಂಗ್ ವಿಡಿಯೋ ಇಲ್ಲಿದೆ ನೋಡಿ...ಎಂಜಾಯ್ ಮಾಡಿ..

  English summary
  Watch Kannada Movie 'Naanu Mattu Varalakshmi' 'Na Chennagidhe Yes Bro' making song. Kannada Actor Prithvi and Actress Malavika Mohan in the lead role. The movie is directed by Preetham Gubbi, Music composed by V Harikrishna.
  Tuesday, August 9, 2016, 17:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X