»   » ಆಡಿಯೋ ರಿಲೀಸ್ ಮೊದಲೇ 'ಜಾಗ್ವಾರ್' ಹಾಡು ಔಟ್ ಆಯ್ತು, ಒಮ್ಮೆ ಕೇಳ್ಬಿಡಿ...

ಆಡಿಯೋ ರಿಲೀಸ್ ಮೊದಲೇ 'ಜಾಗ್ವಾರ್' ಹಾಡು ಔಟ್ ಆಯ್ತು, ಒಮ್ಮೆ ಕೇಳ್ಬಿಡಿ...

Posted By:
Subscribe to Filmibeat Kannada

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ರವರ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರವರ ಪುತ್ರ ನಿಖಿಲ್ ಕುಮಾರ್ ಅಭಿನಯದ ಚೊಚ್ಚಲ ಸಿನಿಮಾ 'ಜಾಗ್ವಾರ್' ಕುರಿತ ಲೇಟೆಸ್ಟ್ ಅಪ್ ಡೇಟ್ ಹೊತ್ತು ತಂದಿದ್ದೀವಿ ನೋಡಿ....

ಮಹದೇವ್ ಆಕ್ಷನ್ ಕಟ್ ಹೇಳಿರುವ, ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಕಥೆ ಬರೆದಿರುವ 'ಜಾಗ್ವಾರ್' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಸೆಪ್ಟೆಂಬರ್ 2 ರಂದು ಮಂಡ್ಯದಲ್ಲಿ ನಿಗದಿ ಆಗಿದೆ. ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ 'ಜಾಗ್ವಾರ್' ಆಡಿಯೋ ರಿಲೀಸ್ ಕಾರ್ಯಕ್ರಮ ಅದ್ಧೂರಿ ಆಗಿ ನಡೆಯಲಿದೆ.

Watch Nikhil Kumar starrer 'Jaguar' selfie lyrical video

ಆಡಿಯೋ ರಿಲೀಸ್ ಫಂಕ್ಷನ್ ಗೂ ಮೊದಲೇ 'ಜಾಗ್ವಾರ್' ಚಿತ್ರದ ಒಂದು ಹಾಡು ಯ್ಯೂಟ್ಯೂಬ್ ನಲ್ಲಿ ಔಟ್ ಆಗಿದೆ. ದಾಖಲೆ ಮೊತ್ತ ನೀಡಿ 'ಜಾಗ್ವಾರ್' ಆಡಿಯೋ ರೈಟ್ಸ್ ಖರೀದಿ ಮಾಡಿರುವ ಲಹರಿ ಆಡಿಯೋ ಸಂಸ್ಥೆ, 'ಸೆಲ್ಫಿ' ಹಾಡನ್ನ ಯ್ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಿದೆ.

ಚಂದನ್ ಶೆಟ್ಟಿ ಸಾಹಿತ್ಯ ಇರುವ, ಎಸ್.ಎಸ್.ಥಮನ್ ಸಂಗೀತ ನೀಡಿರುವ, ಮೀಕಾ ಸಿಂಗ್ ಮತ್ತು ಕನ್ನಿಕಾ ಕಪೂರ್ ದನಿ ನೀಡಿರುವ 'ಜಾಗ್ವಾರ್' ಚಿತ್ರದ 'ಸೆಲ್ಫಿ' ಹಾಡನ್ನ ಒಮ್ಮೆ ಕೇಳ್ಕೊಂಡ್ ಬನ್ನಿ....


ಅಂದಾದ ಸೆಲ್ಫಿಗೆ ಅದುರಿ ಹೋದನೆ,
ಹಾರ್ಟಲಿ ಸೀಟಿಗೆ ಕರ್ಚೀಫು ಹಾಕಿಬಿಟ್ಟನೇ,
ಬಂಗಾರದ ಬರ್ಫಿಲೇ, ಲವ್ ಯು ಅಂದ್ಯಲ್ಲೇ,
ಹಾಟ್ ಏರ್ ಬಲೂನ್ ಏರಿ,
ನಾವು ರೌಂಡು ಹೋಗೋನ್ವೇ.

ಡ್ರೀಮಲ್ಲಿ ಬಂದ್ಮೇಲೆ, ನೀ ಫಿಕ್ಸ್ ಆಗ್ ಹೋದ್ಯಲ್ಲೋ,
ಇಂಪೋರ್ಟೆಡ್ ಪರ್ಫ್ಯೂಮು ನಂಗ್ ನೀನಾಗ್ ಬಿಟ್ಯಲ್ಲೋ,

ಮೇರೆ ಮನ್ ಕಿ, ಮಾಕೋರಿನಾ
ನೀ ನಂಗೆ ಮೆರುವಾನ,
ನಾವ್ ರೌಂಡ್ ಅಂಡ್ ರೌಂಡು ಸುತ್ತಿಕೊಂಡು
ಫುಲ್ಲು ಸೌಂಡು ಮಾಡೋಣ್ವೇ
ತುಹಿ, ತುಹಿ, ತುಹಿ ಮೇರಾ ಸೂಪರ್ ಡ್ಯೂಪರ್ ಮಾಹಿವೇ
ಕುತ್ತಿಗೆ ವರೆಗೂ ನನ್ನ ಪ್ರೀತಿ ಮಾಡೇ ಬಿಟ್ಟವ್ಳೇ.

'ಜಾಗ್ವಾರ್' ಚಿತ್ರದ ಈ ಸುದ್ದಿ ಕೇಳಿದ್ರೆ, ನೀವು ತಲೆ ತಿರುಗಿ ಬೀಳ್ತೀರಾ!

English summary
JDS Leader H.D.Kumaraswamy's son Nikhil Kumar's debut film 'Jaguar' audio release is scheduled on September 2nd. Prior to that, First song 'Selfie' lyrical video is out in YouTube. Watch the video.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada