»   » ಪುನೀತ್ ಅವರು ಸಖತ್ ಡ್ಯಾನ್ಸರ್ ಅಂತ ಮತ್ತೆ ಪ್ರೂವ್ ಆಯ್ತು

ಪುನೀತ್ ಅವರು ಸಖತ್ ಡ್ಯಾನ್ಸರ್ ಅಂತ ಮತ್ತೆ ಪ್ರೂವ್ ಆಯ್ತು

Posted By:
Subscribe to Filmibeat Kannada

ಪುನೀತ್ ರಾಜ್ ಕುಮಾರ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ಮಿಂಚಿರುವ 'ಚಕ್ರವ್ಯೂಹ' ಸಿನಿಮಾ ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಇಂದು (ಏಪ್ರಿಲ್ 22) ಗ್ರ್ಯಾಂಡ್ ಆಗಿ ತೆರೆ ಕಾಣಬೇಕಿತ್ತು.

ಆದರೆ ಕೆಲವು ಮಹತ್ತರ ಬದಲಾವಣೆಗಳಿಂದ ಸಿನಿಮಾ ಬಿಡುಗಡೆ ಕಾರ್ಯಕ್ರಮ ಮುಂದಕ್ಕೆ ಹೋಗಿದ್ದು, ಮುಂದಿನ ವಾರ ಅಂದರೆ ಎಪ್ರಿಲ್ 29ಕ್ಕೆ ಅದ್ದೂರಿಯಾಗಿ ಇಡೀ ದೇಶದಾದ್ಯಂತ ತೆರೆ ಕಾಣಲಿದೆ.[ಅಪ್ಪು ಅವರ 'ಚಕ್ರವ್ಯೂಹ' ಬಿಡುಗಡೆ ಮುಂದಕ್ಕೆ ಹೋಗಿದ್ದೇಕೆ?]


Watch Puneeth's 'Chakravyuha' 'Geleya Geleya' Song

ಈಗಾಗಲೇ ಬಿಡುಗಡೆ ಆಗಿರುವ ಚಿತ್ರದ ಹಾಡುಗಳ ಸೂಪರ್ ಹಿಟ್ ಆಗಿದ್ದು, ಅದರಲ್ಲೂ ತೆಲುಗು ನಟ ಜ್ಯೂನಿಯರ್ ಎನ್.ಟಿ.ಆರ್ ಹಾಡಿರುವ ಇಂಟ್ರೋ ಹಾಡು 'ಗೆಳೆಯಾ ಗೆಳೆಯಾ' ಮಾತ್ರ ಎಲ್ಲರ ಬಾಯಲ್ಲೂ ಹರಿದಾಡುತ್ತಿದೆ.


ಮೊನ್ನೆ ಈ ಹಾಡಿನ ಮೇಕಿಂಗ್ ಮತ್ತು ಲಿರಿಕಲ್ ಸಾಂಗ್ ತೆರೆಕಂಡಿತ್ತು. ಆದರೆ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಡ್ಯಾನ್ಸ್ ಮಾತ್ರ ನೋಡೋಕ್ಕಾಗಿರಲಿಲ್ಲ.['ಚಕ್ರವ್ಯೂಹ' ಚಿತ್ರದ 'ಗೆಳೆಯಾ ಗೆಳೆಯಾ' ಹಾಡು ನೋಡಿದ್ರಾ?]


Watch Puneeth's 'Chakravyuha' 'Geleya Geleya' Song

ಅಭಿಮಾನಿಗಳೇ ನಿರಾಶೆ ಬೇಡ ಇದೀಗ ಪುನೀತ್ ಅವರು 'ಗೆಳೆಯಾ' ಹಾಡಿಗೆ ಜಬರ್ದಸ್ತ್ ಆಗಿ ಡ್ಯಾನ್ಸ್ ಮಾಡಿರುವ ಕಂಪ್ಲೀಟ್ ವಿಡಿಯೋ ನಿಮಗಾಗಿ ನಿಮ್ಮ ಫಿಲ್ಮಿಬೀಟ್ ಕನ್ನಡ ಹೊತ್ತು ತಂದಿದೆ. ಪವರ್ ಸ್ಟಾರ್ ಪವರ್ ಫುಲ್ ಡ್ಯಾನ್ಸ್ ವಿಡಿಯೋ ಇಲ್ಲಿದೆ ನೋಡಿ..


Watch Puneeth's 'Chakravyuha' 'Geleya Geleya' Song

ಅಂದಹಾಗೆ ಡ್ಯಾನ್ಸ್ ಗೆ ಕಿಂಗ್ ಆಗಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಮತ್ತೆ ಡ್ಯಾನ್ಸ್ ನಲ್ಲಿ ಹೊಸ ದಾಖಲೆ ಹುಟ್ಟುಹಾಕಿದ್ದಾರೆ. 'ಗೆಳೆಯಾ ಗೆಳೆಯಾ' ಹಾಡಿಗೆ ಫುಲ್ ಎನರ್ಜಿಟಿಕ್ ಆಗಿ ಡ್ಯಾನ್ಸ್ ಮಾಡಿದ್ದು, ಖಂಡಿತ ಅಭಿಮಾನಿಗಳು ಕೇಕೆ ಹಾಕೋದು ಗ್ಯಾರಂಟಿ.

English summary
Watch the video of the song Geleya Geleya from the movie 'Chakravyuha Feat'. Kannada Actor Puneeth Rajkumar and Kannada Actress Rachitha Ram in the lead role. Music Composed by S.S.Thaman. The movie is directed by M.Saravanan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada