»   » ಗೆಳತಿಗಾಗಿ ಎಲ್ಲಾ ಬುಟ್ಬುಟ್ಟ 'ಕರಿಚಿರತೆ' ದುನಿಯಾ ವಿಜಿ

ಗೆಳತಿಗಾಗಿ ಎಲ್ಲಾ ಬುಟ್ಬುಟ್ಟ 'ಕರಿಚಿರತೆ' ದುನಿಯಾ ವಿಜಿ

Posted By:
Subscribe to Filmibeat Kannada

ದುನಿಯಾ ವಿಜಿ ಕೈಯಲ್ಲಿ ಏನಾಗೋಲ್ಲ? ಏಯ್ಟ್ ಪ್ಯಾಕ್ ಬಾಡಿ ಇಟ್ಕೊಂಡು ಮೈನವಿರೇಳಿಸುವ ಸ್ಟಂಟ್ಸ್ ಮಾಡುವ ಈ 'ಕರಿಚಿರತೆ' ಗಾಂಧಿನಗರದಲ್ಲಿ ಆಕ್ಷನ್ 'ಜಾಕ್ಸನ್' ಅಂತಲೇ ಹೆಸರುವಾಸಿ.

ಸ್ಟಂಟ್ಸ್ ಜೊತೆಗೆ ಇತ್ತೀಚೆಗೆ ಕುಣಿತದಲ್ಲೂ ಸೈ ಅನಿಸಿಕೊಳ್ಳುತ್ತಿರುವ ದುನಿಯಾ ವಿಜಿ ನಟನೆ ಬಗ್ಗೆ ಎರಡು ಮಾತಿಲ್ಲ. ಇಷ್ಟೆಲ್ಲಾ ಇರುವಾಗ ಹಾಡೋದನ್ನ ಯಾಕೆ ಬಿಡಬೇಕು ಅಂತ ದುನಿಯಾ ವಿಜಿ ಮೈಕ್ ಕೂಡ ಹಿಡಿದಿದ್ದಾರೆ.


ಆ ಮೂಲಕ ಶಿವಣ್ಣ, ಅಪ್ಪು, ಉಪೇಂದ್ರ, ಸುದೀಪ್, ಶರಣ್ ಮತ್ತು ಯಶ್ ಸಾಲಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ ದುನಿಯಾ ವಿಜಿ. ಕರಿಚಿರತೆ ಕಂಠದಲ್ಲಿ ಮೂಡಿಬಂದಿರುವ ಹಾಡು ಯಾವುದು? ಅದು ಹೇಗಿದೆ ಅಂತ ತಿಳಿದುಕೊಳ್ಳುವುದಕ್ಕೆ ಈ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ......


'R.X.ಸೂರಿ'ಯಲ್ಲಿ ದುನಿಯಾ ವಿಜಿ ಗಾನ ಬಜಾನ

ಈಗಾಗಲೇ ಗಾಂಧಿನಗರದಲ್ಲಿ ಕುತೂಹಲ ಕೆರಳಿಸಿರುವ ದುನಿಯಾ ವಿಜಿ ಅಭಿನಯಿಸುತ್ತಿರುವ ಚಿತ್ರ 'R.X.ಸೂರಿ'. ಸದ್ದಿಲ್ಲದೇ ಸೈಲೆಂಟ್ ಆಗಿ 'R.X.ಸೂರಿ' ಚಿತ್ರಕ್ಕೆ ಚಾಲನೆ ನೀಡಿರುವ ದುನಿಯಾ ವಿಜಿ, ಅಷ್ಟೇ ಸೈಲೆಂಟ್ ಆಗಿ ಚಿತ್ರದ ಹಾಡೊಂದಕ್ಕೆ ದನಿಯಾಗಿದ್ದಾರೆ. [ದುನಿಯಾ ವಿಜಿ ಹುಟ್ಟುಹಬ್ಬದ ಉಡುಗೊರೆ: RX ಸೂರಿ ಟೀಸರ್]


ಟಪ್ಪಾಂಗುಚ್ಚಿ ಸ್ಟೈಲ್ ನಲ್ಲಿ ವಿಜಿ ಸಿಂಗಿಂಗ್

ದುನಿಯಾ ವಿಜಿ ಹೇಳಿ ಕೇಳಿ ಮಾಸ್ ಹೀರೋ. 'R.X.ಸೂರಿ' ರೌಡಿಸಂ ಚಿತ್ರ. ಅಂದ್ಮೇಲೆ ದುನಿಯಾ ವಿಜಿ ಹಾಡಿರುವ ಹಾಡು ಕೂಡ ಮಾಸ್ ಸಾಂಗ್ ಅನ್ನುವುದರಲ್ಲಿ ಅನುಮಾನ ಬೇಡ. ಸಿನಿಮಾದಲ್ಲಿ ತಾವು ಲವ್ ಮಾಡೋ ಹುಡುಗಿಗೆ ರೇಗಿಸುವ ಹಾಡಲ್ಲಿ ದುನಿಯಾ ವಿಜಿ ಗಾನ ಸುಧೆ ಹರಿಸಿದ್ದಾರೆ. ಹಾಡಿನ ಸಾಲುಗಳು ಹೀಗಿವೆ - ''ಲೇಡೀಸ್ ಹಾಸ್ಟೆಲ್ ಕಾಯೋದು ನಾನು ಇವೊತ್ತೆ ಬಿಟ್ಬುಡ್ತಿನೆ....


ವಯಸ್ಸಿಗೆ ಬಂದಿರೋ ಹಾರ್ಟ್ ನಾನು ನಿನ್ನ ಕೈಗೆ ಕೊಟ್ಬುಡ್ತೀನೆ..


ನಾನು ಒಳೆಯವನು, ನೀನು ಒಳ್ಳೆಯವನು...ಯಾರೋ ಸೆಂಟ್ರಲ್ಲಿ ಅಲ್ಲಾಡ್ಸವ್ರೆ...ಬುಟ್ಟೆ ಬುಟ್ಟೆ ಎಲ್ಲಾ ಬುಟ್ಬುಟ್ಟೆ....''


ದುನಿಯಾ ವಿಜಿ ಜೊತೆ ಇಬ್ಬರು ಗಾಯಕರ ಕಮಾಲ್

'ಜಮ್ಮ ಜಮ್ಮ' ಖ್ಯಾತಿಯ ನವೀನ್ ಸಜ್ಜು ಮತ್ತು ವಿಜಯ್ ಪ್ರಕಾಶ್ ಜೊತೆ ದುನಿಯಾ ವಿಜಿ ದನಿಗೂಡಿಸಿರುವುದು ಹಾಡಿನ ಸ್ಪೆಷಾಲಿಟಿ. ವಿ.ನಾಗೇಂದ್ರ ಪ್ರಸಾದ್ ಬರೆದಿರುವ ಪಕ್ಕಾ ಲೋಕಲ್ ಲಿರಿಕ್ಸ್ ಗೆ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಕಿರುವ ತಾಳಕ್ಕೆ ದುನಿಯಾ ವಿಜಿ ಹೇಗೆ ಹಾಡಿದ್ದಾರೆ ಅಂತ ವಿಡಿಯೋದಲ್ಲಿ ನೀವೇ ನೋಡಿ.....


ದುನಿಯಾ ವಿಜಿ ಹಾಡುತ್ತಿರುವುದು ಇದೇ ಮೊದಲಲ್ಲ!

ನಾಯಕರೇ ಗಾಯಕರಾಗುತ್ತಿರುವ ಈಗಿನ ಟ್ರೆಂಡ್ ನಲ್ಲಿ ದುನಿಯಾ ವಿಜಿ ಹಾಡುತ್ತಿರುವುದು ಇದು ಮೊದಲ ಬಾರಿ ಅಲ್ಲ. ಈಗಾಗಲೇ 'ರಜನಿಕಾಂತ' ಚಿತ್ರದಲ್ಲಿ 'ಸಟಕ್ಕು ಸಟಕ್...' ಹಾಡಿನ ಮೂಲಕ ದುನಿಯಾ ವಿಜಿ ಕಂಠ ಎಲ್ಲರಿಗೂ ಪರಿಚಿತವಾಗಿದೆ. ಅಂದು ಅರ್ಜುನ್ ಜನ್ಯ ಗರಡಿಯಲ್ಲಿ ಹಾಡಿದ್ದ ವಿಜಿ, ಇದೀಗ ಅದೇ ಅರ್ಜುನ್ ಜನ್ಯ ಸಲಹೆ ಮೇರೆಗೆ ಮತ್ತೆ ಮೈಕ್ ಮುಂದೆ ಬಂದಿದ್ದಾರೆ. [ಮೈಕ್ ಹಿಡಿದ 'ರಾಜ ರಾಜೇಂದ್ರ'ನ ಕಾಲುಗಳು ಗಡಗಡ]


ನೈಜ ಘಟನೆ ಆಧಾರಿತ ಸಿನಿಮಾ 'R.X.ಸೂರಿ'

ರಾಯಲ ಸೀಮಾ ಕುಖ್ಯಾತ ರೌಡಿ ಪರಿಟಾಲ ಸೂರಿ ಅವರ ಲವ್ ಸ್ಟೋರಿ 'R.X.ಸೂರಿ' ಚಿತ್ರದ ಕಥಾಹಂದರ ಅಂತ ಹೇಳಲಾಗುತ್ತಿದೆ. ಆದ್ರೆ, ಈ ಬಗ್ಗೆ ಚಿತ್ರತಂಡ ಇನ್ನೂ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. 'ಶ್ರಾವಣಿ ಸುಬ್ರಮಣ್ಯ' ದಂತಹ ಹಿಟ್ ಸಿನಿಮಾ ನೀಡಿದ್ದ ನಿರ್ಮಾಪಕ ಕೆ.ಎ.ಸುರೇಶ್ 'R.X.ಸೂರಿ' ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಯುವ ಪ್ರತಿಭೆ ಶ್ರೀ ಜೈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿರುವ 'R.X.ಸೂರಿ' ಚಿತ್ರತಂಡ ಮಾರ್ಚ್ ತಿಂಗಳ ಹೊತ್ತಿಗೆ ತೆರೆಗೆ ಬರಲಿದೆ. ['ಅಣ್ತಮ್ಮ'ನಿಗಾಗಿ ಗಾಯಕನಾದ ಯಶ್ ಅಸಲಿ ಕಥೆ]


English summary
Actor Duniya Vijay who already turned singer with the movie 'Rajanikantha', has once again come up to croon for his next movie 'RX Soori'. Arjun Janya has composed a music for 'RX Soori', which is directed by Debutant Sri Jai. Watch the making video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada