ವಿಡಿಯೋ: 'ಬೆಸ್ಟ್ ಫ್ರೆಂಡ್' ಅಂತ ಹಾಡಿದ ಚಂದನ್ ಶೆಟ್ಟಿ-ನಿವೇದಿತಾ ಗೌಡ
Recommended Video

'ಬಿಗ್ ಬಾಸ್' ಮನೆಯೊಳಗೆ ಕನ್ನಡ Rapper ಚಂದನ್ ಶೆಟ್ಟಿ ಹಾಗೂ 'ಗೊಂಬೆ' ನಿವೇದಿತಾ ಗೌಡ ಬೆಸ್ಟ್ ಫ್ರೆಂಡ್ಸ್ ಆಗಿದ್ದರು. 'ಬಿಗ್ ಬಾಸ್' ಮನೆಯಿಂದ ಹೊರ ಬಂದ ಮೇಲೂ ಇಬ್ಬರ ಗೆಳೆತನ ಹಾಗೇ ಇದೆ.
ಆಗೊಮ್ಮೆ ಈಗೊಮ್ಮೆ ಒಟ್ಟಿಗೆ ಫೇಸ್ ಬುಕ್ ಲೈವ್ ಗೆ ಬರುವ ಈ ಸ್ನೇಹಿತರು ಇದೀಗ 'ಬೆಸ್ಟ್ ಫ್ರೆಂಡ್' ಎಂಬ ಹಾಡನ್ನ ಒಟ್ಟಿಗೆ ಹಾಡಿದ್ದಾರೆ. ಚಂದನ್ ಶೆಟ್ಟಿ-ನಿವೇದಿತಾ ಗೌಡ ಒಟ್ಟಾಗಿ ಹಾಡಿರುವ 'ಬೆಸ್ಟ್ ಫ್ರೆಂಡ್' ಹಾಡಿನ ವಿಡಿಯೋ ಇದೀಗ ಫೇಸ್ ಬುಕ್ ನಲ್ಲಿ ವೈರಲ್ ಆಗಿದೆ.
ಅಂದ್ಹಾಗೆ, ನಿವೇದಿತಾ ಗೌಡ ಬಗ್ಗೆ 'ಬಿಗ್ ಬಾಸ್' ಮನೆಯಲ್ಲಿ ಇರುವಾಗಲೇ ಚಂದನ್ ಶೆಟ್ಟಿ 'ಗೊಂಬೆ' ಹಾಡನ್ನ ಸಂಯೋಜಿಸಿದ್ದರು. ಇದೀಗ 'ಗೊಂಬೆ' ಹಾಡನ್ನ ಆಲ್ಬಂ ರೂಪದಲ್ಲಿ ಚಂದನ್ ಶೆಟ್ಟಿ ಹೊರ ತರುತ್ತಿದ್ದಾರೆ.
ಈಗಾಗಲೇ 'ಗೊಂಬೆ' ಹಾಡಿನ ಚಿತ್ರೀಕರಣ ಮುಗಿದಿದೆ. ಇದರಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ರಾಜ-ರಾಣಿಯಾಗಿ ಕಾಣಿಸಿಕೊಂಡಿದ್ದಾರೆ. ಸದ್ಯದಲ್ಲೇ 'ಗೊಂಬೆ ಹಾಡು' ನಿಮ್ಮ ಮುಂದೆ ಬರಲಿದೆ.

ಅದಕ್ಕೂ ಮುನ್ನ, ಚಂದನ್ ಶೆಟ್ಟಿ-ನಿವೇದಿತಾ ಹಾಡಿರುವ 'ಬೆಸ್ಟ್ ಫ್ರೆಂಡ್' ಹಾಡನ್ನ ಒಮ್ಮೆ ಕೇಳಿಕೊಂಡು ಬನ್ನಿ....


Click it and Unblock the Notifications











