ಪೊಲ್ಯಾಂಡ್ ಹುಡುಗನ ಬಾಯಲ್ಲಿ ಕನ್ನಡ ಹಾಡು ಕೇಳಿ...
Recommended Video

'ಮುಂಗಾರು ಮಳೆ'... 2006 ರಲ್ಲಿ ಬಿಡುಗಡೆ ಆದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಈ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಚಿತ್ರದ ಹಾಡುಗಳಂತೂ ಸೂಪರ್ ಡ್ಯೂಪರ್ ಹಿಟ್ ಆಗಿತ್ತು.
ಮನೋ ಮೂರ್ತಿ ಸಂಗೀತ ನಿರ್ದೇಶನದ 'ಮುಂಗಾರು ಮಳೆ' ಹಾಡುಗಳು ಈಗಲೂ ಎಲ್ಲರ ಬಾಯಲ್ಲಿವೆ. 'ಮುಂಗಾರು ಮಳೆ' ಸಿನಿಮಾ ರಿಲೀಸ್ ಆಗಿ ಹನ್ನೆರಡು ವರ್ಷಗಳು ಉರುಳಿದರೂ, ಚಿತ್ರದ ಹಾಡುಗಳು ಮಾತ್ರ ಈಗಲೂ ಸೌಂಡ್ ಮಾಡುತ್ತಿದೆ.
ಬರೀ ಕರ್ನಾಟಕದಲ್ಲಿ ಮಾತ್ರ ಅಲ್ಲ.. ದೂರದ ಪೊಲ್ಯಾಂಡ್ ನಲ್ಲೂ 'ಮುಂಗಾರು ಮಳೆ' ಹಾಡು ಕಮಾಲ್ ಮಾಡಿದೆ. 'ಮುಂಗಾರು ಮಳೆಯೇ...' ಎಂದು ಪೊಲ್ಯಾಂಡ್ ಹುಡುಗ ಗಾನ ಸುಧೆ ಹರಿಸಿದ್ದಾನೆ. ಅದಕ್ಕೆ ಸಾಕ್ಷಿ ಇಲ್ಲಿದೆ ನೋಡಿ...
ಪೊಲ್ಯಾಂಡ್ ಹುಡುಗನ ಬಾಯಲ್ಲಿ ಕನ್ನಡ ಹಾಡು
'ಮುಂಗಾರು ಮಳೆಯೇ... ಏನು ನಿನ್ನ ಹನಿಗಳ ಲೀಲೆ...' ಎಂದು ಪೊಲ್ಯಾಂಡ್ ಬಾಲಕ ಹಾಡಿರುವ ಹಾಡಿನ ವಿಡಿಯೋ ಇಲ್ಲಿದೆ ನೋಡಿ... ಈತನ ಹೆಸರು Zbigs (ಬುಜ್ಜಿ). ಆಗಾಗ ಸ್ತೋತ್ರ ಹಾಗೂ ತೆಲುಗು ಹಾಡುಗಳನ್ನು ಹಾಡುವ ಈತ ಮೊಟ್ಟ ಮೊದಲ ಬಾರಿಗೆ ಕನ್ನಡ ಹಾಡನ್ನು ಹಾಡಿದ್ದಾನೆ.

ಮೊದಲ ಕನ್ನಡ ಹಾಡು
'ಮುಂಗಾರು ಮಳೆಯೇ..' ಹಾಡು ಕೇಳಿದ ಕೂಡಲೆ Zbigs ಗೆ ಇಷ್ಟವಾಗಿದೆ. ಹೀಗಾಗಿ, ಅದನ್ನ ಕಲಿತು, ಹಾಡಿ.. ವಿಡಿಯೋವನ್ನ ಟ್ವೀಟ್ ಮಾಡಿದ್ದಾನೆ. Zbigs ಹಾಡಿರುವ ಮೊದಲ ಕನ್ನಡ ಹಾಡು ಇದು.
ಟ್ವೀಟ್ ಮಾಡಿದ ಗಣೇಶ್
'ಮುಂಗಾರು ಮಳೆಯೇ..' ಹಾಡನ್ನ Zbigs ಹಾಡಿರುವುದನ್ನು ನೋಡಿ ಗೋಲ್ಡನ್ ಸ್ಟಾರ್ ಗಣೇಶ್ ಕ್ಲೀನ್ ಬೌಲ್ಡ್ ಆಗಿದ್ದಾರೆ. ''ವಾವ್ ಬುಜ್ಜಿ, ನಿಜಕ್ಕೂ ಚೆನ್ನಾಗಿದೆ. ನನಗೆ ಇಷ್ಟ ಆಯ್ತು'' ಎಂದು ಗಣೇಶ್ ಟ್ವೀಟ್ ಮಾಡಿದ್ದಾರೆ.

ಕನ್ನಡಿಗರಿಗೆ ಹೆಮ್ಮೆ
ಕನ್ನಡ ಸಿನಿಮಾ ಹಾಗೂ ಕನ್ನಡ ಹಾಡುಗಳನ್ನ ಕನ್ನಡಿಗರೇ ನೋಡದಿರುವ ಈಗಿನ ಕಾಲದಲ್ಲಿ ವಿದೇಶಿ ಯುವಕ ಕನ್ನಡ ಹಾಡನ್ನ ಕೇಳಿ, ಇಷ್ಟಪಟ್ಟು ಹಾಡಿದ್ದಾನೆ ಅಂದ್ರೆ ಅದು ಹೆಮ್ಮೆಯ ವಿಷಯ ಅಲ್ಲವೇ.?!


Click it and Unblock the Notifications











