»   » ಭಟ್ಟರ 'ವಾಸ್ತು ಪ್ರಕಾರ' ಸಾಂಗು ಹೆಂಗೈತೆ ಹೇಳ್ರಪಾ

ಭಟ್ಟರ 'ವಾಸ್ತು ಪ್ರಕಾರ' ಸಾಂಗು ಹೆಂಗೈತೆ ಹೇಳ್ರಪಾ

Posted By:
Subscribe to Filmibeat Kannada

ಬಾಲಿವುಡ್ ಚಿತ್ರರಂಗಕ್ಕೆ ಅಡಿಯಿಟ್ಟಿದ್ದ ಯೋಗರಾಜ್ ಭಟ್ಟರು ಬಹಳ ಗ್ಯಾಪ್ ನ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಸದ್ದು ಮಾಡುತ್ತಿದ್ದಾರೆ. ಅವರು ಇಷ್ಟು ದಿನ ಸ್ಯಾಂಡಲ್ ವುಡ್ ನಿಂದ ದೂರ ಸರಿದು ಉತ್ತರ ದಿಕ್ಕಿನತ್ತ ಹೋಗಲು ಏನಾದರೂ ವಾಸ್ತು ದೋಷ ಇತ್ತೋ ಏನೋ ಗೊತ್ತಿಲ್ಲ. ಈಗ ಪಕ್ಕಾ 'ವಾಸ್ತು ಪ್ರಕಾರ' ಮರಳಿದ್ದಾರೆ.

'ವಾಸ್ತುಪ್ರಕಾರ' ಅನ್ನೋ ಟೈಟಲ್ ಸಾಂಗ್ ಬರೆದಿರೋ ಭಟ್ರು ಅದನ್ನು ವಿ ಹರಿಕೃಷ್ಣ ಕೈಲಿ ಹಾಡಿಸಿದ್ದು ತಾವೂ ಧ್ವನಿಗೂಡಿಸಿದ್ದಾರೆ. ಹಾಡಿನಲ್ಲಿ ನಾವು ನೀವು ತಲೆಕೆರೆದುಕೊಳ್ಳುವಂತಹಾ ಸಾಲುಗಳಿದ್ದು, ಸಂಸ್ಕೃತ ಕನ್ನಡದ ಮಿಕ್ಸ್ ಮಸಾಲಾ ನಿಮ್ಮ ತಲೆಗೆ ಕಿಕ್ ಕೊಡುತ್ತೆ. ಅರ್ಧ ಭಟ್ರು ಇನ್ನರ್ಧ ಹಾಡು ಹರಿಕೃಷ್ಣ ದನಿಯಲ್ಲಿದ್ದು ಇವತ್ತಿನ ರಾಜಕಾರಣಕ್ಕೆ ಹೇಳಿ ಮಾಡಿಸಿದ ಹಾಡು ಅನ್ನಿಸ್ತಿದೆ.

<iframe width="640" height="360" src="//www.youtube.com/embed/HutGXrgBYUw?feature=player_embedded" frameborder="0" allowfullscreen></iframe>

ಇವತ್ತಿನ ಚುನಾವಣೆ ರಾಜಕೀಯ ಪಕ್ಷಗಳನ್ನ ಅಣಕು ಮಾಡಿರೋ ಹಾಡಲ್ಲಿ ಸಖತ್ ಥ್ರಿಲ್ ಕೊಡೋ ಸಾಲುಗಳಿವೆ. ಕುಟುಂಬ ರಾಜಕಾರಣ, ಓಟಿಗಾಗಿ ನೋಟು, ಅದೂ ಇದು ಎಲ್ಲವನ್ನ ಹೇಳಿರೋ ಭಟ್ರು ಕೊನೆಗೆ ದೇಶವನ್ನ ವಾಸ್ತುಪ್ರಕಾರ ನೋಡ್ಕೊಳ್ಳಿ ಅಂತಾರೆ.[ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಈ ಬಾರಿ ಭಟ್ರ ಸಿನಿಮಾದಲ್ಲಿ ರಾಜಕೀಯವೂ ಮುಖ್ಯ ಸಬ್ಜೆಕ್ಟ್ ಆಗಿರುತ್ತಾ ಎಂಬುದನ್ನು ಕಾದುನೋಡಬೇಕು. ಚಿತ್ರಕ್ಕೆ ನವರಸ ನಾಯಕ ಜಗ್ಗೇಶ್ ಅವರನ್ನು ಅಯ್ಕೆ ಮಾಡಿಕೊಂಡಿದ್ದಾರೆ. ಅಂದ್ರೆ ಭಟ್ರು ಸೀರಿಯಸ್ ಸಬ್ಜೆಕ್ಟ್ ಒಂದನ್ನ ಕಾಮಿಡಿಯಾಗಿ ತರ್ಬಹುದು ಅನ್ನಿಸ್ತಿದೆ.

ಈ ಸಿನಿಮಾ ಏಪ್ರಿಲ್ ನಲ್ಲಿ ಶುರುವಾಗುತ್ತೆ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ಆದರೆ ಯೋಗರಾಜ ಭಟ್ರು ಚುನಾವಣೆ ಟೈಮಲ್ಲಿ ತಮ್ಮ ಟಿಪಿಕಲ್ ಲಿರಿಕ್ಸ್ ಮೂಲಕ ತಮ್ಮ ಸಿನಿಮಾ ಪ್ರಚಾರವನ್ನ ಭರ್ಜರಿಯಾಗೇ ಶುರುಮಾಡಿದ್ದಾರೆ. (ಒನ್ಇಂಡಿಯಾ ಕನ್ನಡ)

English summary
Sandalwood's ace director Yogaraj Bhat and music master V Harikrishna has joined hands with upcoming project Vaastuprakara, has now come up with the promo of the title track of the movie. Watch Video of Vaastu Prakaara Non-Filmy - Election song with KANNADA SUBTITLES Song
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada