'ಜಮಾಲ್ ಕುಡು' ಅಂತ ಸುಮ್ನೆ ಮೈ ಕುಣಿಸ್ತಿದ್ದೀರಾ? ಅರ್ಥ ತಿಳ್ಕೊಂಡು ಹೆಜ್ಜೆ ಹಾಕಿ

ರಣ್‌ಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ಅನಿಮಲ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಡಿಸೆಂಬರ್ 1ರಂದು ಬಿಡುಗಡೆಯಾದ ಸಿನಿಮಾ ಆರ್ಭಟ ಇನ್ನು ಕಮ್ಮಿ ಆಗಿಲ್ಲ. 3 ಗಂಟೆ 12 ನಿಮಿಷಗಳ ಸುದೀರ್ಘ ಚಿತ್ರವನ್ನು ಪ್ರೇಕ್ಷಕರು ಮುಗಿಬಿದ್ದು ನೋಡ್ತಿದ್ದಾರೆ. ಚಿತ್ರದ 'ಜಮಾಲ್ ಕುಡು' ವೈರಲ್ ಆಗ್ತಿದೆ.

ಸದ್ಯ ನಿಂತ್ರು ಕುಂತ್ರು 'ಜಮಾಲ್ ಕುಡು' ಸಾಂಗ್ ಎಲ್ಲೆಲ್ಲೂ ಕೇಳ್ತಿದೆ. ಅರ್ಥವಾಗದ ಭಾಷೆಯ ಸಾಲುಗಳನ್ನು ಗುನುಗುತ್ತಾ ಜನ ಮೈಕುಣಿಸುತ್ತಿದ್ದಾರೆ. ಪಬ್, ಪಾರ್ಟಿ ಎಲ್ಲೆಲ್ಲೂ ಇದೇ ಹಾಡು ಗುಯ್‌ಗುಡುತ್ತಿದೆ. ಯಾವುದೇ ಡ್ಯಾನ್ಸ್ ಈವೆಂಟ್ ಈ ಸಾಂಗ್ ಇಲ್ಲದೇ ಮುಗಿಯಲ್ಲ ಎನ್ನುವಂತಾಗಿದೆ. 'ಅನಿಮಲ್' ಚಿತ್ರದಲ್ಲಿ ಬಾಬಿ ಡಿಯೋಲ್ ಎಂಟ್ರಿ ಸೀನ್‌ನಲ್ಲಿ ಈ ಹಾಡನ್ನು ಬಳಸಿಕೊಳ್ಳಲಾಗಿದೆ.

What is the meaning of viral song jamal kudu from Animal film

'ಜಮಾಲ್ ಕುಡು' ಹಾಡಿನ ಸಂಗೀತ, ಟ್ಯೂನ್ ಎಲ್ಲರ ಮನಸೆಳೆಯುತ್ತಿದೆ. ಅದೇ ಕಾರಣಕ್ಕೆ ಎಲ್ಲೆಲ್ಲೂ ಟ್ರೆಂಡಿಂಗ್ ಆಗಿದೆ. ಇನ್‌ಸ್ಟಾ ರೀಲ್ಸ್, ಫೋನ್ ರಿಂಗ್‌ಟೋನ್ ಎಲ್ಲೆಲ್ಲೂ ಇದೇ ಹಾಡು ಕೇಳಿಸ್ತಿದೆ. ಯೂಟ್ಯೂಬ್‌ನಲ್ ಕೂಡ ಹಾಡು ಧೂಳೆಬ್ಬಿಸಿಸೆ. ಟ್ಯೂನ್ ಕಥೆ ಬಿಡಿ. ಹಾಡಿನ ಸಾಹಿತ್ಯ ಅರ್ಥ ಆಯ್ತಾ? ಅಷ್ಟಕ್ಕೂ ಇರು ಯಾವ ಭಾಷೆಯ ಸಾಹಿತ್ಯ? ಅರ್ಥ ಏನು ಗೊತ್ತಾ?

ಒಳ್ಳೆ ರಿಧಮ್ ಇರುವ ಸಾಂಗ್ ಕೇಳುತ್ತಿದ್ದರೆ ಮೈ ತಂತಾನೆ ಕುಣಿಯಲು ಶುರು ಮಾಡುತ್ತದೆ. ಈ ಹಾಡಿನಲ್ಲಿ 'ಜಮಾಲ್ ಜಮಾಲೆಕ್ ಜಮಾಲು ಜಮಾಲ್ ಕೂಡು' ಎನ್ನುವ ಸಾಲುಗಳು ಕೇಳಿಬರುತ್ತಿದೆ. ಈ ಹಾಡು ಮೂಲತಃ 1950 ರ ಇರಾನಿನ ಹಾಡು. ಹುಕ್ ಲೈನ್ 'ಓ ಮೈ ಲವ್.. ಡಿಯರ್.. ಮೈ ಸ್ವೀಟ್ ಲವ್' ಅನ್ನೋದು ಈ ಸಾಲಿನ ಅರ್ಥ. ನಿರ್ದೇಶಕ ಸಂದೀಪ್ ವಂಗಾ ಹಳೆಯ ಇರಾನಿನ ಹಾಡನ್ನು ಹೊಸ ಟ್ಯೂನ್‌ ಬಳಸಿ ಮರುಸೃಷ್ಟಿಸಿದ್ದಾರೆ. ಅದೇ ಹಾಡು ಈಗ ಸಿನಿರಸಿಕರ ಮನಗೆದ್ದಿದೆ.

ಅಹೇ ಸಿಯಾ ಜಂಗಿ, ಡೆಲಾಮೊ ನಕೋನ್ ಖುನ್: (ಓಹ್, ನನ್ನ ಕ್ಯೂಟಿ, ನನ್ನ ಹೃದಯದೊಂದಿಗೆ ಆಟವಾಡಬೇಡ)

ವೋಯ್ ಟು ರಫ್ತಿ ಕೋಜಾ, ಮನಮ್ ಚೋ ಮಜ್ನುನ್ (ನೀವು ಹೊರಟು ಪ್ರಯಾಣವನ್ನು ಪ್ರಾರಂಭಿಸುತ್ತಿರುವಿರಿ, ಮತ್ತು ನಾನು ಮಜ್ನುವಿನಂತೆ ಹುಚ್ಚನಾಗುತ್ತಿದ್ದೇನೆ)

ಹೀಗೆ ಹಾಡಿನ ಸಾಲುಗಳಿಗೆ ಅರ್ಥವಿದೆ. ಎರಡೆರಡು ಬಾರಿ ಸಾಲುಗಳು ಪುನರಾವರ್ತನೆಯಾಗುತ್ತದೆ. ಒಟ್ನಲ್ಲಿ 'ಜಮಾಲ್ ಕುಡು' ಹಾಡು ಸಂಗೀತಪ್ರಿಯರ ಮನಗೆದ್ದಿರುವುದು ಸುಳ್ಳಲ್ಲ. ಚಿತ್ರತಂಡದ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದೆ.

What is the meaning of viral song jamal kudu from Animal film

ಈ ವರ್ಷ ಎಲ್ಲಾ ಶಾಲಾ ವಾರ್ಷಿಕೋತ್ಸವ ಸಮಾರಂಭಗಳಲ್ಲಿ 'ಜಮಾಲ್ ಕುಡು' ಹಾಡು ಮಾರ್ದನಿಸುವುದರಲ್ಲಿ ದೂಸ್ರಾ ಮಾತಿಲ್ಲ. ಅಷ್ಟರಮಟ್ಟಿಗೆ ಹಾಡು ಅಬಾಲವೃದ್ಧತಾಗಿ ಎಲ್ಲರನ್ನು ಆವರಿಸಿಕೊಂಡಿದೆ. ಯೂಟ್ಯೂಬ್‌ನಲ್ಲಿ ಒಂದು ಕೋಟಿಗೂ ಅಧಿಕ ವೀವ್ಸ್ ಸಿಕ್ಕಿದೆ.

ಸ್ವತಃ ಬಾಬಿ ಡಿಯೋಲ್ ಇತ್ತೀಚೆಗೆ ಈ ಹಾಡಿನ ಕ್ರೇಜ್ ಬಗ್ಗೆ ಮಾತನಾಡಿದ್ದರು. "ಇದು ಕ್ರೇಜಿಯಾಗಿದೆ. ಜನರು ತಮ್ಮ ನಾಯಿಯ ತಲೆಯ ಮೇಲೆ ಗಾಜಿನ ಲೋಟ ಇಟ್ಟು ಡ್ಯಾನ್ಸ್ ಮಾಡುತ್ತಿದ್ದಾರೆ. ಯಾರೋ ಒಬ್ಬರು ನನ್ನಂತೆಯೇ ಅದೇ ಸೂಟ್ ಧರಿಸಿದ್ದರು. ಇದೆಲ್ಲವನ್ನೂ ನೋಡಲು ಖುಷಿಯಾಗುತ್ತದೆ" ಎಂದಿದ್ದರು.

ಈ ಹಾಡಿಗೆ ಡ್ಯಾನ್ಸ್ ಮಾಡುವ ತಯಾರಿ ಬಗ್ಗೆಯೂ ಮಾತನಾಡಿದ್ದರು. ಹಾಡಿನ ಚಿತ್ರೀಕರಣದ ಸಮಯದಲ್ಲಿ, ಬಾಬಿ ಪಂಜಾಬ್‌ನಲ್ಲಿ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದರಂತೆ. ಅಲ್ಲಿ ಅವರು ತಲೆಯ ಮೇಲೆ ಗಾಜಿನ ಲೋಟ ಇಟ್ಟುಕೊಂಡು ಡ್ಯಾನ್ಸ್ ಮಾಡುತ್ತಿದ್ದರಂತೆ. ಅದೇ ಈಗ ಇಷ್ಟ ಫೇಮಸ್ ಆಗಿದೆ ಎಂದಿದ್ದಾರೆ.

ನಾನು ಯಾರ ಡ್ಯಾನ್ಸ್ ಕಾಪಿ ಮಾಡಲು ಇಷ್ಟಪಡಲಿಲ್ಲ. "ಆಗ ನನಗೆ ನನ್ನ ಬಾಲ್ಯದ ದಿನಗಳು ಥಟ್ಟನೆ ನೆನಪಾಯಿತು. ನಾವು ಪಂಜಾಬ್‌ಗೆ ಹೋಗುತ್ತಿದ್ದೆವು. ನಾವು ಕುಡಿದು ತಲೆಯ ಮೇಲೆ ಗಾಜಿನ ಲೋಟ ಇಟ್ಟುಕೊಂಡು ಹೋಗುತ್ತಿದ್ದದ್ದು ನೆನಪಾಯಿತು. ನಾವು ಅದನ್ನು ಏಕೆ ಮಾಡುತ್ತಿದ್ದೆವು ಎಂದು ನನಗೆ ಅರ್ಥವಾಗುತ್ತಿರಲಿಲ್ಲ. ಅದು ಇದ್ದಕ್ಕಿದ್ದಂತೆ ನನ್ನ ಮನಸ್ಸಿಗೆ ಬಂದಿತು. ನಾನು ಅದನ್ನೇ ಶೂಟಿಂಗ್ ವೇಳೆ ಮಾಡಿದೆ. ಸಂದೀಪ್ ಅದನ್ನು ಇಷ್ಟಪಟ್ಟಿರು" ಎಂದು ಬಾಬಿ ಡಿಯೋಲ್ ವಿವರಿಸಿದ್ದರು.

'ಅನಿಮಲ್' ಸಿನಿಮಾ ವಿಚಾರಕ್ಕೆ ಬಂದರೆ ತೆಲುಗು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ತಂದೆ ಮಗನ ಬಾಂಧವ್ಯದ ಕಥೆಯನ್ನು ವಿಭಿನ್ನವಾಗಿ ಹೇಳುವ ಪ್ರಯತ್ನ ಮಾಡಲಾಗಿದೆ. ಚಿತ್ರದಲ್ಲಿ ಹಿಂಸೆ ಅತಿಯಾಯಿತು ಎನ್ನುವ ಆರೋಪವೂ ಕೇಳಿಬಂದಿತ್ತು. ಇನ್ನು ಚಿತ್ರದಲ್ಲಿ ರಶ್ಮಿಕಾ ಹಾಗೂ ತೃಪ್ತಿ ದಿಮ್ರಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ನಟಿಸಿದ್ದಾರೆ.

More from Filmibeat

English summary
animal film jamal kudu song complete meaning
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X