ಡಿ-ಬಾಸ್‌ ರಾಬರ್ಟ್ 'ಡ್ಯಾನ್ಸ್' ಹಿಂದಿರುವ ಮಾಂತ್ರಿಕ ಇವರೇ!

ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಡ್ಯಾನ್ಸ್ ಬರಲ್ಲ, ಡಿ ಬಾಸ್ ಅಷ್ಟು ಒಳ್ಳೆಯ ಡ್ಯಾನ್ಸರ್ ಅಲ್ಲ ಎಂಬ ಮಾತು ಗಾಂಧಿನಗರದಲ್ಲಿ ಉಳಿದುಕೊಂಡು ಬಿಟ್ಟಿದೆ. ಸ್ವತಃ ದರ್ಶನ್ ಸಹ ''ನನಗೆ ಡ್ಯಾನ್ಸ್ ಮಾಡೋಕೆ ಬರಲ್ಲ'' ಎಂದು ಹೇಳಿಕೊಂಡಿರುವ ಅನೇಕ ಉದಾಹರಣೆಗಳಿವೆ. ಆದರೆ, ಈ ಮಾತನ್ನು ಡಿ ಫ್ಯಾನ್ಸ್ ಯಾರೂ ಒಪ್ಪಿಕೊಳ್ಳಲ್ಲ.

ದಾಸ ಒಳ್ಳೆಯ ಡ್ಯಾನ್ಸ್ ಮಾಡ್ತಾರೆ. ಆದರೆ, ಅವರಿಂದ ಡ್ಯಾನ್ಸ್ ಮಾಡಿಸಬೇಕು ಅಷ್ಟೇ ಎಂಬ ಭರವಸೆ ವ್ಯಕ್ತಪಡಿಸುತ್ತಿದ್ದರು. ಇದೀಗ, ರಾಬರ್ಟ್ ಚಿತ್ರದಲ್ಲಿ ದರ್ಶನ್ ಅವರ ಡ್ಯಾನ್ಸ್ ಖರಾಮತ್ತು ಕಣ್ಮನ ಸೆಳೆಯುತ್ತಿದೆ. ಡ್ಯಾನ್ಸ್ ಬರಲ್ಲ ಎಂದುಕೊಂಡೆ ದಚ್ಚು ಸಖತ್ ಆಗಿ ಕುಣಿದಿದ್ದಾರೆ. 'ಬೇಬಿ ಡ್ಯಾನ್ಸ್ ಫ್ಲೋರ್ ರೆಡಿ' ವಿಡಿಯೋ ಸಾಂಗ್ ರಿಲೀಸ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್‌ನಲ್ಲಿದೆ. ಅದರಲ್ಲಿ ದರ್ಶನ್ ಅವರ ಡ್ಯಾನ್ಸ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಷ್ಟಕ್ಕೂ, 'ಬೇಬಿ ಡ್ಯಾನ್ಸ್ ಫ್ಲೋರ್ ರೆಡಿ' ಹಾಡಿಗೆ ಕೊರಿಯೋಗ್ರಫಿ ಮಾಡಿದ್ದು ಯಾರು? ಮುಂದೆ ಓದಿ....

ಭೂಷಣ್ ಸಂಯೋಜನೆಯಲ್ಲಿ ಡಿ ಬಾಸ್ ಡ್ಯಾನ್ಸ್

ಭೂಷಣ್ ಸಂಯೋಜನೆಯಲ್ಲಿ ಡಿ ಬಾಸ್ ಡ್ಯಾನ್ಸ್

ರಾಬರ್ಟ್ ಚಿತ್ರದ 'ಬೇಬಿ ಡ್ಯಾನ್ಸ್ ಫ್ಲೋರ್ ರೆಡಿ' ವಿಡಿಯೋ ಸಾಂಗ್ ರಿಲೀಸ್ ಆಗಿದ್ದು ದರ್ಶನ್ ಅವರ ಡ್ಯಾನ್ಸ್ ಟಾಕ್ ಆಫ್ ದಿ ಟೌನ್ ಆಗಿದೆ. ಡಿ ಬಾಸ್ ಇಷ್ಟು ಚೆನ್ನಾಗಿ ಡ್ಯಾನ್ಸ್ ಮಾಡಿದ್ದಾರೆ ಎಂದು ಮೆಚ್ಚಿಕೊಂಡಿರುವ ಅಭಿಮಾನಿಗಳು ಕೊರಿಯೋಗ್ರಫರ್ ಯಾರೆಂದು ಕುತೂಹಲದಿಂದ ಹುಡುಕುತ್ತಿದ್ದಾರೆ. ಅಂದ್ಹಾಗೆ, 'ಬೇಬಿ ಡ್ಯಾನ್ಸ್ ಫ್ಲೋರ್ ರೆಡಿ' ಹಾಡು ಕೊರಿಯೋಗ್ರಫಿ ಮಾಡಿದ್ದು ಭೂಷಣ್.

ಡ್ಯಾನ್ಸ್ ವಿತ್ ಅಪ್ಪು ನಿರ್ದೇಶಿಸಿದ್ದು ಇವರೇ

ಡ್ಯಾನ್ಸ್ ವಿತ್ ಅಪ್ಪು ನಿರ್ದೇಶಿಸಿದ್ದು ಇವರೇ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯಲ್ಲಿ ಮೂಡಿಬಂದಿದ್ದ 'ನಟಸಾರ್ವಭೌಮ' ಶೀರ್ಷಿಕೆ ಗೀತೆಗೆ ಕೊರಿಯೋಗ್ರಫಿ ಮಾಡಿದ್ದು ಇದೇ ಭೂಷಣ್. ನಟಸಾರ್ವಭೌಮ ಚಿತ್ರದ ಡ್ಯಾನ್ಸ್ ವಿತ್ ಅಪ್ಪು ಹಾಡು ದೊಡ್ಡ ಹಿಟ್ ಆಗಿತ್ತು. ಈ ಹಾಡಿನಲ್ಲಿ ಅಪ್ಪು ಅವರ ಡ್ಯಾನ್ಸ್ ಹಲ್‌ಚಲ್‌ ಎಬ್ಬಿಸಿತ್ತು. ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದು ಸಹ ಭೂಷಣ್.

'ಚುಟು ಚುಟು' ಹಾಡಿನ ರೂವಾರಿ

'ಚುಟು ಚುಟು' ಹಾಡಿನ ರೂವಾರಿ

ಶರಣ್ ಹಾಗೂ ಆಶಿಕಾ ರಂಗನಾಥ್ ನಟನೆಯಲ್ಲಿ ಮೂಡಿ ಬಂದಿದ್ದ 'ಚುಟು ಚುಟು' ಹಾಡಿಗೂ ನೃತ್ಯ ಸಂಯೋಜನೆ ಮಾಡಿದ್ದು ಭೂಷಣ್. ಈ ಹಾಡಿನಲ್ಲಿ ಶರಣ್ ಹಾಗೂ ಆಶಿಕಾ ಸಖತ್ ಆಗಿ ಕುಣಿದಿದ್ದರು. ಈ ವಿಡಿಯೋ ಸಾಂಗ್ ಯೂಟ್ಯೂಬ್‌ನಲ್ಲಿ 130 ಮಿಲಿಯನ್‌ಗೂ ಹೆಚ್ಚು ಬಾರಿ ವೀಕ್ಷಣೆ ಕಂಡಿದೆ.

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವಿನ್ನರ್

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವಿನ್ನರ್

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಭೂಷಣ್ ವಿನ್ನರ್ ಆಗಿದ್ದರು. ತೆಲುಗಿನ ಡಿ ಜೂನಿಯರ್ಸ್ ರಿಯಾಲಿಟಿ ಕಾರ್ಯಕ್ರಮದ ವಿನ್ನರ್ ಸಹ ಆಗಿದ್ದರು. ರಾಜ ರಾಣಿ ರೋರರ್ ರಾಕೆಟ್ ಚಿತ್ರದಲ್ಲಿ ಭೂಷಣ್ ನಟಿಸಿದ್ದಾರೆ.

More from Filmibeat

English summary
Bhushan Choreographed the song Baby Dance Floor Ready from Robert movie. who is Bhushan?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X