'ನಿಂತ ನೋಡು ಯಜಮಾನ..' ಹಾಡಿನ ಪೂರ್ಣ ಸಾಹಿತ್ಯ
'ಯಜಮಾನ' ಸಿನಿಮಾದ ನಾಲ್ಕನೇ ಹಾಡು ಬಿಡುಗಡೆಯಾಗಿದೆ. ಮತ್ತೆ ಡಿ ಬಾಸ್ ಅಬ್ಬರ ಯೂಟ್ಯೂಬ್ ನಲ್ಲಿ ಶುರುವಾಗಿದೆ. ಹಾಡು ಬಿಡುಗಡೆಯಾದ 14 ನಿಮಿಷದಲ್ಲಿ ಒಂದು ಲಕ್ಷ ಹಿಟ್ಸ್ ಪಡೆದಿದೆ. ಈ ಹಾಡಿಗೆ ಹರಿಕೃಷ್ಣ ಸಂಗೀತ ಹಾಗೂ ವಿಜಯ ಪ್ರಕಾಶ್ ಧ್ವನಿ ನೀಡಿದ್ದಾರೆ.
'ನಿಂತ ನೋಡು ಯಜಮಾನ' ಎಂಬ ಸಂತೋಷ್ ಆನಂದ್ ರಾಮ್ ಬರೆದಿರುವ ಈ ಹಾಡು ದರ್ಶನ್ ಅಭಿಮಾನಿಗಳ ಮನಸ್ಸಿಗೆ ತಾಕಿದೆ. ಆ ಹಾಡಿನ ಪೂರ್ಣ ಸಾಹಿತ್ಯ ಇಲ್ಲಿದೆ.

====
ಯಾರೆ ಬಂದರೂ.. ಎದುರ್ಯಾರೆ ನಿಂತರೂ.. ಪ್ರೀತಿ ಹಂಚುವ ಯಜಮಾನ..
ಜೀವ ಹೋದರು.. ಜಗವೇನೆ ಅಂದರೂ ಮಾತು ತಪ್ಪದ ಯಜಮಾನ..
ಕೂಗಿ ಕೂಗಿ ಹೇಳುತೈತೆ ಇಂದು ಜಮಾನ..ಸ್ವಾಭಿಮಾನ ನನ್ನ ಪ್ರಾಣ ಎಂಬ ಪ್ರಯಾಣ..
ನಿಂತ ನೋಡು ಯಜಮಾನ.. ನಿಂತ ನೋಡು ಯಜಮಾನ..
ಒಬ್ಬನೇ ಒಬ್ಬ.. ನಮಗೆಲ್ಲ ಒಬ್ಬನು
ಯಾರ್ ಹೆತ್ತ ಮಗನೋ ನಮಗಾಗಿ ಬಂದನು..
ಮೇಲೂ ಕೀಳು ಗೊತ್ತೆ ಇಲ್ಲ ಬಡವಾನು ಗೆಳೆಯಾನೇ
ಶ್ರೀಮಂತಿಕೆ ತಲೆಗತ್ತೆ ಇಲ್ಲ.. ಹತ್ತೂರ ಒಡೆಯನೇ..
ನಿನ್ನ ಹೆಸರು.. ನಿಂದೆ ಬೆವರು.. ತಾನು ಬೆಳೆದು ತನ್ನವನ್ನು ಬೆಳೆಸೋ ಆ ಗುಣ..
ನೇರ ನುಡಿಗೆ ಸತ್ಯಗಳಿಗೆ ಮಾಡಿದ ಪ್ರಮಾಣ..
ನಿಂತ ನೋಡು ಯಜಮಾನ.. ನಿಂತ ನೋಡು ಯಜಮಾನ..
ಬಿರುಗಾಳಿ ಎದುರು ನಗುವಂತ ದೀಪ.. ನೋವನ್ನು ಮರೆಸೋ ಮಗುವಂತ ರೂಪ..
ಯಾವುದೇ ಕೇಡು ತಾಕದು ನಿನಗೆ ಕಾಯುವುದು ಅಭಿಮಾನ..
ಸೋಲುಗೂ ಸೋಲದ ಗೆದ್ದರೂ ಬೀಗದ ಒಬ್ಬರೇ ನಮ್ ಯಜಮಾನ
ಪ್ರೀತಿಗೆ ಅತಿಥಿ.. ಸ್ನೇಹಕ್ಕೆ ಸಾರಥಿ.. ಬಾಳಿನಲ್ಲಿ ಎಂದಿಗೂ ನಿನ್ ಹೆಸರೇ ಸವಾಲು..
ಏಳು ಬೀಳು ಆಟದಿ ನಿನ್ನ ನಡೆಯೇ ಕಮಾಲು..
ನಿಂತ ನೋಡು ಯಜಮಾನ.. ನಿಂತ ನೋಡು ಯಜಮಾನ..


Click it and Unblock the Notifications











