ಯಜಮಾನ' ಬಂದ 'ಶಿವನಂದಿ' ಹಾಡು ತಂದ
ಡಿ ಬಾಸ್ ದರ್ಶನ್ ಅಭಿಮಾನಿಗಳ ಹಬ್ಬದ ಆಚರಣೆ ಇದೀಗ ಶುರುವಾಗಿದೆ. 'ಯಜಮಾನ' ಸಿನಿಮಾದ ಹಾಡಿನ ಮೂಲಕ ಅವರ ಹಬ್ಬದ ಸಂಭ್ರಮ ಡಬಲ್ ಆಗಿದೆ.
ಇಷ್ಟು ದಿನಗಳಿಂದ ಕಾಯುತ್ತಿದ್ದ ಅಭಿಮಾನಿಗಳ ಕಿವಿಗೆ ಕೊನೆಗೂ 'ಯಜಮಾನ' ಸಿನಿಮಾದ ಹಾಡು ಕೇಳುವ ಭಾಗ್ಯ ಸಿಕ್ಕಿದೆ. ಚಿತ್ರದ ಮೊದಲ ಹಾಡು 'ಶಿವನಂದಿ', ಇದೀಗ ಯೂ ಟ್ಯೂಬ್ ನಲ್ಲಿ ರಿಲೀಸ್ ಆಗಿದೆ.

''ನಡೆದರೆ ತೇರು...ವೈಭವ ಜೋರು...ತಡೆಯೋರು ಯಾರು...'' ಎನ್ನುವ ಹಾಡಿನ ಸಾಲುಗಳು ದರ್ಶನ್ ಅಭಿಮಾನಿಗಳಿಗೆ ಹೇಳಿ ಮಾಡಿಸಿದ ಹಾಗಿದೆ. ಹಾಡಿಗೆ ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಬಹದ್ದೂರ್ ಚೇತನ್ ಹಾಡಿನ ಸಾಹಿತ್ಯ ಬರೆದಿದ್ದಾರೆ.
ಕಾಲ ಭೈರವ, ಸಂತೋಷ್ ವೆಂಕಿ, ಶಶಾಂಕ್ ಶೇಶಗಿರಿ, ಚೇತನ್ ವಿಕಾಸ್ ಹಾಢಿಗೆ ಧ್ವನಿ ನೀಡಿದ್ದಾರೆ. ಈ ಮಾಸ್ ಹಾಡು ಕೇಳಲು ಸಖತ್ ಮಜಾವಾಗಿದೆ.
ಅಂದಹಾಗೆ, 'ಯಜಮಾನ' ಸಿನಿಮಾಗೆ ಪಿ ಕುಮಾರ್ ಹಾಗೂ ವಿ ಹರಿಕೃಷ್ಣ ಇಬ್ಬರ ನಿರ್ದೇಶನವಿದೆ. ಶೈಲಜಾ ನಾಗ್ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ರಶ್ಮಿಕಾ ಮಂದಣ್ಣ ಹಾಗೂ ತಾನ್ಸ ಹೂಪೆ ಸಿನಿಮಾಗ ನಾಯಕಿಯರಾಗಿದ್ದಾರೆ.
More from Filmibeat
English summary
Kannada actor Darshan's 'Yajamana' movie Shivanandi song out. The movie is producing by Shailaja Nag. P.Kumar and V Harikrishana directing this movie.
yajamana darshan rashmika mandanna b suresh sandalwood sankranti ಯಜಮಾನ ಸಂಕ್ರಾಂತಿ ದರ್ಶನ್ ರಶ್ಮಿಕಾ ಮಂದಣ್ಣ ಬಿ ಸುರೇಶ್ ಸ್ಯಾಂಡಲ್ ವುಡ್


Click it and Unblock the Notifications











