'ಯಜಮಾನ'ನ 'ನಂದಿ' ವೇಗಕ್ಕೆ ದಾಖಲೆಗಳು ಧೂಳಿಪಟ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಯಜಮಾನ' ಸಿನಿಮಾ ಈಗಾಗಲೇ ಚಿತ್ರೀಕರಣ ಮುಗಿಸಿ, ತೆರೆಗೆ ಬರಲು ಸಜ್ಜಾಗುತ್ತಿದೆ. ಈ ಮಧ್ಯೆ ಸಂಕ್ರಾಂತಿ ಹಬ್ಬದ ವಿಶೇಷವಾಗಿ ಯಜಮಾನ ಚಿತ್ರದ 'ಶಿವನಂದಿ' ಹಾಡನ್ನ ಗಿಫ್ಟ್ ಆಗಿ ನೀಡಿದೆ ಚಿತ್ರತಂಡ.

'ಶಿವನಂದಿ' ಹಾಡಿಗೆ ಅಭಿಮಾನಿಗಳು ಫಿದಾ ಆಗಿದ್ದು, ಯಜಮಾನ ವೇಗಕ್ಕೆ ದಾಖಲೆಗಳೆಲ್ಲಾ ಧೂಳಿಪಟ ಆಗಿದೆ. ಅತಿ ವೇಗವಾಗಿ ಸಾವಿರ, ಹತ್ತು ಸಾವಿರ, ಲಕ್ಷ ಹಾಗೂ ಹತ್ತು ಲಕ್ಷ ದಾಟಿದೆ. ಹೌದು, ಅತಿ ವೇಗವಾಗಿ ಮಿಲಿಯನ್ ವೀಕ್ಷಕರನ್ನ ಹೊಂದಿದೆ ಹಾಡು ಎಂಬ ವಿಶೇಷ ದಾಖಲೆ ಬರೆದಿದೆ. ಅಷ್ಟೇ ಅಲ್ಲದೇ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಮೊದಲ ಸ್ಥಾನವನ್ನ ಅಲಂಕರಿಸಿದೆ.

ಹರಿಕೃಷ್ಣ ಸಂಗೀತ ನೀಡಿರುವ ಈ ಹಾಡಿಗೆ ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದಾರೆ. ''ನಡೆದರೆ ತೇರು, ವೈಭವ ಜೋರು ತಡೆಯೋರು ಯಾರು, ಆರ್ಭಟ ನೋಡು'' ಎಂದು ಅದ್ಭುತ ಸಾಲುಗಳು ಚಿತ್ರಪ್ರೇಮಿಗಳನ್ನ ಸೆಳೆಯುತ್ತಿದೆ. ಕಾಲಭೈರವ, ಸಂತೋಷ್ ವೆಂಕಿ, ಶಶಾಂಕ್ ಶೇಷಗಿರಿ, ಚಿಂತನ್ ವಿಕಾಸ್ ಈ ಹಾಡಿಗೆ ಧ್ವನಿಯಾಗಿದ್ದಾರೆ.

Yajamana movie shivanandi song record
Yajamana movie shivanandi song record

ಇನ್ನುಳಿದಂತೆ ಶೈಲಾಜ ನಾಗ್ ಮತ್ತು ಬಿ ಸುರೇಶ್ ಈ ಚಿತ್ರವನ್ನ ನಿರ್ಮಾಣ ಮಾಡಿದ್ದು, ಹರಿಕೃಷ್ಣ ಮತ್ತು ಪಿ ಕುಮಾರ್ ನಿರ್ದೇಶನ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ, ತಾನ್ಯ ಹೋಪ್ ಇಬ್ಬರು ನಾಯಕಿಯರು ಚಿತ್ರದಲ್ಲಿದ್ದಾರೆ.

ಸದ್ಯ ಹಾಡುಗಳ ಹಬ್ಬಕ್ಕೆ ಚಾಲನೆ ನಿಡಿರುವ ಯಜಮಾನ ಪ್ರತಿ ಎರಡು ದಿನಕ್ಕೊಮ್ಮೆ ಒಂದೊಂದು ಹಾಡನ್ನ ರಿಲೀಸ್ ಮಾಡುವ ಪ್ಲಾನ್ ಮಾಡಿದೆ. ಸದ್ಯದ ಮಾಹಿತಿ ಪ್ರಕಾರ ಫೆಬ್ರವರಿ ಅಂತ್ಯಕ್ಕೆ ಯಜಮಾನ ತೆರೆಗೆ ಬರಬಹುದು.

More from Filmibeat

English summary
Fastest 1 million views for Yajamana's shivanandi a Lyrical Song in kannada film industry. may be movie will release on february.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X