'ಏನಮ್ಮಿ ಏನಮ್ಮಿ..' ಹಾಡಿಗೆ ಸಿಕ್ಕಿದೆ 50 ಮಿಲಿಯನ್ ಹಿಟ್ಸ್
''ಏನಮ್ಮಿ ಏನಮ್ಮಿ ಯಾರಮ್ಮಿ ನಿನ್ನಮ್ಮಿ.. ಆಗೋಯ್ತು ನನ್ನ ಬಾಳು ಹೆಚ್ಚು ಕಮ್ಮಿ ಹೆಚ್ಚು ಕಮ್ಮಿ..'' ಈ ಹಾಡನ್ನು ವಿಜಯ ಪ್ರಕಾಶ್ ಧ್ವನಿಯಲ್ಲಿ ಕೇಳುತ್ತಿದ್ದರೆ ಮಜಾ ನೀಡುತ್ತದೆ. ಮಂಡ್ಯ ಸ್ಟೈಲ್ ನ ಈ ಹಾಡು ಕರ್ನಾಟಕದ ತುಂಬ ಫೇಮಸ್ ಆಗಿದೆ.
'ಅಯೋಗ್ಯ' ಸಿನಿಮಾದ 'ಏನಮ್ಮಿ..' ಏನಮ್ಮಿ ಹಾಡು ಇದೀಗ ಯೂ ಟ್ಯೂಬ್ ನಲ್ಲಿ 50 ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ. ಹಾಡು ಬಿಡುಗಡೆಯಾದ ಐದುವರೆ ತಿಂಗಳಿನಲ್ಲಿ ಈ ಮಟ್ಟದ ಹಿಟ್ಸ್ ಹಾಡಿಗೆ ಸಿಕ್ಕಿದೆ. ಈ ಮೂಲಕ ಯೂ ಟ್ಯೂಬ್ ನಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಕನ್ನಡ ಹಾಡುಗಳ ಪೈಕಿ ಇದು ಕೂಡ ಒಂದಾಗಿದೆ.
'ಏನಮ್ಮಿ ಏನಮ್ಮಿ...' ವಿಡಿಯೋ ಹಾಡು 50 ಮಿಲಿಯನ್ ದಾಟ್ಟಿದ್ದರೆ, ಅದೇ ರೀತಿ ಲಿರಿಕರ್ ಹಾಡು 39 ಮಿಲಿಯನ್ ಆಗಿದೆ.

ಈ ಚಿತ್ರದ ನಾಲ್ಕೂ ಹಾಡುಗಳನ್ನು ಚೇತನ್ ಕುಮಾರ್ ಬರೆದಿದ್ದಾರೆ. ಚೇತನ್ ಕೆರಿಯರ್ ನಲ್ಲಿ ಬರೆದ ಬೆಸ್ಟ್ ಹಾಡುಗಳ ಪಟ್ಟಿಗೆ ಈಗ 'ಏನಮ್ಮಿ ಏನಮ್ಮಿ..' ಕೂಡ ಸೇರಿದೆ. ಅರ್ಜುನ್ ಜನ್ಯ ಹಾಡಿಗೆ ಸಂಗೀತ ನೀಡಿದ್ದರು.
'ಅಯೋಗ್ಯ' ಮಹೇಶ್ ಗೌಡ ನಿರ್ದೇಶಕನ ಚಿತ್ರವಾಗಿತ್ತು. ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸತೀಶ್ ಕೆರಿಯರ್ ನಲ್ಲಿ ಈ ಸಿನಿಮಾ ದೊಡ್ಡ ಬ್ರೇಕ್ ನೀಡಿತ್ತು. ಕಳೆದ ವರ್ಷ ಬಿಡುಗಡೆಯಾದ ಚಿತ್ರಗಳ ಪೈಕಿ ಯಶಸ್ವಿ ಸಿನಿಮಾ ಅಂತ 'ಅಯೋಗ್ಯ' ಕರೆಸಿಕೊಂಡಿದೆ.


Click it and Unblock the Notifications











