ಅಯೋಗ್ಯ ಚಿತ್ರದ 'ಏನಮ್ಮಿ ಏನಮ್ಮಿ' ಹಾಡಿನಿಂದ ಹೊಸ ಸಾಧನೆ

ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದ ಅಯೋಗ್ಯ ಚಿತ್ರ ನೂರು ದಿನಗಳ ಕಾಲ ಪ್ರದರ್ಶನ ಕಂಡು ಕಳೆದ ವರ್ಷದ ಹಿಟ್ ಸಿನಿಮಾ ಆಗಿತ್ತು. ಆ ಚಿತ್ರದ ಹಾಡುಗಳು ಕೂಡ ಅಷ್ಟೇ ದೊಡ್ಡ ಸಕ್ಸಸ್ ಕಂಡಿದ್ದವು.

ಅದರಲ್ಲೂ ಏನಮ್ಮಿ ಏನಮ್ಮಿ ಹಾಡಂತೂ ಸಖತ್ ಕ್ರೇಜ್ ಹುಟ್ಟುಹಾಕಿತ್ತು. ಸೋಶಿಯಲ್ ಮೀಡಿಯಾ, ಟಿಕ್ ಟಾಕ್ ಹೀಗೆ ಎಲ್ಲ ಕಡೆಯೂ ಹವಾ ಮಾಡಿತ್ತು. ಇದೀಗ, ಈ ಹಾಡು ಮತ್ತೊಂದು ವಿಶೇಷ ಸಾಧನೆ ಮಾಡಿದೆ.

ಸಂಗೀತ ಕ್ಷೇತ್ರದ ಪ್ರಮುಖ ಆಪ್ ಗಳಲ್ಲಿ ಒಂದಾಗಿರುವ ಗಾನ (gaana) ಅಪ್ ನಲ್ಲಿ ನೂರು ಮಿಲಿಯನ್ ಜನರು ಈ ಹಾಡು ಕೇಳಿದ್ದಾರೆ. ಈ ಬಗ್ಗೆ ಚಿತ್ರತಂಡ ಸಂತಸ ಹಂಚಿಕೊಂಡಿದೆ.

Yenammi Yenammi song 100 million in gaana app

ಈ ಕುರಿತು ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ನಿರ್ದೇಶಕ ಮಹೇಶ್ ಗೌಡ 'ಕನ್ನಡ ಚಿತ್ರರಂಗದಲ್ಲಿ ಪ್ರಪ್ರಥಮ ಬಾರಿಗೆ ನನ್ನ ಮೊದಲ ನಿರ್ದೇಶನದ "ಅಯೋಗ್ಯ" ಚಿತ್ರದ "ಏನಮ್ಮಿ ಏನಮ್ಮಿ" ಪ್ರೇಮ ಗೀತೆ, "ಗಾನ" App ಒಂದರಲ್ಲೇ 10 ಕೋಟಿ ಜನ (100 MILLION) ಈ ಗೀತೆಯನ್ನು ಕೇಳಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗದಲ್ಲೇ ಹೊಸ ದಾಖಲೆ ನಿರ್ಮಿಸಿದೆ. ಈ ಗೀತೆಗೆ ಅತ್ಯದ್ಭುತ ಸಂಗೀತ ನಿರ್ದೇಶನ ಮಾಡಿರುವ "ಅರ್ಜುನ್ ಜನ್ಯ" ಸರ್ ಅವರಿಗೂ ಹಾಗೂ ಅತ್ಯದ್ಭುತ ಸಾಹಿತ್ಯ ಬರೆದಿರುವ ನನ್ನ ಪ್ರೀತಿಯ ಗೆಳೆಯ "ಚೇತನ್ ಕುಮಾರ್" ಅವರಿಗೆ ತುಂಬು ಹೃದಯದ ಧನ್ಯವಾದಗಳು ......'' ತಿಳಿಸಿದ್ದಾರೆ.

ಇನ್ನು ನಾಯಕ ನಟ ಸತೀಶ್ ನೀನಾಸ ಕೂಡ ಪ್ರತಿಕ್ರಿಯಿಸಿದ್ದು, ''ಗಾನ 2019ರಲ್ಲಿ ಅಯೋಗ್ಯ ಚಿತ್ರದ ಏನಮ್ಮಿ ಹಾಡು 100 ಮಿಲಿಯನ್ ಆಗುವ ಮೂಲಕ ಟಾಪ್ ಒನ್ ಪ್ರಶಸ್ತಿ ಪಡೆದಿದೆ. ಹಾಡು ಕೇಳಿ ಹರಸಿದ, ಪ್ರತಿಯೊಬ್ಬರಿಗೂ 100 ಮಿಲಿಯನ್ ನಮಸ್ಕಾರಗಳು...'' ಎಂದು ಖುಷಿ ಹಂಚಿಕೊಂಡಿದ್ದಾರೆ.

ಬಹುದ್ಧೂರ್ ಖ್ಯಾತಿಯ ಚೇತನ್ ಕುಮಾರ್ ಈ ಹಾಡಿಗೆ ಸಾಹಿತ್ಯ ರಚಿಸಿದ್ದು, ಅರ್ಜುನ್ ಜನ್ಯ ಕಂಪೋಸ್ ಮಾಡಿದ್ದರು. ಗಾಯಕ ವಿಜಯ ಪ್ರಕಾಶ್ ಹಾಡಿದ್ದರು. ಹೀಗಾಗಿ, ಅರ್ಜುನ್ ಜನ್ಯ ಕೂಡ ಈ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.

More from Filmibeat

English summary
Yenammi Yenammi song from ayogya movie reached 100 million in gaana app. its the first kannada song has achieve this. arjun janya composed song.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X