For Quick Alerts
  ALLOW NOTIFICATIONS  
  For Daily Alerts

  ದಾಂಪತ್ಯ ಕಲಹದ ಬಳಿಕ ಮೊದಲ ಬಾರಿಗೆ ಹೊಸ ಹಾಡಿನ ವಿಡಿಯೋ ಶೇರ್ ಮಾಡಿದ ಹನಿ ಸಿಂಗ್

  By ಫಿಲ್ಮಿಬೀಟ್ ಡೆಸ್ಕ್
  |

  ಬಾಲಿವುಡ್ ಖ್ಯಾತ ಗಾಯಕ, ರ್ಯಾಪರ್, ಸಂಗೀತ ಸಂಯೋಜಕ ಯೋ ಯೋ ಹನಿಸಿಂಗ್ ದಾಂಪತ್ಯ ಕಲಹದ ಬಳಿಕ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ಹೊಸ ಹಾಡಿನ ಬಗ್ಗೆ ಪೋಸ್ಟ್ ಶೇರ್ ಮಾಡಿದ್ದಾರೆ. ಪತ್ನಿ ಶಾಲಿನಿ ತಲ್ವಾರ್ ಯೋ ಯೋ ಹನಿ ಸಿಂಗ್ ವಿರುದ್ಧ ಕೌಟುಂಬಿಕ ದೌರ್ಜನ್ಯ ಆರೋಪ ಮಾಡಿ ಕೋರ್ಟ್ ಮೆಟ್ಟಿಲೇರಿದ್ದರು. ದಾಂಪತ್ಯ ಕಲಹದ ಬಳಿಕ ಯೋ ಯೋ ಹನಿ ಸಿಂಗ್ ತನ್ನ ಹೊಸ ಹಾಡಿನ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದು ಹಾಡಿನ ಟೀಸರ್ ಅನ್ನು ಹನಿಸಿಂಗ್ ಹಂಚಿಕೊಂಡಿದ್ದಾರೆ.

  'ಕಾಂತ ಲಗಾ..' ಟೈಟಲ್ ನ ಹಾಡು ಇದಾಗಿದ್ದು, ಈ ಹಾಡಿಗೆ ಖ್ಯಾತ ಗಾಯಕರಾದ ಕಕ್ಕರ್ ಸಹೋದರು ಸಾಥ್ ನೀಡಿದ್ದಾರೆ. ಹೌದು ನೇಹಾ ಕಕ್ಕರ್ ಮತ್ತು ಟೋನಿ ಕಕ್ಕರ್ ಈ ಹಾಡಿಗೆ ಸಹಕರಿಸಿರುವುದಾಗಿ ಹನಿಸಿಂಗ್ ಹೇಳಿದ್ದಾರೆ. ಅಂದಹಾಗೆ ಈ ಹಾಡನ್ನು ಟೋನಿ ಬರೆದು, ಸಂಗೀತ ನೀಡಿದ್ದಾರೆ ಎನ್ನುವುದು ಹನಿಸಿಂಗ್ ಶೇರ್ ಮಾಡಿರುವ ಪೋಸ್ಟ್ ನಲ್ಲಿ ಗೊತ್ತಾಗುತ್ತಿದೆ. ಈ ಹಾಡನ್ನು ಹನಿಸಿಂಗ್ ಜೊತೆ ನೇಹಾ ಕಕ್ಕರ್ ಹಾಡಿದ್ದಾರೆ. "ಈ ವರ್ಷದ ಅತೀ ದೊಡ್ಡ ಸಹಯೋಗಕ್ಕಾಗಿ ಸಿದ್ಧರಾಗಿ. ಶೀಘ್ರದಲ್ಲೇ ಬರಲಿದೆ" ಎಂದು ಬರೆದುಕೊಂಡಿದ್ದಾರೆ.

  ಮಗಳ ವಿಡಿಯೋಗೆ ಕನ್ನಡ ಹಾಡು; ಡೇವಿಡ್ ವಾರ್ನರ್ ಕನ್ನಡ ಪ್ರೀತಿಗೆ ಅಭಿಮಾನಿಗಳು ಫಿದಾಮಗಳ ವಿಡಿಯೋಗೆ ಕನ್ನಡ ಹಾಡು; ಡೇವಿಡ್ ವಾರ್ನರ್ ಕನ್ನಡ ಪ್ರೀತಿಗೆ ಅಭಿಮಾನಿಗಳು ಫಿದಾ

  ಕೆಲವು ದಿನಗಳ ಹಿಂದೆಯಷ್ಟೆ ಹನಿಸಿಂಗ್ ತನ್ನ ಪತ್ನಿ ತನ್ನ ವಿರುದ್ಧ ಹೊರಿಸಿದ್ದ ಆರೋಪಗಳನ್ನು ಸುಳ್ಳು ಎಂದು ಹೇಳಿ ಪೋಸ್ಟ್ ಹಂಚಿಕೊಂಡಿದ್ದರು. ತನ್ನ ವಿರುದ್ಧ ಕೇಳಿಬಂದ ಆರೋಪಗಳು ಅಸಹ್ಯಕರವಾಗಿದೆ ಎಂದಿದ್ದರು. ದುರುದ್ದೇಶಪೂರಿತ ಆರೋಪಗಳಾಗಿವೆ ಎಂದು ಹನಿಸಿಂಗ್ ಬೇಸರ ಹೊರಹಾಕಿದ್ದರು.

  "ನಾನು ಎಲ್ಲಾ ಆಪಾದನೆಗಳನ್ನು ಬಲವಾಗಿ ನಿರಾಕರಿಸುತ್ತೇನೆ. ಆದರೆ ಇನ್ನು ಮುಂದೆ ಯಾವದೇ ಪ್ರತಿಕ್ರಿಯೆ ನೀಡುವುದಿಲ್ಲ. ಏಕೆಂದರೆ ಈ ವಿಷಯವು ನ್ಯಾಯಾಲಯ ಮುಂದಿದೆ. ಈ ದೇಶದ ನ್ಯಾಯಾಂಗ ವ್ಯವಸ್ಥೆ ಮೇಲೆ ನನೆ ಸಂಪೂರ್ಣ ನಂಬಿಕೆ ಇದೆ. ಸತ್ಯ ಶೀಘ್ರದಲ್ಲೇ ಹೊರಬೀಳಲಿದೆ ಎನ್ನುವ ವಿಶ್ವಾಸ ನನಗಿದೆ. ಈ ನಡುವೆ ನನ್ನ ಅಭಿಮಾನಿಗಳು ಮತ್ತು ಸಾರ್ಜನಿಕರು ನನ್ನ ಹಾಗು ನನ್ನ ಕುಟುಂಬದ ಬಗ್ಗೆ ಯಾವುದೇ ತೀರ್ಮಾಮಕ್ಕೆ ಬರಬಾರದು ಎಂದು ಮನವಿ ಮಾಡುತ್ತೇನೆ. ಪ್ರಾಮಾಣಿಕತೆ ಗೆಲ್ಲುತ್ತದೆ ಎನ್ನುವ ವಿಶ್ವಾಸವಿದೆ" ಎಂದು ದೀರ್ಘವಾದ ಪೋಸ್ಟ್ ಹಾಕುವ ಮೂಲಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದರು. ಇದೀಗ ತನ್ನ ಹಾಡಿನ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ.

  ಹನಿಸಿಂಗ್ ಪತ್ನಿ ಶಾಲಿನಿ ತಲ್ವಾರ್ ಕೌಂಟುಂಬಿಕ ದೌರ್ಜನ್ಯ ಕೇಸ್ ದಾಖಲಿಸಿದ್ದರು. Rap ಸಿಂಗರ್ ಹನಿ ಸಿಂಗ್ ವಿರುದ್ಧ ದೆಹಲಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದ ಪತ್ನಿ ಶಾಲಿನಿ ತಲ್ವಾರ್, ಕೌಟುಂಬಿಕ ದೌರ್ಜನ್ಯ, ಲೈಂಗಿಕ ದೌರ್ಜನ್ಯ, ಮಾನಸಿಕ ಕಿರುಕುಳ, ಆರ್ಥಿಕ ಹಿಂಸೆ ಮತ್ತು ವ್ಯಭಿಚಾರದ ಆರೋಪಗಳನ್ನು ಮಾಡಿದ್ದರು.

  ಅಲ್ಲದೆ ಪತಿಯಿಂದ ವಿಚ್ಛೇದನ ಕೋರುತ್ತಾ ಶಾಲಿನಿ 10 ಕೋಟಿ ರೂ. ಪರಿಹಾರ ಕೇಳಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. 38 ವರ್ಷದ ಪತ್ನಿ ಶಾಲಿನಿ ಹನಿ ಸಿಂಗ್ ತನ್ನನ್ನು ಕ್ರೂರವಾಗಿ, ಪ್ರಾಣಿಗಳಂತೆ ನಡೆಸಿಕೊಂಡಿದ್ದಾರೆ ಎಂದು ಕೋರ್ಟ್‌ಗೆ ಸಲ್ಲಿಸಿರುವ 120 ಪುಟಗಳ ಅರ್ಜಿಯಲ್ಲಿ ಉಲ್ಲೇಖಿಸಿದ್ದ ಶಾಲಿನಿ ಪತಿಯಿಂದ ಹಲವಾರು ಬಾರಿ ದೈಹಿಕ ಹಲ್ಲೆಗೆ ಒಳಗಾಗಿರುವುದಾಗಿ ಆರೋಪ ಮಾಡಿದ್ದರು.

  ತನ್ನ ಪತಿ ಹಲವಾರು ಮಹಿಳೆಯರ ಜೊತೆ ಲೈಂಗಿಕ ಸಂಪರ್ಕ ಇಟ್ಟುಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಹನಿ ಸಿಂಗ್ ಕುಟುಂಬದ ಸದಸ್ಯರು ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದಾರೆ, ಭಯದಲ್ಲೇ ಜೀವನ ಮಾಡಬೇಕಾಗಿದೆ ಎಂದು ಶಾಲಿನಿ ದೂರಿದ್ದಾರೆ. ಸತತದ ಹಿಂಸೆ ಮತ್ತು ಕಿರುಕುಳದಿಂದ ಹಿಂಸೆ ಮತ್ತು ಮಾನಸಿಕ ವೇದನೆಯಿಂದ ತನಗೆ ಖಿನ್ನತೆಗೊಳಗಾಗಿದ್ದೀನಿ ಎಂದು ಶಾಲಿನಿ ದೂರಿದ್ದರು.

  English summary
  Singer Yo Honey Singh shares first post after his wife domestic violence allegation.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X