For Quick Alerts
  ALLOW NOTIFICATIONS  
  For Daily Alerts

  'ಗಾಳಿಪಟ' ಹಾರಿಸಿರೋ ಭಟ್ಟರ ಹೊಸ ಸಾಂಗ್ 'ಜಜಾಂಗ್ ಜಂಗ್': 'ಲವ್ 360' ಕಮಾಲ್

  |

  ಸ್ಯಾಂಡಲ್‌ವುಡ್‌ನಲ್ಲಿ ಲವ್ ಸ್ಟೋರಿ ಹೆಣೆಯೋದ್ರಲ್ಲಿ ಡೈರೆಕ್ಟರ್ ಶಶಾಂಕ್ ಎಕ್ಸ್‌ಪರ್ಟ್. ಅದರಲ್ಲೂ ಹೊಸಬರಿಗೆ ಸಿನಿಮಾ ಮಾಡೋದ್ರಲ್ಲಿ ಶಶಾಂಕ್ ಎತ್ತಿದ ಕೈ. ಈಗ ಮತ್ತೆ ಇಂತಹದ್ದೇ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಹೊಸ ಪ್ರತಿಭೆಗಾಗಿ 'ಲವ್ 360' ಸಿನಿಮಾ ಮಾಡಿದ್ದಾರೆ. ಈ ಸಿನಿಮಾ ನಿಧಾನವಾಗಿ ಸಿನಿಪ್ರಿಯರ ಮನಗೆಲ್ಲೋಕೆ ಶುರುಮಾಡಿದೆ.

  ಸದ್ಯ ಯೋಗರಾಜ್‌ ಭಟ್ಟರು ಬರೆದ ಹಾಡೊಂದು ಬೇಜಾನ್ ಸೌಂಡ್ ಮಾಡ್ತಿದೆ. ಒಂದ್ಕಡೆ ಭಟ್ಟರ 'ಗಾಳಿಪಟ' ವೀಕೆಂಡ್‌ನಲ್ಲಿ ಆಕಾಶದೆತ್ತರಕ್ಕೆ ಹಾರಿದೆ. ಇನ್ನೊಂದ್ಕಡೆ ಇದೇ 'ಲವ್ 360' ಸಾಂಗ್ ಪ್ರೇಮಿಗಳಿಗೆ ಸಖತ್ ಕಿಕ್ ಕೊಡುತ್ತಿದೆ.

  ಯೋಗರಾಜ್ ಭಟ್ಟರ ಸಾಂಗ್ ಅಂದ್ರೆ, ಹಂಗೆ. ಕೆಲವು ಪದಗಳಿಗೆ ಅರ್ಥ ಹುಡುಕೋಕೆ ಹೋದರೆ ಯಾವ ನಿಘಂಟಿನಲ್ಲೂ ಸಿಗೋದಿಲ್ಲ. ಈಗ 'ಲವ್ 360'ಗೆ ಬರೆದ 'ಜಜಾಂಗ್ ಜಂಗ್' ಹಾಡಿನ ಅರ್ಥ ಹುಡುಕೋಕೆ ನಿರ್ದೇಶಕರೇ ಪ್ರಯತ್ನ ಪಟ್ಟು ಸುಸ್ತಾಗಿದ್ದಾರೆ. ಇನ್ನು ಟ್ಯೂನ್ ಹಾಕಿರೋ ಅರ್ಜುನ್ ಜನ್ಯ ಆ ತಂಟೆಗೇ ಹೋಗಿಲ್ಲ. ಹಾಗಿದ್ರೆ ಈ ಹೊಸ ಹಾಡು ಹೇಗಿದೆ? ಅಂತ ತಿಳಿಯೋಕೆ ಮುಂದೆ ಓದಿ.

  ಜಜಂಗ್ ಜಾಂಗ್ ಸೂಪರ್ ಸಾಂಗ್

  ಜಜಂಗ್ ಜಾಂಗ್ ಸೂಪರ್ ಸಾಂಗ್


  "ಕಾಳು ಹಾಕಿದ ಹುಡುಗಿ ಸಿಕ್ಬಿಟ್ಲು ಜಜಾಂಗ್ ಜಂಗ್.." ಮೊದಲಿ ನಾಲ್ಕು ಅಕ್ಷರ ಅರ್ಥ ಆಗಿದ್ದು ಬಿಟ್ಟರೆ ಈ 'ಜಜಾಂಗ್ ಜಂಗ್' ಯಾಕೆ ಬರೆದ್ರು ಅನ್ನೋದು ಚಿತ್ರತಂಡಕ್ಕೂ ಗೊಂದಲವಿದೆ. ಆದರೆ, ಈ ಪದ ಕೇಳೋಕೆ ಮಾತ್ರ ಮಜವಾಗಿದೆ. ಇದಕ್ಕೆ ಅರ್ಜುನ್ ಜನ್ಯ ಟ್ಯೂನ್ ಹಾಕಿದ್ಮೇಲೆ 'ಜಜಾಂಗ್ ಜಂಗ್‌' ಕಿಕ್ ಕೊಡೋಕೆ ಶುರು ಮಾಡಿದೆ. ಹೊಸ ಪ್ರತಿಭೆಯನ್ನು ಹಾಕೊಂಡು ಮಾಡಿದ ಸಿನಿಮಾ ಹಾಡುಗಳು ಸಾಥ್ ನೀಡುತ್ತಿವೆ. ಇಂದು( ಆಗಸ್ಟ್ 13) ಭಟ್ಟರು ಬರೆದ ಹಾಡು ಕೂಡ ಸಖತ್ ಇಷ್ಟ ಆಗುತ್ತಿದೆ.

  ಪಕ್ಕಾ ಪ್ರಮೋಷನಲ್ ಸಾಂಗ್

  ಪಕ್ಕಾ ಪ್ರಮೋಷನಲ್ ಸಾಂಗ್

  'ಲವ್ 360' ಸಿನಿಮಾ ಆಗಸ್ಟ್ 19 ರಂದು ಬಿಡುಗಡೆಯಾಗುತ್ತಿದೆ. ಈ ಕಾರಣಕ್ಕೆ ಪಕ್ಕಾ ಪ್ರಮೋಷನಲ್ ಸಾಂಗ್ ಅನ್ನು ನಿರ್ದೇಶಕ ಹಾಗೂ ನಿರ್ಮಾಪಕ ಶಶಾಂಕ್ ರಿಲೀಸ್ ಮಾಡಿದ್ದಾರೆ. ಆರಂಭದಲ್ಲಿ ಭಟ್ಟರ ಹಾಡನ್ನೇ ಟೀಸ್ ಮಾಡುವ ಶಶಾಂಕ್ ಸಾಂಗ್ ಹಿಟ್ ಆಗುತ್ತೆ ಅಂತ ಭವಿಷ್ಯ ನುಡಿದಿದ್ದಾರೆ. ಅರ್ಜುನ್ ಜನ್ಯಾ ಈ ಹಾಡಿಗೆ ಟ್ಯೂನ್ ಹಾಕಿದ್ದಲ್ಲದೆ, ಅವರೇ ಹಾಡಿದ್ದಾರೆ. ಹೀಗಾಗಿ ಇದು ಸಂಗೀತ ಪ್ರಿಯರಿಗೆ ವಿಶಿಷ್ಟ ಅನುಭವವನ್ನು ನೀಡುತ್ತಿದೆ.

  ಪಕ್ಕಾ ಎಮೋಷನಲ್ ಸಿನಿಮಾ

  ಪಕ್ಕಾ ಎಮೋಷನಲ್ ಸಿನಿಮಾ

  ಶಶಾಂಕ್ ಹೆಣೆದ ಲವ್ ಸ್ಟೋರಿಗಳಲ್ಲೊಂದು ಲವಲವಿಕೆ ಇರುತ್ತೆ. ಅಲ್ಲೊಂದು ಭಾವನೆಗಳು ಹರಿವು ಇರುತ್ತೆ. 'ಮೊಗ್ಗಿನ ಮನಸ್ಸು', ಕೃಷ್ಣನ್ ಲವ್ ಸ್ಟೋರಿ'ಯಿಂದ ಹಿಡಿದು ಶಶಾಂಕ್ ನಿರ್ದೇಶಿಸಿದ ಲವ್ ಸ್ಟೋರಿಯ ಸಿನಿಮಾ ಪ್ರೇಕ್ಷಕರನ್ನು ಸೆಳೆದಿವೆ. ಯುವ ಪ್ರೇಮಿಗಳ ಹೃದಯ ಗೆದ್ದಿವೆ. ಈಗ ಹೊಸ ಪ್ರತಿಭೆ ಪ್ರವೀಣ್ ಹಾಗೂ 'ಲವ್ ಮಾಕ್ಟೇಲ್' ಖ್ಯಾತಿಯ ರಚನಾ ಇಂದರ್ ಕಾಂಬಿನೇಷನ್‌ನಲ್ಲಿ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಇದು ಪ್ರೇಕ್ಷಕರಿಗೆ ಎಷ್ಟು ಇಷ್ಟ ಆಗುತ್ತೆ ಅನ್ನುವ ಕುತೂಹಲವಿದೆ.

  'ಗಾಳಿಪಟ' ಸಿನಿಮಾನೂ ಮಸ್ತ್

  'ಗಾಳಿಪಟ' ಸಿನಿಮಾನೂ ಮಸ್ತ್

  ಯೋಗರಾಜ್‌ ಭಟ್ ನಿರ್ದೇಶಿಸಿದ 'ಗಾಳಿಪಟ' ಸಿನಿಮಾ ಪ್ರೇಕ್ಷಕರಿಗೆ ಸಖತ್ ಕಿಕ್ ಕೊಡುತ್ತಿದೆ. ಸಿನಿಮಾ ನೋಡಿದ ಪ್ರೇಕ್ಷಕರೆಲ್ಲರೂ ಶಿಳ್ಳೆ ಹೊಡೆದು ಆಚೆ ಬರುತ್ತಿದ್ದಾರೆ. ಬಿಡುಗಡೆಯಾದ ದಿನದಿಂದ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮತ್ತೆ ಯೋಗರಾಜ್ ಭಟ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಕಾಂಬಿನೇಷನ್ ಮೋಡಿ ಮಾಡುತ್ತಿದೆ. ಮುಂದೆನೂ ಸಿನಿಮಾ ಹೀಗೆ ಮುಂದುವರೆದರೆ ಸ್ಯಾಂಡಲ್‌ವುಡ್‌ ಮತ್ತೊಂದು ಮೆಗಾ ಹಿಟ್ ಫಿಕ್ಸ್.

  English summary
  Yogaraj Bhat New Song From Love 360 Directed By Shashank, Know More.
  Saturday, August 13, 2022, 22:27
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X