Ekka First Song: 'ಎಕ್ಕ' ಮಾರ್ ಮಾರ್.. ಪಕ್ಕಾ ಶೋ.. ಹೆಂಗೈತೆ ಸಾಂಗು ಕೇಳ್ ಗುರು
ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಎಕ್ಕ' ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗಿದೆ. ರೋಹಿತ್ ಪದಕಿ ನಿರ್ದೇಶನದ ಚಿತ್ರದಲ್ಲಿ ಯುವ ರಾಜ್‌ಕುಮಾರ್ ಹೀರೊ ಆಗಿ ನಟಿಸ್ತಿದ್ದಾರೆ. ಪಕ್ಕಾ ಲೋಕಲ್ ಹುಡುಗನ ಅವತಾರದಲ್ಲಿ ಯುವ ದರ್ಬಾರ್ ನಡೆಸೋಕೆ ಬರ್ತಿದ್ದಾರೆ.
ಚರಣ್ ರಾಜ್ ಸಂಗೀತದಲ್ಲಿ ನಾಗಾರ್ಜುನ ಶರ್ಮಾ 'ಎಕ್ಕ' ಮಾರ್ ಮಾರ್ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಚರಣ್ ರಾಜ್ ಹಾಡು ಹಾಡಿದ್ದು ರೋಹಿತ್, ವಿ. ಎಂ ಮಹಾಲಿಂಗಂ ದನಿಗೂಡಿಸಿದ್ದಾರೆ. ಲಿರಿಕಲ್ ವೀಡಿಯೋ ರಿಲೀಸ್ ಆಗೋದು ಕೊಂಚ ತಡವಾಗಿದೆ. ಆದರೆ ಅದಕ್ಕೂ ಮುನ್ನ JioSaavn ಮ್ಯೂಸಿಕ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಸಾಂಗ್ ಕೇಳೊಕೆ ಸಿಕ್ಕಿದೆ.

'ಜಾಕಿ' ಚಿತ್ರದ 'ಎಕ್ಕ ರಾಜ ರಾಣಿ' ಸಾಂಗ್ ನೆನಪಿಸುವಂತೆ 'ಎಕ್ಕ ಮಾರ್ ಮಾರ್' ಸಾಂಗ್ ಮೂಡಿ ಬಂದಿದೆ. ಎಕ್ಕ ಬಿದ್ರೆ ಊರೋರೆಲ್ಲಾ ಒಬ್ಬಟ್ಟು, ಇಲ್ಲ ಅಂದರೆ ಮನೆ ಮುಂದೆ ಬ್ಯಾಂಡ್ ಸೆಟ್ಟು, ಒಂದು ಕಾರ್ಡ್‌ಗ್ ಬಿದ್ರೆ ಚೂಟು, ಎರಡನೇ ಕಾರ್ಡ್‌ಗೆ ಬಿದ್ರೆ ಪಥಡ್ಡು, ಹೊಡಿ ಚಿನ್ನ ಹೊಡಿ ಚಿನ್ನಾ ಎರಡೇಟು, ಮುದ್ದೆ ಕೋಳಿ ಸಾರೇ ಫರ್ಫೆಕ್ಟು ಹೀಗೆ ಸಿಕ್ಕಾಪಟ್ಟೆ ಕಲೋಕಿಯಲ್ ಆಗಿ ಲೋಕಲ್ ಸಾಲುಗಳನ್ನು ಸೇರಿಸಿ ಸಾಹಿತ್ಯ ಬರೆಯಲಾಗಿದೆ.
ಸದ್ಯ ಲಿರಿಕಲ್ ಸಾಂಗ್ ರಿಲೀಸ್ ಆಗಿದೆ. ಅಲ್ಲಲ್ಲಿ ಯುವ ರಾಜ್‌ಕುಮಾರ್ ಜಬರ್ದಸ್ತ್ ಡ್ಯಾನ್ಸ್ ಝಲಕ್ ಕೂಡ ಇದೆ. ಕೋಟೆ ರೀತಿಯ ಜಾಗದಲ್ಲಿ ಇಸ್ಪೀಟ್ ಆಡುವ ಅಡ್ಡೆ ಹಿನ್ನೆಲೆಯಲ್ಲಿ ಸಾಂಗ್ ಕಟ್ಟಿಕೊಡಲಾಗಿದೆ. ತಮಿಳಿನ ಬಾಬಾ ಭಾಸ್ಕರ್ ಮಾಸ್ಟರ್ ಸಿಕ್ಕಾಪಟ್ಟೆ ಬಿಂದಾಸ್ ಆಗಿ ಸಾಂಗ್ ಕೊರಿಯೋಗ್ರಫಿ ಮಾಡಿದ್ದಾರೆ. ತಮಟೆ ಸೇರ ಒಂದಷ್ಟು ಸಾಂಸ್ಕ್ರೃತಿಕ ಕಲಾತಂಡಗಳನ್ನು ಬಳಸಿಕೊಳ್ಳಲಾಗಿದೆ.
ಮೇಕಿಂಗ್ ಹಂತದಲ್ಲೇ 'ಎಕ್ಕ' ಸಿನಿಮಾ ಸಖತ್ ಹೈಪ್ ಕ್ರಿಯೇಟ್ ಮಾಡ್ತಿದೆ. 'ಉತ್ತರಕಾಂಡ' ಸಿನಿಮಾ ಪಕ್ಕಕ್ಕಿಟ್ಟು ರೋಹಿತ್ ಪದಕಿ ಈ ಚಿತ್ರ ಕೈಗೆತ್ತಿಕೊಂಡಿದ್ದಾರೆ. 'ಯುವ' ಬಳಿಕ ರಾಘಣ್ಣ ಕಿರಿಮಗ ನಟಿಸುತ್ತಿರುವ ಎರಡನೇ ಸಿನಿಮಾ ಇದು. ಚಿತ್ರದಲ್ಲಿ ಸಂಜನಾ ಆನಂದ್ ಹಾಗೂ ಸಂಪದಾ ನಾಯಕಿಯರಾಗಿ ನಟಿಸುತ್ತಿದ್ದಾರೆ. ಅತುಲ್ ಕುಲಕರ್ಣಿ ಕೂಡ ತಾರಾಗಣದಲ್ಲಿದ್ದು ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.

ಸದ್ಯ ಬಿಡದಿಯಲ್ಲಿ ಸಿನಿಮಾ ಚಿತ್ರೀಕರಣ ನಡೀತಿದೆ. ಇದೇ ಕಾರಣಕ್ಕೆ ಬೆಳಗ್ಗೆಯೇ ಬಂದು ಕಂಠೀರವ ಸ್ಟುಡಿಯೋದಲ್ಲಿ ಚಿಕ್ಕಪ್ಪನ ಸಮಾಧಿಗೆ ಯುವರಾಜ್‌ಕುಮಾರ್ ಪೂಜೆ ಸಲ್ಲಿಸಿ ಚಿತ್ರೀಕರಣಕ್ಕೆ ಹೊರಟಿದ್ದಾರೆ. ಜೂನ್ 6ಕ್ಕೆ ಸಿನಿಮಾ ಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ. ಅದಕ್ಕೆ ತಕ್ಕಂತೆ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್, ಪ್ರಮೋಷನ್, ರಿಲೀಸ್ ಪ್ಲ್ಯಾನ್ ನಡೀತಿದೆ.
ಕೆಆರ್‌ಜಿ ಸ್ಟುಡಿಯೋಸ್, ಪಿಆರ್‌ಕೆ ಪ್ರೊಡಕ್ಷನ್ಸ್ ಹಾಗೂ ಜಯಣ್ಣ ಫಿಲ್ಮ್ಸ್ ಜಂಟಿಯಾಗಿ 'ಎಕ್ಕ'
ಸಿನಿಮಾ ನಿರ್ಮಾಣ ಮಾಡುತ್ತಿವೆ. ಬಹಳ ಅದ್ಧೂರಿಯಾಗಿ ಸಿನಿಮಾ ಮೂಡಿ ಬರ್ತಿದೆ. ಸದ್ಯ 'ಎಕ್ಕ ಮಾರ್' ಸಾಂಗ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಯಾವಾಗ ಸಿನಿಮಾ ನೋಡ್ತೀವೋ ಎಂದು ಕಾಯುತ್ತಿದ್ದಾರೆ. ಮೊದಲ ಚಿತ್ರದಲ್ಲೇ ಯುವ ತನ್ನ ಡ್ಯಾನ್ಸ್, ಸ್ಟಂಟ್ಸ್ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದರು. ಈ ಬಾರಿ ಅದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಪ್ರಯತ್ನ ನಡೀತಿದೆ.
ಮಧ್ಯಾಹ್ನ 12.34ಕ್ಕೆ ಸಾಂಗ್ ರಿಲೀಸ್ ಮಾಡೋದಾಗಿ ಘೋಷಿಸಿದ್ದರು. ಆದರೆ ತಾಂತ್ರಿಕ ಕಾರಣಗಳಿಂದ ಕೊಂಚ ತಡವಾಗಿತ್ತು. ಲೇಟ್ ಆದರೂ ಸಾಂಗ್ ಸೂಪರ್ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಒಂದೇ ಮಾತಲ್ಲಿ ಹೇಳಬೇಕು ಅಂದರೆ ಅಭಿಮಾನಿಗಳಿಗೆ ಸಾಂಗ್ ಇಷ್ಟವಾಗಿದೆ.


Click it and Unblock the Notifications











