ದೊಡ್ಮನೆ ಅಭಿಮಾನಿಗಳಿಗೆ 'ಎಕ್ಕ' ಟೀಂ ಬೊಂಬಾಟ್ ನ್ಯೂಸ್; 'ಎಕ್ಕ' ಮಾರ್ ಮಾರ್...

ಯುವರಾಜ್‌ಕುಮಾರ್ ನಟನೆಯ 2ನೇ ಸಿನಿಮಾ 'ಎಕ್ಕ' ಮೇಕಿಂಗ್ ಹಂತದಲ್ಲೇ ಭಾರೀ ಸೌಂಡ್ ಮಾಡ್ತಿದೆ. ರೋಹಿತ್ ಪದಕಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಯುವ ಜೊತೆ ಸಂಜನಾ ಆನಂದ್ ಹಾಗೂ ಸಂಪದಾ ನಾಯಕಿಯರಾಗಿ ನಟಿಸುತ್ತಿದ್ದಾರೆ. ಬೆಂಗಳೂರು, ಮೈಸೂರಿನಲ್ಲಿ ಸಿನಿಮಾ ಚಿತ್ರೀಕಣ ಭರದಿಂದ ಸಾಗಿದೆ.

ಜೂನ್ 6ರಂದು 'ಎಕ್ಕ' ಸಿನಿಮಾ ಬಿಡುಗಡೆ ಆಗಲಿದೆ. ಮುಹೂರ್ತದ ದಿನವೇ ರಿಲೀಸ್ ಡೇಟ್ ಘೋಷಣೆ ಆಗಿತ್ತು. ಹಾಗಾಗಿ ಅದಕ್ಕೆ ತಕ್ಕಂತೆ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ಸ್, ಪ್ರಮೋಷನ್ ಹಾಗೂ ರಿಲೀಸ್ ಪ್ಲ್ಯಾನ್ ನಡೀತಿದೆ. ಪಿಆರ್‌ಕೆ ಪ್ರೊಡಕ್ಷನ್ಸ್, ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಜಯಣ್ಣ ಫಿಲ್ಮ್ಸ್ ಒಟ್ಟಾಗಿ 'ಎಕ್ಕ' ಚಿತ್ರ ನಿರ್ಮಾಣ ಮಾಡುತ್ತಿವೆ. ಬಹಳ ಅದ್ಧೂರಿಯಾಗಿಯೇ ಈ ಆಕ್ಷನ್ ಥ್ರಿಲ್ಲರ್ ಪ್ರೇಕ್ಷಕರ ಮುಂದೆ ಬರಲಿದೆ.

Yuvarajkumar starrer Ekka film first single Ekka Maar releasing on 17th March

ಅತುಲ್ ಕುಲಕರ್ಣಿ, ಡೆಡ್ಲಿ ಆದಿತ್ಯಾ ಸೇರಿದಂತೆ ದೊಡ್ಡ ತಾರಗಣ ಚಿತ್ರದಲ್ಲಿ. 'ಎಕ್ಕ' ಔಟ್ ಅಂಡ್ ಔಟ್ ರಾ ಆಕ್ಷನ್ ಥ್ರಿಲ್ಲರ್ ಸಿನಿಮಾ. ಫಸ್ಟ್ ಲುಕ್ ಪೋಸ್ಟರ್‌ನಲ್ಲೇ ಈ ಬಗ್ಗೆ ಸುಳಿವು ಸಿಕ್ಕಿತ್ತು. ಶಿವಾಜಿ ನಗರದ ಸುತ್ತಾಮುತ್ತಾ ಫೋಟೊಶೂಟ್ ನಡೆಸಿ ಸಿನಿಮಾ ಚಿತ್ರೀಕರಣಕ್ಕೆ ಚಾಲನೆ ಕೊಡಲಾಗಿತ್ತು. ರಾಜ್ಯೋತ್ಸವ ಹಾಗೂ ದೀಪವಾಳಿ ಸಂಭ್ರಮದಲ್ಲಿ ಸಿನಿಮಾ ಘೋಷಣೆ ಆಗಿತ್ತು. ಇದೀಗ 50% ರಷ್ಟು ಚಿತ್ರೀಕರಣ ಮುಕ್ತಾಯವಾಗಿದೆ.

ರಮ್ಯಾ ಆಡಿಷನ್ ಕೊಟ್ಟರೂ 'ಅಪ್ಪು' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಲಿಲ್ಲ ಯಾಕೆ?

'ಎಕ್ಕ' ಚಿತ್ರಕ್ಕೆ ಚರಣ್ ರಾಜ್ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ಚಿತ್ರದ ಟೈಟಲ್ ಸಾಂಗ್‌ನ ಸಣ್ಣ ಝಲಕ್ 'ಎಕ್ಕ ಮಾರ್ ಮಾರ್' ಭಾರೀ ಸದ್ದು ಮಾಡ್ತಿದೆ. ಇದೀಗ ಕಂಪ್ಲೀಟ್ ಸಾಂಗ್ ರಿಲೀಸ್‌ ಆಗಲು ಮುಹೂರ್ತ ಫಿಕ್ಸ್ ಆಗಿದೆ. ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಮಾರ್ಚ್ 17ಕ್ಕೆ ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಅದರ ಸಣ್ಣ ಮೇಕಿಂಗ್ ಝಲಕರ್ ರಿವೀಲ್ ಆಗಿದೆ.

'ಜಾಕಿ' ಚಿತ್ರದಲ್ಲಿ 'ಎಕ್ಕ ರಾಜ ರಾಣಿ' ಸಾಂಗ್ ಹಿಟ್ ಆಗಿತ್ತು. ಅದರಿಂದ ಪ್ರೇರಣೆಗೊಂಡು ಇದೀಗ ಯುವರಾಜ್‌ಕುಮಾರ್ ಚಿತ್ರಕ್ಕೆ 'ಎಕ್ಕ' ಎಂದು ಟೈಟಲ್ ಫಿಕ್ಸ್ ಮಾಡಿದ್ದಾರೆ. 'ರತ್ನನ್ ಪ್ರಪಂಚ' ರೀತಿಯ ವಿಬೀನ್ನ ಕಥೆ ಹೇಳಿ ಗೆದ್ದಿದ್ದ ರೋಹಿತ್ ಈ ಬಾರಿ ಯಾವ ರೀತಿಯ ಸಿನಿಮಾ ಕಟ್ಟಿಕೊಡುತ್ತಾರೆ ಎನ್ನುವ ಕುತೂಹಲ ಮೂಡಿದೆ. ಚರಣ್ ರಾಜ್ ಮ್ಯೂಸಿಕ್ ಆಗಿರುವುದರಿಂದ ಆಲ್ಬಮ್ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.

'ರತ್ನನ್ ಪ್ರಪಂಚ' ಬಳಿಕ ರೋಹಿತ್ ಪದಕಿ 'ಉತ್ತರಕಾಂಡ' ಚಿತ್ರ ಕೈಗೆತ್ತಿಕೊಂಡಿದ್ದರು. ಧನಂಜಯ್ ಹೀರೊ ಆಗಿ ನಟಿಸುತ್ತಿರುವ ಚಿತ್ರದಲ್ಲಿ ಶಿವರಾಜ್‌ಕುಮಾರ್ ಸೇರಿದಂತೆ ಘಟಾನುಘಟಿ ಕಲಾವಿದರು ಬಣ್ಣ ಹಚ್ಚಿದ್ದಾರೆ. ಆದರೆ ಕಾರಣಾಂತರಗಳಿಂದ ಆ ಸಿನಿಮಾ ಪಕ್ಕಕ್ಕಿಟ್ಟು 'ಎಕ್ಕ' ಚಿತ್ರ ಕೈಗೆತ್ತಿಕೊಂಡಿದ್ದಾರೆ. ಆ ಚಿತ್ರವನ್ನು ಕೂಡ ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ.

ಶಿವರಾಜ್‌ಕುಮಾರ್ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸ್ತಿದ್ದಾರೆ. ಅವರು ಅನಾರೋಗ್ಯದಿಂದ ವಿಶ್ರಾಂತಿ ಪಡೆಯುವಂತಾಯಿತು. ಹಾಗಾಗಿ 'ಉತ್ತರಕಾಂಡ' ಚಿತ್ರ ನಿಲ್ಲಿಸಿ 'ಎಕ್ಕ' ಸಿನಿಮಾ ಆರಂಭಿಸಿದ್ದಾರೆ ಎನ್ನಲಾಗ್ತಿದೆ. ಶೀಘ್ರದಲ್ಲೇ ಆ ಸಿನಿಮಾ ಪುನರಾರಂಭವಾಗಲಿದೆ. ಅಂದಹಾಗೆ ಆನಂದ್ ಆಡಿಯೋ ಸಂಸ್ಥೆ 'ಎಕ್ಕ' ಚಿತ್ರದ ಆಡಿಯೋ ರೈಟ್ಸ್ ಕೊಂಡುಕೊಂಡಿದೆ.

ಈ ವರ್ಷ ಪುನೀತ್ ರಾಜ್‌ಕುಮಾರ್ 50ನೇ ಹುಟ್ಟುಹಬ್ಬ. ಈ ಸಂಭ್ರಮದಲ್ಲಿ 'ಅಪ್ಪು' ಸಿನಿಮಾ ಹೊಸ ರೂಪದಲ್ಲಿ ಬಿಡುಗಡೆ ಆಗುತ್ತಿದೆ. ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ. ಮಾರ್ಚ್ 14ರಂದು ಶುಕ್ರವಾರವೇ ಸಿನಿಮಾ ತೆರೆಗೆ ಬರಲಿದೆ. ಅಂದಿನಿಂದಲೇ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ ಸಂಭ್ರಮಾಚರಣೆ ಶುರುವಾಗಲಿದೆ. ಸೋಮವಾರ(ಮಾರ್ಚ್ 17) 'ಎಕ್ಕ' ಫಸ್ಟ್ ಸಾಂಗ್ ಗಿಫ್ಟ್ ಆಗಿ ಸಿಗಲಿದೆ. ದೊಡ್ಮನೆ ಅಭಿಮಾನಿಗಳಂತೂ ಈ ಚಿತ್ರಕ್ಕಾಗಿ ಕಾತರದಿಂದ ಕಾಯುವಂತಾಗಿದೆ.

More from Filmibeat

English summary
First song from Yuvarajkumar's Ekka to be out on Puneeth rajkumar's birthday;
Read more about: puneeth rajkumar ekka
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X