ಭರವಸೆ ಮೂಡಿಸಿದ 'ಬನಾಸರ್' ಹಾಡು!

'ಬೆಲ್‌ ಬಾಟಂ' ಸಿನಿಮಾ ಬಳಿಕ ನಿರ್ದೇಶಕ ಜಯತೀರ್ಥ ಕೈಗೆತ್ತಿಕೊಂಡಿರುವ ಸಿನಿಮಾ 'ಬನಾಸರ್'. ಈ ಸಿನಿಮಾದ ಮೂಲಕ ಶಾಸಕ ಜಮೀರ್ ಅಹಮದ್ ಪುತ್ರ ನಾಯಕನಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಸೋನಲ್ ಮೊಂಟೇರಿಯೊ ನಾಯಕಿ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಚಿತ್ರದ ಪೋಸ್ಟರ್‌ಗಳು ವಿಭಿನ್ನವಾಗಿ ಗಮನ ಸೆಳೆದಿವೆ. 'ಬನಾಸರ್' ಮೂಲಕ ನಿರ್ದೇಶಕ ಜಯತೀರ್ಥ ತಮ್ಮ ಮಗದೊಂದು ಲವ್ ಸ್ಟೋರಿಯನ್ನು ಹೇಳಲು ಸಜ್ಜಾಗಿದ್ದಾರೆ. ಇನ್ನು ಈ ಚಿತ್ರದ ಮೊದಲ ಪೋಸ್ಟರ್‌ ಅನ್ನು ನಟ ಪುನೀತ್ ರಾಜ್‌ಕುಮಾರ್ ಕೈಯಲ್ಲಿ ಬಿಡುಗಡೆಗೊಳಿಸಬೇಕು ಎನ್ನುವ ಇವರ ಆಸೆ ಈಡೇರಿಲ್ಲ.

ಹಾಗಾಗಿ ಕೆಲವು ದಿನಗಳ ಹಿಂದೆ ಪುನೀತ್ ರಾಜ್‌ಕುಮಾರ್ ಸಮಾಧಿಯ ಬಳಿ ಪೋಸ್ಟರ್ ಲಾಂಚ್ ಮಾಡಲಾಗಿತ್ತು. ಇದೀಗ ಚಿತ್ರದ ಮೊದಲ ಹಾಡು ರಿಲೀಸ್ ಆಗಿದೆ. ಈಗ ವಿಡಿಯೋ ಹಾಡು ಹೊರ ಬಂದಿದ್ದು, ಚಿತ್ರದಲ್ಲಿನ ಪ್ರೇಮ್ ಕಹಾನಿಯನ್ನು ಹೇಳುತ್ತಿದೆ.

'ಮಾಯಗಂಗೆ'ಯಲ್ಲಿ ಮಿಂದ 'ಬನಾರಸ್'!

'ಮಾಯಗಂಗೆ'ಯಲ್ಲಿ ಮಿಂದ 'ಬನಾರಸ್'!

'ಬನಾಸರ್' ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ಇದೊಂದು ಪಕ್ಕಾ ಲವ್ ಸ್ಟೋರಿ ಎನ್ನುವುದನ್ನು ಈ ಹಾಡಿನ ಮೂಲಕ ಹೇಳಲಾಗಿದೆ. ಹಾಡಿನ ಆರಂಭದಲ್ಲಿ ನಟಿ ಸೋನಲ್, ನಾಯಕನ ಕೆನ್ನೆಗೆ ಮುತ್ತಿಟ್ಟು, ಪ್ರೀತಿ ಹೇಳಿ ಹೋಗುತ್ತಾಳೆ. ಅಲ್ಲಿಂದ ನಾಯಕನ ಪ್ರೇಮ ಜರ್ನಿಯನ್ನು ಇಲ್ಲಿ ತೋರಿಸಲಾಗಿದೆ. 'ಮಾಯಗಂಗೆ' ಎನ್ನುವ ಸಾಲಿನಿಂದ ಹಾಡು ಶುರುವಾಗುತ್ತದೆ. ಈ ಹಾಡನ್ನು ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ಅಜನೀಶ್ ಲೋಕ್‌ನಾಥ್ ಸಂಗೀತ ನೀಡಿದ್ದಾರೆ.

ವಾರಾಣಾಸಿಯಲ್ಲಿ ಹಾಡಿನ ಚಿತ್ರೀಕರಣ!

ವಾರಾಣಾಸಿಯಲ್ಲಿ ಹಾಡಿನ ಚಿತ್ರೀಕರಣ!

'ಬನಾಸರ್' ಸಿನಿಮಾದ ಶೂಟಿಂಗ್ ವಾರಾಣಾಸಿಯಲ್ಲಿ ಮಾಡಲಾಗಿದೆ. ಸದ್ಯ ಮೊದಲ ಲವ್ ಸಾಂಗ್ ರಿಲೀಸ್ ಆಗಿದ್ದು. ಸಾಕಷ್ಟು ಮೆಚ್ಚುಗೆ ಗಳಿಸಿಕೊಂಡಿದೆ. ಇನ್ನು ಇದು ಝೈದ್ ಖಾನ್‌ಗೆ ಮೊದಲ ಸಿನಿಮಾ ಆದರೆ, ನಟಿ ಸೋನಲ್ ಈಗಾಗಲೇ ಹಲವು ಸಿನಿಮಾಗಳ ಮೂಲಕ ತಮ್ಮ ಛಾಪು ಮೂಡಿಸಿದ್ದಾರೆ. ಈ ಚಿತ್ರದಲ್ಲಿ ಈಗ ಜೋಡಿ ಹೇಗಿರಲಿದೆ ಎನ್ನುವುದರ ಸುಳಿವು ಈ ಹಾಡು ಬಿಟ್ಟುಕೊಟ್ಟಿದೆ.

ಅದ್ಧೂರಿಯಾಗಿ ನಡೆದ ಆಡಿಯೋ ಲಾಂಚ್!

ಅದ್ಧೂರಿಯಾಗಿ ನಡೆದ ಆಡಿಯೋ ಲಾಂಚ್!

ಇನ್ನು ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಅಭಿಶೇಕ್ ಅಂಬರೀಶ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಇನ್ನು ಈ ಹಾಡನ್ನು ಬರೆದ ನಾಗೇಂದ್ರ ಪ್ರಸಾದ್ ಮಾತನಾಡಿ, ಇದು ವೈರಾಗ್ಯದಲ್ಲೂ ಪ್ರೀತಿ ಹುಟ್ಟಿಸುವ ಸಿನಿಮಾ ಎಂದಿದ್ದಾರೆ. ಒಟ್ಟಾರೆ ಮೊದಲ ಹಾಡಿನ ಮೂಲಕ ಗಮನ ಸೆಳೆದಿದೆ 'ಬನಾರಸ್'.

'ಬನಾರಸ್‌' ನೋಡಲು ಬಯಸಿದ್ದ ಅಪ್ಪು!

'ಬನಾರಸ್‌' ನೋಡಲು ಬಯಸಿದ್ದ ಅಪ್ಪು!

ಇನ್ನು ಈ ಚಿತ್ರಕ್ಕೂ ಪುನೀತ್ ರಾಜ್‌ಕುಮಾರ್‌ಗೂ ಕನೆಕ್ಷನ್ ಇದೆ. ಯಾಕೆಂದರೆ ಈ ಚಿತ್ರದ ಪೋಸ್ಟರ್ ಅಪ್ಪು ರಿಲೀಸ್ ಮಾಡಬೇಕಿತ್ತು. ಅಲ್ಲದೆ ಅಪ್ಪು ಚಿತ್ರತಂಡಕ್ಕೆ ಭರವಸೆಯಾಗಿದ್ದರಂತೆ. ಈ ಸಿನಿಮಾ ರಿಲೀಸ್ ಬಳಿಕ ನೋಡುತ್ತೇನೆ ಎಂದು ಪುನೀತ್ ರಾಜ್‌ಕುಮಾರ್ ಹೇಳಿಕೊಂಡಿದ್ದರು ಎನ್ನುವುದನ್ನು ಈ ಹಿಂದೆ ಜಯತೀರ್ಥ ಹೇಳಿಕೊಂಡಿದ್ದಾರೆ.

More from Filmibeat

English summary
Zameer's son Zaid Khan khan, Sonal Monteiro Starrer Banaras movie Love Song Launch, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X