ಸರಿಗಮಪ ಲಿಟಲ್ ಚಾಂಪ್ಸ್: ಚಾಂಪಿಯನ್ಸ್ ಜೊತೆಗೆ ಹಾಡಿದ ಮಕ್ಕಳು
ಈ ಬಾರಿಯ ಸಂಚಿಕೆಯಲ್ಲಿ ಬಹಳ ವಿಶೇಷತೆ ಕೂಡಿತ್ತು ಸಣ್ಣ ಮಕ್ಕಳು ಚಾಂಪಿಯನ್ಸ್ ಜೊತೆಗೆ ಹಾಡಿದರು. ನಿಮಗಿಂತ ನಾವೇನು ಕಮ್ಮಿ ಇಲ್ಲ ಎಂಬುದನ್ನು ಹಾಡಿನ ಮೂಲಕ ಚಾಂಪಿಯನ್ಸ್‌ಗೆ ತಿಳಿಸಿದರು. ಹೊಸ ಹಾಗೂ ಹಳೆಯ ಹಾಡು ಹಾಡಿ ಎಲ್ಲರನ್ನೂ ಖುಷಿಪಡಿಸಿದರು.
ಸಿಂಗ್ ವಿಥ್ ಚಾಂಪಿಯನ್ಸ್‌ನಲ್ಲಿ ಮೊದಲಿಗೆ ಸರಿಗಮಪ ಸೀಸನ್ 10ರ ಚಾಂಪಿಯನ್ ಅಂಕಿತಾ ಕುಂಡು ಸೃಷ್ಟಿ ಸುರೇಶ್ ಜೊತೆಗೆ ಅಮೃತ ವರ್ಷಿಣಿ ಚಲನಚಿತ್ರದ ಎವರ್ ಹಿಟ್ ಸಾಂಗ್ ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲ್ಲಿ ಹಾಡು ಹಾಡುವ ಮೂಲಕ ಶುಭಾರಂಭವನ್ನು ಮಾಡಿ ಗೋಲ್ಡನ್ ಬಜಾರ್ ಪಡೆದುಕೊಂಡರು.
ಸುಪ್ರೀತ್ ಮತ್ತು ಶಿವಾನಿ ಹಾಡಿದ ಶಂಕರ್ ನಾಗ್ ಅಭಿನಯದ ಗೀತಾ ಸಿನಿಮಾದ ಎವರ್ ಗ್ರೀನ್ ಹಾಡು ಸಂತೋಷಕ್ಕೆ ಹಾಡು ಸಂತೋಷಕ್ಕೆ ಕುಣಿದು ತಾಳಕ್ಕೆ ಕುಣಿದು ಎಂದು ಹಾಡಿದಾಗ ಗ್ಯಾಲರಿಯಲ್ಲಿ ಕುಳಿತಿದ್ದ ಪ್ರೇಕ್ಷಕರು ಹುಚ್ಚೆಂದು ಕುಣಿದು ಕುಪ್ಪಳಿಸಿದರು. ಈ ಹಾಡು ಮುಗಿದ ಕೂಡಲೇ ಹಂಸಲೇಖಾ ಮಹಾಗುರುಗಳು ಗೋಲ್ಡನ್ ಬಜಾರ್ ನೀಡಿದರು. ನಂತರ ಶಿವಾನಿಗೆ ಲೇಡಿ ಮೈಕಲ್ ಜಾಕ್ಸನ್ ಎಂಬ ಬಿರುದನ್ನು ನೀಡಿದರು.
ಆಶಾ ಭಟ್ ಹಾಗೂ ಕುಷಿಕ್ ಇಬ್ಬರು ಸೇರಿಕೊಂಡು ದರ್ಶನ್ ಅಭಿನಯದ ಚಕ್ರವರ್ತಿ ಸಿನಿಮಾದ ಪ್ರೇಮ ತುಂಬಿದ ಮಧುರವಾದ ಪ್ರೇಮಿಗಳ ನೆಚ್ಚಿನ ಹಾಡಾದ ಒಂದು ಮಳೆ ಬಿಲ್ಲು, ಒಂದು ಮಳೆ ಮೋಡ ಹೇಗೋ ಸೊಗಸಾಗಿ ಎಂದು ಸೊಗಸಾಗಿ ಹಾಡಿ ಎಲ್ಲರ ಮನಸನ್ನು ಕದ್ದರು. ಇವರಿಗೂ ಸಹ ಗೋಲ್ಡನ್ ಬಜರ್ ಸಿಕ್ಕಿತ್ತು.
ಹನುಮಂತ ಹಾಗೂ ಪಂಕಜ್ ಜೋಡಿ ವೇದಿಕೆಯಲ್ಲಿದ್ದವರನ್ನು ಮೋಡಿ ಮಾಡಿತು. ಪ್ರೇಮ್ ನಿರ್ದೇಶನದ ರಕ್ಷಿತಾ ಫಿಲ್ಮ್ ಬ್ಯಾನರ್ ಅಡಿಯಲ್ಲಿ ರಾಣಾ ನಾಯಕನಾಗಿ ಕಾಣಿಸಿಕೊಂಡ 'ಏಕ್ ಲವ್ ಯಾ'ದ ಒಂದು ಊರಲ್ಲಿ ಇದ್ದಳು ಒಬ್ಬಳು ಮುದ್ದು ದೇವತೆ ಅನಿತಾ ಓ ಅನಿತಾ ಹಾಡು ಜಡ್ಜ್‌ಸ್ ಸಹ ವೇದಿಕೆ ಮೇಲೆ ಬರುವಂತೆ ಮಾಡಿತು.
ಪ್ರೇಮಾಲೋಕವನ್ನೇ ಧರೆಗಿಳಿಸಿದರು. ರವಿಚಂದ್ರನ್ ನಟನೆಯ ಪ್ರೇಮಲೋಕ ಚಿತ್ರದ ಪ್ರೇಮ ಲೋಕದಿಂದ ಬಂದ ಪ್ರೇಮದ ಸಂದೇಶ ಹಾಡು ಹಾಡಿ ಎಲ್ಲರನ್ನೂ ರಂಜಿಸಿದರು.

ರೇವಣಸಿದ್ದ ಪುಂಡಲೀಕ ಪುಲಾರಿಗೆ ಸಾಥ್
ಜ್ಞಾನೇಶ್ ಹಾಗೂ ಮೆಹಬೂಬ್ ಸಾಬ್ ಇಬ್ಬರು ಸೇರಿಕೊಂಡು ರೇವಣಸಿದ್ದ ಪುಂಡಲೀಕ ಪುಲಾರಿ ಅವರಿಗೆ ಸಾಥ್ ನೀಡಿದರು. ಜ್ಞಾನವೇದ ಬಲುಕಠಿಣವೇ ಸಾಂಗ್ ಹಾಡುವ ಮೂಲಕ ಮೆಂಟರ್ಸ್ ಹಾಗೂ ಜ್ಯೂರಿ ಮೆಂಬರ್ಸ್ ಚಪ್ಪಾಳೆ ಗಿಟ್ಟಿಸಿಕೊಂಡರು. ಜಡ್ಜ್‌ಸ್ ಉತ್ತಮವಾದ ಕಾಮೆಂಟ್ ನೀಡಿದರು. ಈ ಹಾಡು ಹಾಡುವುದು ಬಹಳ ಕಷ್ಟ ನೀವು ಮೂವರು ಬಹಳ ಸೊಗಸಾಗಿ ಹಾಡಿದ್ದೀರಿ ಎಂದು ಗೋಲ್ಡನ್ ಬಜಾರ್ ನೀಡಿದರು.

ಪೃಥ್ವಿ ಭಟ್ ಮತ್ತು ತನು ಶ್ರೀ ಗಾಯನ
ಸಾಕ್ಷಿ ಕಲ್ಲೂರು ಹಾಗೂ ಸಿರಿಸಿಂಚನ ಚಿಪ್ಪಿನೊಳಗೆ ಮುತ್ತು ಮಲಗಿದೆ ಹಾಡನ್ನು ಹಾಡಿ ಗೋಲ್ಡನ್ ಬಜಾರ್ ಪಡೆದರು. ಪೃಥ್ವಿ ಭಟ್ ಮತ್ತು ತನು ಶ್ರೀ ಎಲ್ಲ ನಿನ್ನ ಲೀಲೆ ತಾಯೇ ಎಲ್ಲಾ ನಿನ್ನ ಮಾಯೆ ಎಂದು ಹಾಡಿದರು.
ಕಂಬದ ರಂಗಯ್ಯ, ನಯನ ವಸಂತಾಚಾರ್ ಮೇರಿ ಮೇರಿ ಡಿಸ್ಕೋ ಡ್ಯಾನ್ಸ್ ವಿಥ್ ಮೀ ಎಂದು ಹಾಡಿದರು.
ಈ ಹಾಡಿಗೆ ನಂದಿತಾ ಜೊತೆಗೆ ಎಲ್ಲಾ ಮೆಂಟರ್ಸ್ ಹೆಜ್ಜೆ ಹಾಕಿದರು.ದಿಯಾ ಹೆಗ್ಡೆ ಮತ್ತು ವಿಷ್ಣು ವಸಿಷ್ಠ ಸೇರಿ ಸಾಮ್ರಾಟ್ ಚಿತ್ರದ ಹಾಡೋದಂಗೆ ಕುಣಿಯೋದು ಹೆಂಗೆ ಹಾಡಿಗೆ ಹಾಡಿದರು.

ಅನುಶ್ರೀ ಹುಟ್ಟುಹಬ್ಬ ಆಚರಣೆ
ಅನುಶ್ರೀಗೆ ಕವಿತೆ ಮೂಲಕ ದಿಯಾಹೆಗ್ಡೆ ವಿಶ್ ಮಾಡಿದರು. ಚಾಂಪಿಯನ್ಸ್ ಹಾಗೂ ಲಿಟಲ್ ಚಾಂಪ್ಸ್ ಮೆಂಟರ್ಸ್ , ಜ್ಯೂರಿ ಮೆಂಬರ್ಸ್, ಜಡ್ಜ್‌ಸ್ ಶುಭಾರೈಸಿದರು. ಅನುಶ್ರೀ ಬರ್ಡ್‌ಡೇ ಆಚರಣೆ ಮಾಡಲಾಯಿತು. ಪ್ರಗತಿ ಬಡಿಗೇರ್ ಮತ್ತು ಸುನೀಲ್ ಹೂವಿನ ಸಂತೆಗೆ ಬಂದಿರೋ ಎಂದು ಹಾಡಿ ಗೋಲ್ಡನ್ ಬಜಾರ್ ಪಡೆದರು. ಗಗನ್ ಹಾಗೂ ಸಮೀಕ್ಷಾ ಸಾಲಿಗ್ರಾಮ, ಸುಮೇದ್ ಹೋನೆ ಹೋನೆ ಹೋನೆ ಹೋನೆ ಚಿನ್ನ ಸಾಂಗ್‌ಗೆ ಎಲ್ಲ ಚಪ್ಪಾಳೆ ತಟ್ಟಿದರು. ಗುರುಪ್ರಸಾದ್ ಮತ್ತು ಚನ್ನಪ್ಪ ಬಾನಿಗೊಂದು ಎಲ್ಲೆ ಎಲ್ಲಿದೆ ಹಾಡು ಹಾಡಿದರು.ಇದೇ ವೇಳೆ ಚನ್ನಪ್ಪ ಡಾ.ರಾಜಕುಮಾರ್ ಅವರ ಏಕಪಾತ್ರಭಿನಯ ಮಾಡಿದರು.

ಪ್ರವೀಣ, ಶರಧಿಪಾಟೀಲ್, ಅರ್ಚಿಷಾ ಮೂವರು ಸೇರಿ
ಆರಾಧಿಸುವೆ ಮದನಾರಿ ಸಾಂಗ್ ಹಾಡಿ ಗೋಲ್ಡನ್ ಬಜಾರ್ ಪಡೆದರು. ಯೋಗಶ್ರೀ, ಅಶ್ವಿನ್ ಶರ್ಮಾ
ನೀ ಬಂದು ನಿಂತಾಗ ನಿಂತು ನೀ ನಕ್ಕಾಗ ಹಾಡು ಹಾಡಿ ಎಲ್ಲರ ಮನಗೆದ್ದರು. ಸರಿಗಮಪ ಸೀಸನ್ 19 ಮಾತ್ರ ಎಲ್ಲ ಪ್ರೇಕ್ಷಕರನ್ನು ತನ್ನೆಡೆಗೆ ಸೆಳೆದುಕೊಳ್ಳುವ ಪ್ರಯತ್ನವನ್ನು ಮಾಡಿತು. ಅನುಶ್ರೀ ನಿರೂಪಣೆ ಸಹ ಜೊತೆಗೆ ಅರ್ಜುನ್ ಜನ್ಯ ಅವರು ಕಾಲೆಳೆಯುವ ರೀತಿ ಸಹ ಮೊದಲಿನಿಂದಲೂ ಪ್ರೇಕ್ಷಕರಿಗೆ ಇಷ್ಟವಾಗಿದೆ. ಲಿಟಲ್ ಚಾಂಪ್ಸ್ ತನ್ನದೇ ಆದಂತಹ ಒಂದು ಪ್ರಾಮುಖ್ಯತೆ ಉಳಿಸಿಕೊಂಡು ಬಂದಿದೆ.


Click it and Unblock the Notifications











