twitter
    For Quick Alerts
    ALLOW NOTIFICATIONS  
    For Daily Alerts

    'ಪಠಾಣ್' ಬಾಕ್ಸಾಫೀಸ್ ಕಲೆಕ್ಷನ್ ₹500 ಕೋಟಿ: ಈ ಒಂದು ದಿನ ಭಾರತದಾದ್ಯಂತ ಟಿಕೆಟ್ ದರ ಇಳಿಕೆ

    |

    ಬಾಲಿವುಡ್‌ ಕಿಂಗ್ ಖಾನ್ ಸೆಕೆಂಡ್ ಇನ್ನಿಂಗ್ಸ್ ಭರ್ಜರಿಯಾಗಿಯೇ ಆರಂಭ ಆಗಿದೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ಶಾರುಖ್ ಖಾನ್ ಸ್ವಲ್ಪ ಗ್ಯಾಪ್ ಕೊಟ್ಟು 'ಪಠಾಣ್' ಸಿನಿಮಾಗೆ ಕೈ ಹಾಕಿದ್ದರು. ನಾಲ್ಕು ವರ್ಷಗಳಿಂದ ಒಂದೇ ಒಂದು ಸಿನಿಮಾದಲ್ಲೂ ಕಾಣಿಸಿಕೊಳ್ಳದೆ ಸೈಲೆಂಟಾಗಿದ್ದರು.

    ಮತ್ತೆ ಬಣ್ಣ ಹಚ್ಚುವುದಕ್ಕೆ ನಿರ್ಧರಿಸಿದಾಗ ಶಾರುಖ್ ಖಾನ್ 'ಪಠಾಣ್' ಸಿನಿಮಾವನ್ನು ಆಯ್ಕೆ ಮಾಡಿದ್ದರು. ಆ ಸಿನಿಮಾವೀಗ ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸುತ್ತಿದೆ. ಒಂದೊಂದೇ ದಾಖಲೆಗಳನ್ನು ಸೈಡಿಗಟ್ಟುತ್ತಾ ಮುಂದೆ ಸಾಗುತ್ತಿದೆ.

    'ಬಾಹುಬಲಿ 2' ದಾಖಲೆಯನ್ನೂ ಹಿಂದಿಕ್ಕುತ್ತಾ 'ಪಠಾಣ್'? ₹1000 ಕೋಟಿ ಕ್ಲಬ್ ಸೇರಲು ಇನ್ನೆಷ್ಟು ಬೇಕು?'ಬಾಹುಬಲಿ 2' ದಾಖಲೆಯನ್ನೂ ಹಿಂದಿಕ್ಕುತ್ತಾ 'ಪಠಾಣ್'? ₹1000 ಕೋಟಿ ಕ್ಲಬ್ ಸೇರಲು ಇನ್ನೆಷ್ಟು ಬೇಕು?

    'ಪಠಾಣ್' ಸದ್ಯ ಬಾಲಿವುಡ್‌ನಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ. ಶಾರುಖ್ ಕಮ್‌ಬ್ಯಾಕ್ ಸಿನಿಮಾ ಈ ಮಟ್ಟಿಗೆ ಸದ್ದು ಮಾಡುತ್ತೆ ಅನ್ನೋದು ಯಾರೂ ಊಹಿಸಿರಲಿಲ್ಲ. ಆದ್ರೀಗ 'ಪಠಾಣ್' ಆ ಎಲ್ಲಾ ನಿರೀಕ್ಷೆಗಳನ್ನು ಮೀರಿ ಮುನ್ನುಗ್ಗುತ್ತಿದೆ. 'ಪಠಾಣ್' ದಾಖಲೆ ಸಕ್ಸಸ್ ಕಂಡಿರೋ ಖುಷಿಯಲ್ಲಿರೋ ನಿರ್ಮಾಣ ಸಂಸ್ಥೆ YRF ಒಂದು ದಿನ 'ಪಠಾಣ್ ಡೇ' ಅಂತಲೇ ಸೆಲೆಬ್ರೆಟ್ ಮಾಡಲು ಮುಂದಾಗಿದೆ.

    ಈ ಒಂದು ದಿನ 'ಪಠಾಣ್ ಡೇ'

    ಈ ಒಂದು ದಿನ 'ಪಠಾಣ್ ಡೇ'

    'ಪಠಾಣ್' ಅತೀ ಹೆಚ್ಚು ಗಳಿಕೆ ಕಂಡ ಬಾಲಿವುಡ್‌ ಸಿನಿಮಾ ಎನಿಸಿಕೊಂಡಿದೆ. ಹೀಗಾಗಿ ನಿರ್ಮಾಣ ಸಂಸ್ಥೆ ವೈಆರ್‌ಎಫ್ 'ಪಠಾಣ್ ಡೇ'ಯನ್ನಾಗಿ ಆಚರಣೆ ಮಾಡಲು ನಿರ್ಧರಿಸಿದೆ. ಭಾರತದ ಪ್ರಮುಖ ಮಲ್ಟಿಪ್ಲೆಕ್ಸ್ ಥಿಯೇಟರ್‌ ಚೈನ್‌ಗಳು ಕೈ ಜೋಡಿಸಿವೆ. ಇದೇ ಶುಕ್ರವಾರ, ಪಿವಿಆರ್, ಐನಾಕ್ಸ್,ಸಿನಿಪೊಲಿಸ್, ಮಿರಜ್, ಮೂವಿ ಟೈಮ್,ಟ ಮುಕ್ತ ಎ2 ಅಂತಹ ಸಿನಿಮಾಗಳು ಒಂದು ದಿನ ವಿಶೇಷ ದರದಲ್ಲಿ ಟಿಕೆಟ್ ನೀಡಲು ನಿರ್ಧರಿಸಿದೆ.

    'ಪಠಾಣ್' ಟಿಕೆಟ್ ಬೆಲೆ ಎಷ್ಟು?

    'ಪಠಾಣ್' ಟಿಕೆಟ್ ಬೆಲೆ ಎಷ್ಟು?

    ನಾಳೆ (ಫೆಬ್ರವರಿ 17) ಶಾರುಖ್ ಖಾನ್ ಅಭಿನಯದ 'ಪಠಾಣ್' ಸಿನಿಮಾದ ಟಿಕೆಟ್ ಬೆಲೆ ಇಳಿಕೆಯಾಗಲಿದೆ. ಮಲ್ಟಿಪ್ಲೆಕ್ಸ್ ಥಿಯೇಟರ್‌ ಚೈನ್‌ನಲ್ಲಿ ಸಿನಿಮಾದ ಟಿಕೆಟ್ ನಾಳೆ ಒಂದು ದಿನ ಫ್ಲ್ಯಾಟ್ 110 ರೂಪಾಯಿಗೆ ಮೀಸಲಿರಿಸಿದೆ. ಈ ಮೂಲಕ ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನು ಕರೆದುಕೊಂಡು ಬರುವುದಕ್ಕೆ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಈ ಮೂಲಕ ವೀಕೆಂಡ್ ಕಲೆಕ್ಷನ್‌ಗೂ ಸಹಾಯ ಆಗಲಿದೆ.

    'ಪಠಾಣ್' ₹500 ಕೋಟಿ ಕಲೆಕ್ಷನ್?

    'ಪಠಾಣ್' ₹500 ಕೋಟಿ ಕಲೆಕ್ಷನ್?

    ಕಿಂಗ್ ಖಾನ್ ಸಿನಿಮಾ 'ಪಠಾಣ್' ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ನಾಳೆ(ಫೆಬ್ರವರಿ 17) ₹500 ಕೋಟಿ ಕ್ಲಬ್ ಸೇರುತ್ತಿದೆ. ಈ ಖುಷಿಗಾಗಿ 'ಪಠಾಣ್ ಡೇ' ಅಂತ ಆಚರಣೆ ಮಾಡಲಿದ್ದು, ಟಿಕೆಟ್ ದರವನ್ನು ಇಳಿಕೆ ಮಾಡಲಾಗಿದೆ. ಇಲ್ಲಿವರೆಗೂ 'ಪಠಾಣ್' ಹಿಂದಿ ಕಲೆಕ್ಷನ್ ಸುಮಾರು ₹498.85 ಕೋಟಿ ಆಗಿದೆ ಎಂದು ಟ್ರೇಲ್ ಎಕ್ಸ್‌ಪರ್ಟ್ಸ್‌ ಲೆಕ್ಕ ಒಪ್ಪಿಸಿದ್ದಾರೆ. ಈ ಬೆನ್ನಲ್ಲೇ ಸಿನಿಮಾತಂಡ ಸೆಲೆಬ್ರೆಟ್ ಮಾಡುವುದಕ್ಕೆ ಮುಂದಾಗಿದೆ.

    'ಪಠಾಣ್' ವರ್ಲ್ಡ್‌ವೈಡ್ ಕಲೆಕ್ಷನ್ ಎಷ್ಟು?

    'ಪಠಾಣ್' ವರ್ಲ್ಡ್‌ವೈಡ್ ಕಲೆಕ್ಷನ್ ಎಷ್ಟು?

    'ಪಠಾಣ್' ಕೇವಲ ಭಾರತದಲ್ಲಷ್ಟೇ ಚಮತ್ಕಾರ ಮಾಡಿಲ್ಲ. ವಿಶ್ವದಾದ್ಯಂತ ರಿಲೀಸ್ ಆದ ಕಡೆಗಳಲ್ಲೆಲ್ಲಾ ಸಿನಿಮಾ ಕಲೆಕ್ಷನ್ ಭರ್ಜರಿಯಾಗಿಯೇ ಇದೆ. ಟ್ರೇಡ್‌ ಎಕ್ಸ್‌ಪರ್ಟ್‌ಗಳ ಪ್ರಕಾರ, ಭಾರತದಲ್ಲಿ ₹498.85 ಕೋಟಿ ಗಳಿಸಿದೆ. ಇದರಲ್ಲಿ ಹಿಂದಿ ವರ್ಷನ್‌ನಿಂದ ₹481.35, ಡಬ್ಬಿಂಗ್ ವರ್ಷನ್‌ನಿಂದ ₹17.50 ಕೋಟಿ, ವಿದೇಶದಿಂದ ₹363 ಕೋಟಿ ಕಲೆಕ್ಷನ್ ಆಗಿದೆ. ಈ ಮೂಲಕ ವಿಶ್ವದಾದ್ಯಂತ ಸುಮಾರು ₹963 ಕೋಟಿ ರೂ. ಕಲೆಕ್ಷನ್ ಮಾಡಿದೆ.

    English summary
    Pathaan Day In Indian Theatres All Tickets At Flat Rs.110 For Celebration, Know More.
    Thursday, February 16, 2023, 13:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X