twitter
    For Quick Alerts
    ALLOW NOTIFICATIONS  
    For Daily Alerts

    ಜೆಟ್‌ಲ್ಯಾಗ್ ಪಬ್‌ನಲ್ಲಿ 'ಕಾಟೇರ' ಸಕ್ಸಸ್ ಪಾರ್ಟಿ ಪ್ರಕರಣ: ದರ್ಶನ್, ಅಭಿಗೆ ನೋಟಿಸ್ ಜಾರಿ

    |

    ನಿಮಯ ಮೀರಿ ಬೆಳಗಿನ ಜಾವದವರೆಗೂ ಪಬ್‌ನಲ್ಲಿ ಪಾರ್ಟಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ನಟ ದರ್ಶನ್ ಸೇರಿದಂತೆ ನಾಲ್ವರು ಸೆಲೆಬ್ರೆಟಿಗಳಿಗೆ ನೋಟಿಸ್ ಜಾರಿಯಾಗಿದೆ. ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಜನವರಿ 3ರಂದು ಮಧ್ಯರಾತ್ರಿ ರಾರಾಜಿನಗರದ ಜೆಟ್‌ಲ್ಯಾಗ್ ಪಬ್‌ನಲ್ಲಿ ಪಾರ್ಟಿ ನಡೆದಿತ್ತು.

    ಸದ್ಯ ನಟ ದರ್ಶನ್ ಸೇರಿದಂತೆ 'ಕಾಟೇರ' ಚಿತ್ರತಂಡ ದುಬೈನಲ್ಲಿ ಬೀಡುಬಿಟ್ಟಿದೆ. ಈ ವಾರ ಸಿನಿಮಾ ಹೊರ ದೇಶಗಳಲ್ಲಿ ರಿಲೀಸ್ ಆಗಿದೆ. ದುಬೈನಲ್ಲಿ ನಡೆದ ಗೋಲ್ಡನ್ ಪ್ರೀಮಿಯರ್‌ನಲ್ಲಿ ಚಿತ್ರತಂಡ ಭಾಗಿ ಆಗಿತ್ತು. ಇನ್ನು ಕರ್ತವ್ಯಲೋಪದ ಹಿನ್ನೆಲೆಯಲ್ಲಿ 6 ಜನ ಪೊಲೀಸರಿಗೂ ನೋಟಿಸ್ ಜಾರಿಯಾಗಿದೆ. ಈಗಾಗಲೇ ದರ್ಶನ್, ಅಭಿಷೇಕ್ ಅಂಬರೀಶ್, ರಾಕ್‌ಲೈನ್‌ ವೆಂಕಟೇಶ್‌ಗೆ ನೋಟಿಸ್ ತಲುಪಿದೆ.

    police issued notice to Darshan, Abishek Ambareesh over kaatera success party Case

    ಡಿಸೆಂಬರ್ 29ರಂದು ಬಿಡುಗಡೆಯಾಗಿದ್ದ ಕಾಟೇರ' ಸಿನಿಮಾ ಎರಡನೇ ವಾರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕಳೆದ ಬುಧವಾರ ನಗರದ ಒರಾಯನ್ ಮಾಲ್‌ನಲ್ಲಿ ಕನ್ನಡ ಚಿತ್ರರಂಗದ ತಾರೆಯರಿಗೆ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು. ಉಪೇಂದ್ರ, ಧನಂಜಯ್, ನೀನಾಸಂ ಸತೀಶ್ ಸೇರಿದಂತೆ ಹಲವರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಬಳಿಕ 'ಕಾಟೇರ' ಚಿತ್ರತಂಡ ಒರಾಯನ್ ಮಾನ್ ಮುಂಭಾಗದ ಜೆಟ್‌ಲ್ಯಾಗ್ ಪಬ್‌ನಲ್ಲಿ ಪಾರ್ಟಿ ಮಾಡಿತ್ತು.

    ಮೊದಲಿಗೆ ಕೇಕ್‌ ಕತ್ತರಿಸಿ ಸಂಭ್ರಮಿಸಿತ್ತು. ಬಳಿಕ ಶುರುವಾದ ಪಾರ್ಟಿ ಬೆಳಗಿನ ಜಾವದವರೆಗೂ ಮುಂದುವೆರೆದಿತ್ತು. ಈ ಸಂಬಂಧ ಪಬ್ ಮಾಲೀಕರಾದ ಶಶಿರೇಖಾ ಹಾಗೂ ಮ್ಯಾನೇಜರ್ ಪ್ರಶಾಂತ್ ವಿರುದ್ದ ಎಫ್‌ಐಆರ್ ದಾಖಲಿಸಿಕೊಂಡು ಪೊಲೀಸರು ವಿಚಾರಣೆ ಆರಂಭಿಸಿದ್ದರು. ಸಿಸಿಟಿವಿ ಫುಟೇಜ್ ಪರಿಶೀಲಿಸಿ ಪಾರ್ಟಿಗೆ ಬಂದವರು ಹೋದವರ ಬಗ್ಗೆ ಮಾಹಿತಿ ಕಲೆಕ ಹಾಕಿದ್ದರು. ಬೆಳಗ್ಗೆ 3 ಗಂಟೆವರೆಗೂ ಪಾರ್ಟಿಯಲ್ಲಿ ಯಾರೆಲ್ಲಾ ಇದ್ದರು? ಪಾರ್ಟಿಯಲ್ಲಿ ಏನೆಲ್ಲಾ ನಡೀತು? ಅವಧಿ ಮೀರಿ ಪಾರ್ಟಿ ಮಾಡಲು ಬಿಟ್ಟಿದ್ದು ಯಾರು? ಪಾರ್ಟಿಗೆ ಆಯೋಜಿಸಿದ್ದು ಯಾರು? ಹೀಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಇನ್ನು ನಟರಾದ ಡಾಲಿ ಧನುಂಜಯ್, ಚಿಕ್ಕಣ್ಣ, ನೀನಾಸಂ ಸತೀಶ್, ಸಂಗೀತ ನಿರ್ದೇಶಕ ಹರಿಕೃಷ್ಣ, ನಿರ್ದೇಶಕ ತರುಣ್ ಸುಧೀರ್‌ಗೂ ನೋಟಿಸ್ ನೀಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ದರ್ಶನ್, ರಾಕ್‌ಲೈನ್ ವೆಂಕಟೇಶ್, ಅಭಿಷೇಕ್‌ಗೆ ನೋಟಿಸ್ ನೀಡಿದ್ದು ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

    ನೋಟಿಸ್ ತಲುಪಿದ ಕೂಡಲೇ ವಿಚಾರಣೆಗೆ ಹಾಜರಾಗುವಂತೆ ಸುಬ್ರಮಣ್ಯಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸುರೇಶ್ ಸೂಚಿಸಿದ್ದಾರೆ. ಸಾಕಷ್ಟು ಜನ ಈ ಪಾರ್ಟಿಯಲ್ಲಿ ಭಾಗಿ ಆಗಿದ್ದರು. ಆದರೆ ಅವಧಿ ಮೀರಿ ಪಾರ್ಟಿಯಲ್ಲಿ ಇದ್ದರಿಗೆ ಮಾತ್ರ ನೋಟಿಸ್ ನೀಡಲಾಗಿದೆ. ಉಳಿದವರು ಅವಧಿಗೂ ಮುನ್ನವೇ ಮನೆಗೆ ಹೋಗಿದ್ದಾರೆ ಎನ್ನಲಾಗ್ತಿದೆ. ಹೀಗಾಗಿ ಅಂತಹವರಿಗೆ ನೋಟಿಸ್ ನೀಡಿಲ್ಲ ಎನ್ನುವಂತೆ ಮಾಹಿತಿ ಲಭ್ಯವಾಗಿದೆ.

    police issued notice to Darshan, Abishek Ambareesh over kaatera success party Case

    ಅಬಕಾರಿ ಮತ್ತು ಪೊಲೀಸ್ ಕಾಯಿದೆ ಷರತ್ತು‌ ಉಲ್ಲಂಘನೆ ಆರೋಪದಡಿ ಪೊಲೀಸರು ದೂರು ದಾಖಲಾಗಿದೆ. ಬೆಳಗ್ಗೆ 3 ಗಂಟೆವರೆಗೂ ವಿದ್ಯುತ್ ದೀಪಗಳನ್ನು ಆರಿಸದೇ ಗಿರಾಕಿಗಳನ್ನು ಸೇರಿಸಿಕೊಂಡು ಮದ್ಯ ಸರಬರಾಜು ಮಾಡುತ್ತಾ ಕುಡಿದು ಪಾರ್ಟಿ ಮಾಡಲು ಅವಕಾಶ ನೀಡಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.

    English summary
    Darshan, Abishek Ambareesh get notices for kaatera success party case.
    Monday, January 8, 2024, 12:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X