ಲೇಟೆಸ್ಟ್ ನ್ಯೂಸ್ ರಜನಿ ಚಿತ್ರದಲ್ಲಿ ಪ್ರಕಾಶ್ ರೈಗೆ ಚಾನ್ಸ್
ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಮುಂದಿನ ಮಹತ್ವಾಕಾಂಕ್ಷಿ ಚಿತ್ರ 'ರಾಣಾ 'ಬಗ್ಗೆ ಕೇರ್‌ಫುಲ್ ಆಗಿ ರೂಪರೇಷೆಗಳನ್ನು ರೂಪಿಸುತ್ತಿದ್ದಾರೆ. ಈಗಷ್ಟೆ ಚೇತರಿಸಿಕೊಂಡಿರುವ ಅವರು ವೈದ್ಯರ ಸಲಹೆ ಮೇರೆಗೆ ಸಂಪೂರ್ಣ ವಿಶ್ರಾಂತಿಯಲ್ಲಿದ್ದಾರೆ. ಶೀಘ್ರದಲ್ಲೆ ಕ್ಯಾಮೆರಾ ಮುಂದೆ ಬರುವುದಾಗಿಯೂ ತಿಳಿಸಿದ್ದಾರೆ.
ರಾಣಾ ಚಿತ್ರದ ಪ್ರತಿಯೊಂದು ಅಂಶಗಳ ಬಗ್ಗೆ ಕೇರ್ ತಗೊಂಡಿದ್ದಾರೆ. ಚಿತ್ರದ ಕತೆಯನ್ನೂ ಅವರೇ ಬರೆದಿರುವುದು ವಿಶೇಷ. ಇನ್ನು ಚಿತ್ರದ ತಾರಾಬಳಗದಲ್ಲಿ ಯಾರಿರಬೇಕು ಎಂಬುದರ ಬಗ್ಗೆಯೂ ಅವರೇ ಕೂತು ಸಲಹೆ ಸೂಚನೆಯಗಳನ್ನು ನೀಡುತ್ತಿದ್ದಾರೆ.
ಚಿತ್ರದ ಪಾತ್ರವರ್ಗದಲ್ಲಿ ಪ್ರಕಾಶ್ ರೈ ಕೂಡ ಚಾನ್ಸ್ ಗಿಟ್ಟಿಸಿದ್ದಾರೆ ಎಂಬುದು ಲೇಟೆಸ್ಟ್ ನ್ಯೂಸ್. ಅವರ ಹೆಸರನ್ನು ಸ್ವತಃ ರಜನಿಕಾಂತ್ ಅವರೇ ಶಿಫಾರಸು ಮಾಡಿದರಂತೆ. ಚಿತ್ರದಲ್ಲಿ ಪ್ರಕಾಶ್ ಅವರದು ಗಮನಾರ್ಹ ಪಾತ್ರವಾಗಿದ್ದು, 'ರಾಣಾ' ಚಿತ್ರಹೊಸ ತಿರುವು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
The latest news on Rajinikanth Rana is Kannada actor Prakash Raj joins the star cast of the movie. Rajinikanth has always high regards for Prakash, the actor and he recommended his name to do a prominent role in Rana.


Click it and Unblock the Notifications











