For Quick Alerts
  ALLOW NOTIFICATIONS  
  For Daily Alerts

  ಖಳನಟನ ಪಾತ್ರಗಳಲ್ಲಿ ಮಿಂಚಿದ್ದೇ ಅಧಿಕ, ಅವಿನಾಶ್

  By Rajendra
  |

  ಇದುವರೆಗೂ ತಾನು ಅಭಿನಯಿಸಿದ 380 ಚಿತ್ರಗಳಲ್ಲಿ ಅಧಿಕವಾಗಿ ಕಾಣಿಸಿಕೊಂಡಿದ್ದು ಖಳನಟನಾಗಿಯೇ ಎಂದು ಪೋಷಕ ನಟ ಅವಿನಾಶ್ ಹೇಳಿದ್ದಾರೆ. ಅವರು ಶ್ರೀರಾಘವೇಂದ್ರ ಸ್ವಾಮಿಗಳ ದರ್ಶನಭಾಗ್ಯ ಪಡೆಯಲು ಮಂತ್ರಾಲಯಕ್ಕೆ ಕುಟುಂಬ ಸಮೇತ ಆಗಮಿಸಿದ್ದರು.

  ಮಠದಲ್ಲಿ ರಾತ್ರಿ ನಡೆದ ಪ್ರಹ್ಲಾದ ರಾಯರ ಚಿನ್ನದ ರಥೋತ್ಸವದಲ್ಲಿ ಪಾಲ್ಗೊಂಡರು. ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇದುವರೆಗೂ ತಾನು ಕನ್ನಡದಲ್ಲಿ 340, ತೆಲುಗಿನಲ್ಲಿ 12, ತಮಿಳಿನಲ್ಲಿ 20 ಚಿತ್ರಗಳಲ್ಲಿ ಅಭಿನಯಿಸಿದ್ದೇನೆ.

  'ಚಂದ್ರಮುಖಿ' (ಆಪ್ತಮಿತ್ರ) ಚಿತ್ರದ ಮೂಲಕ ಮೂರು ಭಾಷೆಗಳಲ್ಲಿ ಜನ ನನ್ನನ್ನು ಗುರುತಿಸುವಂತಾಯಿತು. ಇದುವರೆಗೂ ಹತ್ತಕ್ಕೂ ಹೆಚ್ಚು ಅತ್ಯುತ್ತಮ ನಟ ಪ್ರಶಸ್ತಿಗಳನ್ನು ಬಂದಿರುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಮಠದ ಸಿಆರ್‌ಓ ನರಸಿಂಹ ಶಾಲು ಹೊದಿಸಿ ಫಲ ಮಂತ್ರಾಕ್ಷತೆಗಳನ್ನು ನೀಡಿ ಅವಿನಾಶ್ ಅವರನ್ನು ಗೌರವಿಸಿದರು. (ಏಜೆನ್ಸೀಸ್)

  English summary
  Kannada films charector artist Avinash visits Mantralaya with his family members and offers special pooja to Sri Guru Raghavendra Swamy. Talking to the reporters he said that, among 380 films he played most villains roles.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X