ನಟ ರಜನಿಕಾಂತ್ ಅಭಿಮಾನಿ ಆತ್ಮಹತ್ಯೆಗೆ ಯತ್ನ

By Rajendra

ರಜನಿಕಾಂತ್ ಅಭಿಮಾನಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿ ತನ್ನ ಕಿಡ್ನಿಗಳನ್ನು ದಾನ ಮಾಡಲು ಮುಂದಾದ ಘಟನೆ ಕೊಯಂಬತ್ತೂರಿನಲ್ಲಿ ನಡೆದಿದೆ. ರಾಜ್ ನೀರಜಾ ಅರೋಚಿಯಾಸಾಮಿ (40 ) ಎಂಬಾತನೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ.

ಈತ ಮಿತಿಮೀರಿದ ಪ್ರಮಾಣದಲ್ಲಿ ನಿದ್ರೆ ಮಾತ್ರೆಗಳನ್ನು ಸೇವಿಸಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ. ಇದನ್ನು ಕಂಡ ನೆರೆಹೊರೆಯವರು ಹಾಗೂ ಬಂಧುಗಳು ಈತನನ್ನು ಕೂಡಲೆ ಆಸ್ಪತ್ರೆಗೆ ಸೇರಿಸಿದ್ದಾರೆ. ಚಿಕಿತ್ಸೆ ಬಳಿಕ ಚೇತರಿಸಿಕೊಂಡ ಈತ ತಾನು ಸತ್ತ ಬಳಿಕ ಕಿಡ್ನಿಗಳನ್ನು ರಜನಿಗೆ ದಾನ ಮಾಡಲು ತೀರ್ಮಾನಿಸಿದ್ದಾಗಿ ತಿಳಿಸಿದ್ದಾನೆ.

ಕಿಡ್ನಿ ತೊಂದರೆಯಿಂದ ಬಳಲುತ್ತಿರುವ ಸೂಪರ್ ಸ್ಟಾರ್ ರಜನಿಕಾಂತ್ ಅವರು ಹೆಚ್ಚುವರಿ ಚಿಕಿತ್ಸೆಗಾಗಿ ಸಿಂಗಪುರದ ಮೌಂಟ್ ಎಲಿಜೆಬೆತ್ ಮೆಡಿಕಲ್ ಸೆಂಟರ್‌‍ಗೆ ದಾಖಲಾಗಿರುವುದು ಗೊತ್ತೆ ಇದೆ. ಅವರಿಗೆ ಮೂತ್ರಪಿಂಡ ಕಸಿ ಮಾಡಲಾಗುತ್ತದೆ ಎಂಬ ಸುದ್ದಿ ಇತ್ತು. ಆದರೆ ಈ ಸುದ್ದಿಯನ್ನು ರಜನಿ ಕುಟುಂಬ ಮೂಲಗಳು ನಿರಾಕರಿಸಿವೆ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Rajniraja Arockiasamy (40), a Rajinikanth fan from Coimbatore attempted suicide in a bid to donate his kidney to the matinee idol. He has been admitted to hospital after he reportedly consumed an overdose of sleeping pills. Rajini is undergoing treatment in Mount Elizabeth Medical Centre, Singapore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X